ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ: ಹರೀಶ್ ರಾವತ್
ಡೆಹ್ರಾಡೂನ್: ರಾಜ್ಯದಲ್ಲಿ ಮುಸ್ಲಿಂ ವಿಶ್ವವಿದ್ಯಾಲಯ ಸ್ಥಾಪನೆ ಕುರಿತು ಹೇಳಿಕೆ ನೀಡಿರುವುದು ನಿಜವಾದರೆ ರಾಜಕೀಯದಿಂದ ನಿವೃತ್ತಿ ಹೊಂದುತ್ತೇನೆ ಎಂದು ಉತ್ತರಖಂಡದ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಹಾಗೂ ಕೆಲ ಕಾಂಗ್ರೆಸ್ ನಾಯಕರು ತಮ್ಮ ಹೆಸರಿಗೆ ಕಳಂಕ ತರಲು ಯತ್ನಿಸುತ್ತಿದ್ದಾರೆ. ಬಿಜೆಪಿ ಬೆಂಬಲಿಗರ ಹೊರತಾಗಿಯೂ, ನಮ್ಮ ಪಕ್ಷದ ನಾಯಕರೊಬ್ಬರಿಗೆ ಸಂಬಂಧಿಸಿದ ಕೆಲವರು ನನ್ನ ವಿರುದ್ಧ ಆರೋಪ ಹೊರೆಸುತ್ತಿದ್ದಾರೆ ಎಂದು ಆರೋಪಿಸಿದರು.
ಮುಸ್ಲಿಂ ವಿಶ್ವವಿದ್ಯಾನಿಲಯ ಸ್ಥಾಪನೆಯ ಹೇಳಿಕೆಯನ್ನು ನಾನೇ ಮಾಡಿದ್ದೇನೆ ಎಂಬುದು ಸಾಬೀತಾದ ದಿನ, ನಾನು ಮಹಾತ್ಮ ಗಾಂಧಿಯವರ ಪ್ರತಿಮೆಯ ಕೆಳಗೆ ಕುಳಿತು ರಾಜಕೀಯದಿಂದ ನಿವೃತ್ತಿ ಹೊಂದುತ್ತೇನೆ ಎಂದು ಅವರು, ಸಾಮಾಜಿಕ ಜಾಲತಾಣಗಳ ಮೂಲಕ ತನ್ನ ಬಗ್ಗೆ ಈ ಸುಳ್ಳನ್ನು ಹರಡಲು ಕಾರಣರಾದವರನ್ನು ಬಯಲಿಗೆಳೆಯಲು ಬಯಸುತ್ತೇನೆ ಎಂದು ಕಿಡಿಕಾರಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
25 ವರ್ಷದ ಯುವತಿಯನ್ನು ವಿವಾಹವಾಗಿ ಸುದ್ದಿಯಲ್ಲಿದ್ದ ಶಂಕರಣ ಆತ್ಮಹತ್ಯೆಗ ಶರಣು
ಬೈಕ್, ಕಾರು ನಡುವೆ ಅಪಘಾತ: ತಾಯಿ ಮಗನಿಗೆ ಗಂಭೀರ ಗಾಯ