ಅರ್ಚಕರಿಗೆ 6ನೇ ವೇತನ ಕೊಟ್ಟಿದ್ದಾರೆ ನಮಗೆ ಯಾಕೆ ಕೊಡುತ್ತಿಲ್ಲ? | ಸರ್ಕಾರಕ್ಕೆ ಕೆಎಸ್ಸಾರ್ಟಿಸಿ ನೌಕರನ ಪ್ರಶ್ನೆ
07/04/2021
ಉಡುಪಿ: ಸಾರಿಗೆ ನೌಕರರ ಪ್ರತಿಭಟನೆ ಇದ್ದರೂ ತನ್ನನ್ನು ಬಲವಂತವಾಗಿ ಕೆಲಸ ಮಾಡುವಂತೆ ಕೆಎಸ್ಸಾರ್ಟಿಸಿ ಮ್ಯಾನೇಜರ್ ಲಾಕ್ ಮಾಡಿದ್ದಾರೆ ಎಂದು ಕೆಎಸ್ಸಾರ್ಟಿಸಿ ಮೆಕ್ಯಾನಿಕ್ ವೋರ್ವ ಆರೋಪಿಸಿದ್ದಾರೆ.
ನನಗೆ ಕೆಎಸ್ಸಾರ್ಟಿಸಿ ಬಿಟ್ಟರೆ ಬೇರೆ ಗತಿ ಇಲ್ಲ. ಹಾಗಾಗಿ ನಾನು ಭಯಬಿದ್ದು ನಿಂತಿದ್ದೇನೆ. ಇಲ್ಲಿ ಯಾರು ಕೂಡ ಕೆಲಸ ಮಾಡುತ್ತಿಲ್ಲ. ಆದರೆ ನನ್ನನ್ನು ಭಯಗೊಳಿಸಿ ಇಲ್ಲಿ ಕೆಲಸ ಮಾಡುವಂತೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
ನನಗೆ ಸಂಬಳ ಸಿಕ್ಕಿಲ್ಲ. ಕೇವಲ 40 ರೂಪಾಯಿ ಇಟ್ಟುಕೊಂಡು ನಾನು ಓಡಾಡುತ್ತಿದ್ದೇನೆ. ಅರ್ಚಕರಿಗೆ 6ನೇ ವೇತನ ಕೊಟ್ಟಿದ್ದಾರೆ. ಆದರೆ ಕೆಎಸ್ಸಾರ್ಟಿಸಿಗೆ ಯಾಕೆ ಕೊಡುತ್ತಿಲ್ಲ? ಎಲ್ಲ ಜಾತಿ ಸರ್… ಎಂದ ಮೆಕ್ಯಾನಿಕ್, ರಾಜಕಾರಣಿಗಳ ಜಾತಿ ರಾಜಕಾರಣದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.