ರಾಜರ ಕಾಲದಲ್ಲಿ ಇದ್ದ "ಆರೋಗ್ಯವೇ ಭಾಗ್ಯ" ಎಂಬುದು ಸ್ವಾತಂತ್ರ್ಯ ಸಿಕ್ಕಿ ರಾಜಕಾರಣಿಗಳ ಕೈಯಲ್ಲಿ "ಆರೋಗ್ಯವೇ ವ್ಯಾಪಾರ" ಆಗಿದೆಯೇ? - Mahanayaka
9:32 AM Wednesday 13 - November 2024

ರಾಜರ ಕಾಲದಲ್ಲಿ ಇದ್ದ “ಆರೋಗ್ಯವೇ ಭಾಗ್ಯ” ಎಂಬುದು ಸ್ವಾತಂತ್ರ್ಯ ಸಿಕ್ಕಿ ರಾಜಕಾರಣಿಗಳ ಕೈಯಲ್ಲಿ “ಆರೋಗ್ಯವೇ ವ್ಯಾಪಾರ” ಆಗಿದೆಯೇ?

deepu shettigar
04/01/2022

  • ದೀಪು ಶೆಟ್ಟಿಗಾರ್,  ಮಂಗಳೂರು

ಕಲಿಯುಗದಲ್ಲಿ ವೈದ್ಯರನ್ನು ದೇವರು ಎಂದು ಕರೆಯುತ್ತಾರೆ, ಯಾಕೆಂದರೆ ರಾಕ್ಷಸ ರೂಪದಲ್ಲಿರುವ ರೋಗವನ್ನು ದೇವರ ರೂಪದಲ್ಲಿ ನಿಂತು ನಾಶಮಾಡುವ ಶಕ್ತಿ ಇರುವುದು ವೈದ್ಯರಿಗೆ. ರೋಗ ಎಂಬುದು ವೈದ್ಯಕೀಯ ಲೋಕವನ್ನು ನೋಡಿ ಭಯಪಡುವಂತಿರಬೇಕು ಹೊರತು ಬಡವನ ಜೇಬಿಗೆ ಕತ್ತರಿ ಹಾಕಿ ಅವನನ್ನು ಜೀವಂತ ಸಮಾಧಿ ಮಾಡುವಂತಿರಬಾರದು.

ರಾಜರ ಕಾಲದಲ್ಲಿ ಆರೋಗ್ಯದ ವಿಷಯ ಬಂದಾಗ ಉಚಿತವಾಗಿ ಮದ್ದು ಕೊಡುವಂತಹ ಅನೇಕ ವೈದ್ಯರಿದ್ದರು. ಆದರೆ ಇತ್ತೀಚೆಗೆ ವೈದ್ಯಕೀಯ ಎಂಬುದು ಅನೇಕ ಕಡೆಗಳಲ್ಲಿ ವ್ಯಾಪಾರವಾಗಿ ಬಡವರ ರಕ್ತಹೀರಿ ತಾಂಡವವಾಡುತ್ತಿದೆ.

ಯಾವಾಗ ಆಸ್ಪತ್ರೆಗಳು ರಾಜಕಾರಣಿಗಳ ವ್ಯಾಪಾರಸ್ಥರ ಕೈ ಅಡಿಗೆ ಬಂತು ಆ ದಿನದಿಂದ ವ್ಯಾಪಾರ ಕೇಂದ್ರಗಳಾಗಿ ಬದಲಾಯಿತು.ತಲೆಯಲ್ಲಿ ಜ್ಞಾನ ಇದ್ದವನಿಗೆ ಸಿಗಬೇಕಾದಂತಹ ಮೆಡಿಕಲ್ ಸೀಟುಗಳು ಹಲವಾರು ಕಡೆಗಳಲ್ಲಿ ಖಾತೆಯಲ್ಲಿ ಅಪಾರ ದುಡ್ಡು ಇರುವವರಿಗೆ ಸಿಗಲಿಕ್ಕೆ ಪ್ರಾರಂಭವಾಯಿತು.

ಈ ರೀತಿ ಕೋಟಿಗಟ್ಟಲೆ ಖರ್ಚು ಮಾಡಿದವರ ಮನಸ್ಸಲ್ಲಿ ವೈದ್ಯಕೀಯ ಎಂಬುದು ಸೇವೆಯೆಂದು ಬರಲು ಸಾಧ್ಯವೇ? ಕೋಟಿಗಟ್ಟಲೆ ಖರ್ಚು ಮಾಡಿದವರು ಕೊನೆಗೆ ತಮ್ಮ ಬಂಡವಾಳವನ್ನು ಹಿಂದೆಗೆಯಲು ಏನು ಮಾಡುತ್ತಾರೆ?




ಸರಕಾರ ಯಾವಾಗ ಜನರಿಗೆ ವೈದ್ಯಕೀಯ ಸೇವೆ ಮತ್ತು ಪ್ರತಿಭಾವಂತರಿಗೆ ವೈದ್ಯಕೀಯ ಶಿಕ್ಷಣ ಉಚಿತವಾಗಿ ಮಾಡುತ್ತದೆಯೋ ಇದರ ಜೊತೆಗೆ ಎಲ್ಲಾ ಆಸ್ಪತ್ರೆಗಳನ್ನು ತಮ್ಮ ಸುಪರ್ದಿಗೆ ತೆಗೆದುಕೊಳ್ಳುತ್ತದೆಯೋ  ಅಲ್ಲಿಯವರೆಗೆ ಬಡವರ ರಕ್ತ ಹೀರುತ್ತಿರುವ ಕೆಲವು ಖಾಸಗಿ ಆಸ್ಪತ್ರೆಗಳನ್ನು ಕಂಟ್ರೋಲ್ ಗೆ ತರಲು ಸಾಧ್ಯವಿಲ್ಲ.

ಪ್ರತಿಭಾನ್ವಿತರಿಗೆ ಅವಕಾಶಗಳು ಸಿಕ್ಕಾಗ ವೈದ್ಯಕೀಯದಲ್ಲಿ ಸಂಶೋಧನೆಗಳು ಯಶಸ್ವಿಯಾಗಿ ನಡೆಯುತ್ತದೆ. ಯಾವಾಗ ದುಡ್ಡಿದ್ದವರಿಗೆ ಸೀಟುಗಳು ಮಾರಾಟವಾಗುತ್ತದೆಯೋ ಆಗ ರೋಗಗಳ ವಿರುದ್ಧ ನಡೆಯಬೇಕಾದ ಸಂಶೋಧನೆಗಳು ರೋಗದಿಂದ ದುಡ್ಡುಮಾಡುವ ಕಡೆಗೆ ವಾಲುತ್ತದೆ.

ವೈದ್ಯಕೀಯ ವ್ಯಾಪಾರ ವಾದದ್ದನ್ನು ಕೇಳಬೇಕಾದ ರಾಜಕಾರಣಿಗಳು ಕೆಲವು ಆಸ್ಪತ್ರೆಗಳು ಬಡವರ ರಕ್ತ ಹಿರಿ ಸಂಗ್ರಹಿಸಿ ಕೊಡುವಂತಹ ಕೋಟಿಗಟ್ಟಲೆ ಹಣವನ್ನು ತಿಂದು ತೇಗಿ ಮೌನವಾಗಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಸಚಿವ ಮತ್ತು ಸಚಿವರ ಪತ್ನಿಯ ಕಾಲಿಗೆ ನಮಸ್ಕರಿಸಿದ ಐಎಎಸ್ ಅಧಿಕಾರಿ!

ಅಪ್ರಾಪ್ತ ದಲಿತ ಬಾಲಕಿಯ ಮೇಲೆ ಮಾರಣಾಂತಿಕ ಹಲ್ಲೆ: ಬೆಚ್ಚಿ ಬೀಳಿಸುತ್ತೆ ವಿಡಿಯೋ

ಬೇರೊಬ್ಬನನ್ನು ನೋಡಿದಳು ಎಂದು ಹುಡುಗಿಯನ್ನು ಕೊಂದ ಪಾಪಿ!

ಪ್ರೀತಿಸಿ ವಂಚನೆ: ಕನಕಗಿರಿ ಶಾಸಕರ ವಿರುದ್ಧ ಗಂಭೀರ ಆರೋಪ!

ಫೇಸ್ ಬುಕ್ ನಲ್ಲಿ ಪರಿಚಯ: 15 ವರ್ಷದ ಬಾಲಕನನ್ನು ಮದುವೆಯಾದ 22ರ ಯುವತಿ

ಇತ್ತೀಚಿನ ಸುದ್ದಿ