ಅರ್ಚಕ ಹಾಗೂ ಅರ್ಚಕನ ಪುತ್ರನಿಗೆ ಚಪ್ಪಲಿಯಿಂದ ಥಳಿತ!
26/06/2021
ಚಿಕ್ಕಮಗಳೂರು: ಅರ್ಚಕ ಹಾಗೂ ಅರ್ಚಕನ ಪುತ್ರನಿಗೆ ಜಮೀನು ವಿಚಾರದಲ್ಲಿ ನಡೆದ ಗಲಾಟೆಯ ಸಂದರ್ಭ ಚಪ್ಪಲಿಯಲ್ಲಿ ಥಳಿಸಿದ ಘಟನೆ ಜಿಲ್ಲೆಯ ಅಜ್ಜಂಪುರ ತಾಲೂಕಿನ ಗಿಜೆಕಟ್ಟೆ ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಅರ್ಚಕ ಚೆನ್ನಕೇಶವಯ್ಯ ಮತ್ತು ಅವರ ಪುತ್ರ ರಂಗನಾಥ್ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ರಾಜಪ್ಪ, ಶೇಖರಪ್ಪ, ಬಸವರಾಜಪ್ಪ, ನವೀನ್, ಸಿದ್ದರಾಮೇಗೌಡ, ಕುಮಾರ್ ಎಂಬವರು ಅರ್ಚಕನಿಗೆ ಚಪ್ಪಲಿಯಿಂದ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಜಮೀನು ವಿಚಾರದ ಜಗಳ ತಾರಕಕ್ಕೇರಿದ್ದು ವಿಎ ಶಿವಶಂಕರ್ ಅವರ ಸಮ್ಮುಖದಲ್ಲಿಯೇ ಆರೋಪಿಗಳು ಅರ್ಚಕ ಹಾಗೂ ಆತನ ಪುತ್ರನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂದು ದೂರಲಾಗಿದೆ. ಘಟನೆ ಸಂಬಂಧ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.