ಹೆಣ್ಣು ಸಿಗದೆ ಮದುವೆಯಾಗದೇ ಹಾಗೆಯೇ ಉಳಿದಿರುವ ಬ್ರಾಹ್ಮಣ ಅರ್ಚಕ, ಪುರೋಹಿತರಿಗೆ  ಸಿಹಿಸುದ್ದಿ - Mahanayaka
8:21 PM Wednesday 11 - December 2024

ಹೆಣ್ಣು ಸಿಗದೆ ಮದುವೆಯಾಗದೇ ಹಾಗೆಯೇ ಉಳಿದಿರುವ ಬ್ರಾಹ್ಮಣ ಅರ್ಚಕ, ಪುರೋಹಿತರಿಗೆ  ಸಿಹಿಸುದ್ದಿ

05/01/2021

ಬೆಂಗಳೂರು: ಬ್ರಾಹ್ಮಣರಲ್ಲಿ ಅರ್ಚಕ ಹಾಗೂ ಪೌರೋಹಿತ್ಯ ಮಾಡುವ ಯುವಕರನ್ನು ಯುವತಿಯರು ಮದುವೆಯಾಗಲು ಹಿಂದೇಟು ಹಾಕುತ್ತಿದ್ದಾರೆ. ಇದಕ್ಕಾಗಿ ಇದೀಗ ಸರ್ಕಾರ ಅರ್ಚಕರನ್ನು, ಪುರೋಹಿತರನ್ನು ಮದುವೆಯಾಗಲು ಮುಂದಾಗುವ ವಧುಗಳಿಗೆ ಮೂರು ಲಕ್ಷ ರೂಪಾಯಿಗಳ ಬಾಂಡ್ ವಿತರಿಸುವ ಯೋಚನೆಯನ್ನು ರೂಪಿಸಿದೆ.

ಈ ಯೋಜನೆಗೆ 3 ಲಕ್ಷ ರೂಪಾಯಿ ಬಾಂಡ್ ವಿತರಿಸಲಾಗುತ್ತದೆ. ಈ ಯೋಜನೆಗೆ ಬುಧವಾರ(ಜ.6) ಸಿಎಂ ಯಡಿಯೂರಪ್ಪ ಅವರು ಚಾಲನೆ ನೀಡಲಿದ್ದಾರೆ. ಬ್ರಾಹ್ಮಣ ಸಮುದಾಯದಲ್ಲಿ ವಿದ್ಯಾವಂತ ಯುವತಿಯರು ಪೌರೋಹಿತ್ಯ ಮಾಡುವವರನ್ನು ತಿರುಗಿಯೂ ನೋಡುತ್ತಿಲ್ಲ. ಉನ್ನತ ಹುದ್ದೆಯಲ್ಲಿರುವ ಯುವಕರನ್ನು ಮದುವೆಯಾಗಿ ಹಾಯಾಗಿ ಬದುಕುವ ಅವಕಾಶವಿರುವ ಸಂದರ್ಭದಲ್ಲಿ, ಪೂಜೆ ಮಾಡಿಕೊಂಡು ಜೀವನ ನಡೆಸುವ ವರನನ್ನು  ವಿವಾಹವಾಗುತ್ತಿಲ್ಲ. ಅರ್ಚಕರು, ಪುರೋಹಿತರು ಎಂದರೆ ಸಾಕು ಯಾರೂ ಕೂಡ ಹೆಣ್ಣು ಕೊಡಲು ಮುಂದೆ ಬರುತ್ತಿಲ್ಲ, ಜೊತೆಗೆ ಯುವತಿಯರಂತೂ ತಿರುಗಿಯೂ ನೋಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರ ನೊಂದ ಅರ್ಚಕ, ಪುರೋಹಿತರಿಗಾಗಿ ಈ ಯೋಜನೆ ರೂಪಿಸಿದೆ.

 ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಸ್‌.ಎಚ್‌. ಸಚ್ಚಿದಾನಂದ ಅವರು ಈ ಬಗ್ಗೆ ನೀಡಿರುವ ಮಾಹಿತಿಯಂತೆ, ಇದೇ ಮೊದಲ ಬಾರಿಗೆ ‘ಮೈತ್ರಿ’ ಯೋಜನೆಯಡಿ ವಧುಗಳಿಗೆ ಮೂರು ಲಕ್ಷ ರೂಪಾಯಿ ಬಾಂಡ್​ ವಿತರಿಸಲಾಗುತ್ತದೆ. ಅರ್ಚಕರನ್ನು ಮತ್ತು ಪೌರೋಹಿತ್ಯ ಮಾಡುವವರ ಮದುವೆಯಾಗದೇ ಅವಿವಾಹಿತರಾಗಿದ್ದಾರೆ. ಹೆಣ್ಣುಮಕ್ಕಳು ಇಂಥವರನ್ನು ಮದುವೆಯಾಗಲು ಹಿಂಜರಿಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಯೋಜನೆ ರೂಪಿಸಲಾಗಿದೆ ಎಂದು ಹೇಳಿದ್ದಾರೆ.

ಇತ್ತೀಚಿನ ಸುದ್ದಿ