ಅರಿವಳಿಕೆ ಮದ್ದು ಚುಚ್ಚಿಕೊಂಡು ವೈದ್ಯ ಆತ್ಮಹತ್ಯೆ| ಆಸ್ಪತ್ರೆಯೊಳಗಿನ ಜಾತೀಯತೆಯಿಂದ ನೊಂದರೇ ಡಾ.ಭೀಮ್ ಸಂದೇಶ್ ತುಪೆ? - Mahanayaka
10:39 PM Wednesday 5 - February 2025

ಅರಿವಳಿಕೆ ಮದ್ದು ಚುಚ್ಚಿಕೊಂಡು ವೈದ್ಯ ಆತ್ಮಹತ್ಯೆ| ಆಸ್ಪತ್ರೆಯೊಳಗಿನ ಜಾತೀಯತೆಯಿಂದ ನೊಂದರೇ ಡಾ.ಭೀಮ್ ಸಂದೇಶ್ ತುಪೆ?

18/02/2021

ನವದೆಹಲಿ: ವೈದ್ಯರೊಬ್ಬರು ಹೈಡೋಸ್ ಅರಿವಳಿಕೆ ಮದ್ದನ್ನು ಸ್ವತಃ ಚುಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದ್ದು, ಘಟನೆ ನಡೆದ ತಕ್ಷಣವೇ ಇವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅದಾಗಲೇ ಅವರು ಮೃತಟ್ಟಿದ್ದಾರೆ.

ಮುಂಬೈಯಲ್ಲಿನ ನಾಯರ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. 26 ವರ್ಷ ವಯಸ್ಸಿನ ವೈದ್ಯ ಭೀಮ್ ಸಂದೇಶ್ ತುಪೆ ಆತ್ಮಹತ್ಯೆ ಮಾಡಿಕೊಂಡವರಾಗಿದ್ದಾರೆ. ಇವರು  ರೆಸಿಡೆಂಟ್ ಡಾಕ್ಟರ್ ಆಗಿದ್ದಾರೆ. ಇದಲ್ಲದೇ  ಅನಸ್ತೇಷಿಯಾ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯ ಪ್ರಥಮ ವರ್ಷದ ವಿದ್ಯಾರ್ಥಿ ಕೂಡ ಆಗಿದ್ದರು.

ಔರಂಗಾಬಾದ್ ನಲ್ಲಿರುವ ತನ್ನ ತಂದೆ ಅಸ್ವಸ್ಥರಾದ ಹಿನ್ನೆಲೆಯಲ್ಲಿ ಅವರನ್ನು ನೋಡಲು ಹೋಗಿದ್ದ ತುಪೆ ಅಲ್ಲಿಂದ ಮರಳಿದ ದಿನವೇ  ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿಗದಿತ ಔಷಧಿಯನ್ನು ಚುಚ್ಚಿಕೊಂಡು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮುಂಬೈ ಅಗ್ರಿಪದ ಪೊಲೀಸರು ತಿಳಿಸಿದ್ದಾರೆ.

ಆಸ್ಪತ್ರೆಯಲ್ಲಿ ಕೆಲವು ಸರ್ಜರಿಗಳನ್ನು ನಡೆಸಿದ್ದ ಡಾಕ್ಟರ್ ಬಳಿಕ ಹಾಸ್ಟೆಲ್ ಗೆ ತೆರಳಿ ಅಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಸ್ಪತ್ರೆ ಸಿಬ್ಬಂದಿ ರೂಮ್ ಗೆ ಬಂದಾಗ ತುಪೆ ಮೂರ್ಛೆ ಹೋಗಿರುವುದು ತಿಳಿದು ಬಂದಿದೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಮೃತಪಟ್ಟಿದ್ದಾರೆ.

ಇದೇ ಆಸ್ಪತ್ರೆಯಲ್ಲಿ  ಎರಡು ವರ್ಷಗಳ ಹಿಂದೆ ಡಾ.ಪಾಯಲ್ ತಡ್ವಿ ಎಂಬ ವೈದ್ಯರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಆಸ್ಪತ್ರೆಯೊಳಗಿನ ಜಾತೀಯತೆಯಿಂದ ನೊಂದು ಅವರು ಕೂಡ ಆತ್ಮಹತ್ಯೆಗೆ ಶರಣಾಗಿದ್ದರು ಎಂದು ತಿಳಿದು ಬಂದಿದೆ.

ಇತ್ತೀಚಿನ ಸುದ್ದಿ