ಮನೆಯಿಂದಲೇ ಭಾರತೀಯ ಸೇನಾಧಿಕಾರಿಯ ಅಪಹರಣ: 9 ಗಂಟೆಗಳ ನಂತರ ಅಪಹರಣ ಪ್ರಕರಣ ಸುಖಾಂತ್ಯ
ಮಣಿಪುರದ ತೌಬಾಲ್ ಜಿಲ್ಲೆಯ ಮನೆಯಿಂದ ಶುಕ್ರವಾರ ಅಪಹರಣಕ್ಕೊಳಗಾದ ಭಾರತೀಯ ಸೇನೆಯ ಜೂನಿಯರ್ ಕಮಿಷನ್ಡ್ ಆಫೀಸರ್ (ಜೆಸಿಒ) ಅವರನ್ನು ಒಂಬತ್ತು ಗಂಟೆಗಳ ನಂತರ ರಕ್ಷಿಸಲಾಗಿದೆ. ಅಧಿಕಾರಿಗಳ ಪ್ರಕಾರ, ಕೆಲವು ಜನರು ಬೆಳಿಗ್ಗೆ 9 ಗಂಟೆ ಸುಮಾರಿಗೆ ಚರಂಗ್ಪತ್ ಮಾಮಾಂಗ್ ಲೀಕೈನಲ್ಲಿರುವ ಜೆಸಿಒ ಕೊನ್ಸಾಮ್ ಖೇಡಾ ಸಿಂಗ್ ಅವರ ಮನೆಗೆ ನುಗ್ಗಿ ಅವರನ್ನು ಅಪಹರಿಸಿದ್ದಾರೆ.
ಅಪರಿಚಿತ ದಾಳಿಕೋರರು ಖೇಡಾ ಸಿಂಗ್ ಅವರನ್ನು ವಾಹನದೊಳಗೆ ಇರಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ.
ನಂತರ ಸಂಜೆ ೬.೩೦ ರ ಸುಮಾರಿಗೆ ಭದ್ರತಾ ಪಡೆಗಳು ಅವರನ್ನು ರಕ್ಷಿಸಲಾಗಿದೆ. ಅವರನ್ನು ರಕ್ಷಿಸಿದ ನಂತರ ಜೆಸಿಒ ಅವರನ್ನು ತೌಬಲ್ ಜಿಲ್ಲೆಯ ವೈಖೋಂಗ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು.
ಅಧಿಕಾರಿಗಳ ಪ್ರಕಾರ ಖೇಡಾ ಸಿಂಗ್ ಅವರ ಅಪಹರಣಕಾರರು ಅವರಿಂದ ಹಣವನ್ನು ಸುಲಿಗೆ ಮಾಡಲು ಬಯಸಿದ್ದರು ಎಂದು ಆರಂಭಿಕ ವರದಿಗಳು ಸೂಚಿಸುತ್ತವೆ. ಯಾಕೆಂದರೆ ಅವರ ಕುಟುಂಬವು ಈ ಹಿಂದೆ ಇಂತಹ ಬೆದರಿಕೆಗಳನ್ನು ಸ್ವೀಕರಿಸಿದ್ದವು.
ಅಪಹರಣವಾದ ಕೂಡಲೇ ಜೆಸಿಒ ಖೇಡಾ ಸಿಂಗ್ ಅವರನ್ನು ರಕ್ಷಿಸಲು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು ಮತ್ತು ರಾಷ್ಟ್ರೀಯ ಹೆದ್ದಾರಿ 102 ರಲ್ಲಿನ ಎಲ್ಲಾ ವಾಹನಗಳನ್ನು ಪರಿಶೀಲಿಸಲಾಯಿತು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth