ಅರ್ಚಕರಿಗೆ ಮತ್ತೊಂದು ಸಿಹಿ ಸುದ್ದಿ | 3 ತಿಂಗಳ ಮುಂಗಡ ಸಂಬಳ ಬಿಡುಗಡೆ
ಬೆಂಗಳೂರು: ರಾಜ್ಯದ ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿನ ದೇವಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅರ್ಚಕರಿಗೆ ರಾಜ್ಯ ಸರ್ಕಾರವು ಶುಭ ಸುದ್ದಿಯನ್ನು ನೀಡಿದ್ದು, ಕೊರೊನಾದಿಂದ ಅರ್ಚಕರ ಕುಟುಂಬಗಳು ಕಷ್ಟಪಡಬಾರದು ಎನ್ನುವ ನಿಟ್ಟಿನಲ್ಲಿ ಸರ್ಕಾರ ಅರ್ಚಕರ ಕುಟುಂಬಗಳ ನೆರವಿಗೆ ಬಂದಿದೆ.
ಸರ್ಕಾರದ ಅದೀನದಲ್ಲಿರುವ 27 ಸಾವಿರ ದೇವಾಲಯಗಳಲ್ಲಿನ ಅರ್ಚಕರ 3 ತಿಂಗಳ ಮುಂಗಡ ಹಣ ಬಿಡುಗಡೆ ಮಾಡಲು ಸರ್ಕಾರ ನಿರ್ಧರಿಸಿದ್ದು, ಈ ಬಗ್ಗೆ ಮುಜರಾತಿ ಇಲಾಖೆ ಸಚಿವ ಶ್ರೀನಿವಾಸ್ ಪೂಜಾರಿ ಅಧಿಕೃತ ಆದೇಶವನ್ನು ನೀಡಿದ್ದಾರೆ.
ಬ್ರಾಹ್ಮಣರ ನಿಗಮದ ಕೇವಲ ಒಂದು ಮನವಿಗೆ ಸ್ಪಂದಿಸಿರುವ ಸರ್ಕಾರ, ಕೊರೊನಾ ಸಂದರ್ಭದಲ್ಲಿ ಅರ್ಚಕರ ಕುಟುಂಬ ಹಸಿವಿನಿಂದ ಕಷ್ಟಪಡಬಾರದು ಎನ್ನುವ ಕಾರಣಕ್ಕೆ ನಿನ್ನೆ ಅರ್ಚಕರ ಕುಟುಂಬಕ್ಕೆ ಆಹಾರದ ಕಿಟ್ ಗಳನ್ನು ವಿತರಿಸುವ ಬಗ್ಗೆ ಸೂಚನೆ ನೀಡಿತ್ತು.
ಇನ್ನೂ ರಾಜ್ಯದಲ್ಲಿ ದುಡಿದು ಬದುಕುವ ಶ್ರಮಿಕ ವರ್ಗಗಳಿಗೆ ಸರ್ಕಾರದ ಯಾವುದೇ ಸಹಕಾರಗಳು ಇನ್ನೂ ದೊರೆತಿಲ್ಲ. ಕೂಲಿ ಕಾರ್ಮಿಕರಿಗೆ ಕೆಲಸ ಇಲ್ಲ. ಸರ್ಕಾರ ಕೇವಲ ಪಡಿತರ ವ್ಯವಸ್ಥೆ ಮಾಡಿದೆ. ಕೂಲಿ ಕಾರ್ಮಿಕರ ಕುಟುಂಬಗಳನ್ನು ರಾಜ್ಯದಲ್ಲಿ ಯಾರೂ ಕೇಳುವಂತಹ ಸ್ಥಿತಿಯಲ್ಲಿಲ್ಲ. ಸರ್ಕಾರದಿಂದ ಬಿಟ್ಟಿಯಾಗಿ ಹಣ ಕೊಡಿ ಎಂದು ಕಾರ್ಮಿಕರು ಕೇಳುತ್ತಿಲ್ಲ. ದುಡಿಯಲು ಅವಕಾಶ ನೀಡಿ ಎಂದು ಕೇಳುತ್ತಿದ್ದಾರೆ. ಈ ಬೇಡಿಕೆಗಳಿಗೆ ಇನ್ನೂ ಸರ್ಕಾರ ಸ್ಪಂದಿಸಿಲ್ಲ.