ಅರ್ಚಕರಿಗೆ ಸಿಹಿ ಸುದ್ದಿ ನೀಡಿದ ಸಚಿವೆ ಶಶಿಕಲಾ ಜೊಲ್ಲೆ! - Mahanayaka
2:17 PM Friday 20 - September 2024

ಅರ್ಚಕರಿಗೆ ಸಿಹಿ ಸುದ್ದಿ ನೀಡಿದ ಸಚಿವೆ ಶಶಿಕಲಾ ಜೊಲ್ಲೆ!

shashikala jolle
23/12/2021

ಬೆಳಗಾವಿ: ದೇವಾಲಯದ ಅರ್ಚಕರ ಸಂಬಳ ಹೆಚ್ಚು ಮಾಡಲು ಕ್ರಮಕೈಗೊಳ್ಳಲಾಗುವುದು ಎಂದು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದು, ಅರ್ಚಕರಿಗೆ ಸಿಹಿ ಸುದ್ದಿ ನೀಡಿದ್ದಾರೆ.

ಬುಧವಾರ ಬೆಳಗಾವಿ ವಿಧಾನ ಸೌಧದಲ್ಲಿ ಪರಿಷತ್ ನ ಕಲಾಪದಲ್ಲಿ ಸದಸ್ಯೆ ತೇಜಸ್ವಿನಿ ಗೌಡ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿ ಮಾತನಾಡಿದ ಅವರು, ಪ್ರತಿ ತಿಂಗಳೂ ನಾಲ್ಕು ಸಾವಿರದಂತೆ, ವಾರ್ಷಿಕವಾಗಿ 48 ಸಾವಿರ ರೂಪಾಯಿಗಳ ಸ್ವಸ್ತಿಕ್ ಹಣವನ್ನು ನೀಡಲಾಗುತ್ತಿದೆ ಎಂದರು.

ಅರ್ಚಕರ ವೇತನ ಹೆಚ್ಚಿಸಬೇಕು ಎಂದು ಈಗಾಗಲೇ ಅನೇಕ ಸಂಘಟನಗಳಿಂದ ಮನವಿ ಬಂದಿದೆ.  ಈ ಬಗ್ಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದ ಅವರು, ಎ, ಬಿ ಮತ್ತು ಸಿ ಎಂದು ದೇವಾಲಯಗಳ ಆದಾಯ ವರ್ಗ ಮಾಡಲಾಗಿದೆ. ಎ, ಬಿ ದರ್ಜೆಯ ದೇವಸ್ಥಾನಗಳ ಆದಾಯ ಹೆಚ್ಚಿರುವುದರಿಂದ ಅವುಗಳ ನಿರ್ವಹಣೆ, ಅಭಿವೃದ್ಧಿಗೆ ತೊಂದರೆ ಇಲ್ಲ ಆದರೆ, ರಾಜ್ಯದಲ್ಲಿ 34,219 ಸಿ ದರ್ಜೆಯ ದೇವಸ್ಥಾನ ಅಭಿವೃದ್ಧಿ ಕಷ್ಟಕರವಾಗಿದೆ. ಹಾಗಾಗಿ ಭಕ್ತರಿಂದ ಸಹಾಯ ಪಡೆಯುವ ಅಭಿಯಾನ ಪ್ರಾರಂಭಿಸಲು ನಿರ್ಧರಿಸುತ್ತೇವೆ ಎಂದರು.


Provided by

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DbJM9kayC1K4utc3ntXPdh

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಮಂಗಳೂರು: ಮೀನುಗಾರನನ್ನು ತಲೆಕೆಳಗಾಗಿಸಿ ನೇತುಹಾಕಿ ದೌರ್ಜನ್ಯ: ವಿಡಿಯೋ ವೈರಲ್

ಬಿಜೆಪಿ ಆಡಳಿತದಲ್ಲಿ ಮಾತ್ರ ಹಿಂದೂಗಳ ಹಬ್ಬ ಆಚರಿಸಲು ಸಾಧ್ಯವಾಗುತ್ತದೆ | ಯೋಗಿ ಆದಿತ್ಯನಾಥ್

ಕಾನದ-ಕಟದರ ಬಾಲ್ಯ: ತುಳುನಾಡಿನ ಅವಳಿ ವೀರರು ಕಾನದ-ಕಟದರು | ಸಂಚಿಕೆ: 11

ಮತಾಂತರ ನಿಷೇಧ ಕಾಯ್ದೆಗೆ ಕಾಂಗ್ರೆಸ್ ಹಿಂದಿನಿಂದ ಕಾಯ್ದೆಗೆ ಬೆಂಬಲ‌ ನೀಡುತ್ತಿದೆ | ಬಿಜೆಪಿ ಶಾಸಕ ಯತ್ನಾಳ್

ಹೇಗೆಂದರೆ ಹಾಗೆ ಬದುಕಲು ನಮ್ಮ ದೇಶ ಧರ್ಮಛತ್ರವಲ್ಲ: ಮತಾಂತರ ಕುರಿತು ಆರಗ ಜ್ಞಾನೇಂದ್ರ ಹೇಳಿಕೆ

ಮತಾಂತರ ನಿಷೇಧ ಕಾಯ್ದೆಯ ದುರ್ಬಳಕೆಯ ಸಾಧ್ಯತೆ ಹೆಚ್ಚಿದೆ: ಕ್ರೈಸ್ತ ಧರ್ಮಾಧಿಕಾರಿ ಡಾ.ಕೆ.ಎ.ವಿಲಿಯಂ

ಇತ್ತೀಚಿನ ಸುದ್ದಿ