ಸಾಮೂಹಿಕ ಅತ್ಯಾಚಾರ ಪ್ರಕರಣ: ಆರೋಪಿಗಳ ಬಂಧನಕ್ಕೆ ಪೊಲೀಸರಿಗೆ ಸಹಕಾರವಾದ ಅಂಶಗಳೇನು?
ಮೈಸೂರು: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಕರ್ನಾಟಕ ಪೊಲೀಸರು ಬಂಧಿಸಿದ ರೀತಿಯೇ ರೋಚಕವಾಗಿತ್ತು. ಆರೋಪಿಗಳ ವಿರುದ್ಧ ಪ್ರಬಲ ಸುಳಿವುಗಳು ಸಂತ್ರಸ್ತರಿಂದಲೂ ಸಿಗದೇ ಇದ್ದಂತಹ ಸಂದರ್ಭದಲ್ಲಿಯೂ ಸಣ್ಣ ಸುಳಿವುಗಳನ್ನೇ ಹಿಂಬಾಲಿಸಿ ಹೋದ ಪೊಲೀಸರು ಅತ್ಯಾಚಾರಿಗಳ ಹೆಡೆಮುರಿಕಟ್ಟಿದ್ದಾರೆ.
ಘಟನೆ ನಡೆದ ಸ್ಥಳವನ್ನು ಪೊಲೀಸರು ಜಾಲಾಡಿದಾಗ ಅಲ್ಲಿ ಅವರಿಗೆ ಬಸ್ ಟಿಕೆಟ್ ವೊಂದು ಸಿಗುತ್ತದೆ. ಆ ಬಸ್ ಟಿಕೆಟ್ ಈರೋಡ್ ಜಿಲ್ಲೆಯ ತಾಳವಾಡಿಯಿಂದ ಆರೋಪಿಗಳು ಬಂದಿದ್ದಾರೆ ಎನ್ನುವ ಸುಳಿವನ್ನು ನೀಡಿತ್ತು. ಈ ಆಧಾರ ಪೊಲೀಸರಿಗೆ ಆರೋಪಿಗಳ ಮೂಲ ತಿಳಿಯಲು ಸಹಕಾರವಾಯಿತು.
ಇನ್ನೂ ಟವರ್ ಡೀಟೈಲ್ಸ್ ನೀಡಿದ್ದ ಪೊಲೀಸರ ಟೆಕ್ನಿಕಲ್ ಟೀಮ್ ಪೊಲೀಸರು ಆರೋಪಿಗಳ ಮೊಬೈಲ್ ನಂಬರ್ ಬೆನ್ನು ಹತ್ತಿದ್ದರು. ಇದರ ಮೂಲಕ ಬಾಳೆ ಮಂಡಿಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿಯ ಮೊಬೈಲ್ ನಂಬರ್ ಪತ್ತೆಯಾಗಿತ್ತು. ಆರೋಪಿಯ ಮೊಬೈಲ್ ನಂಬರ್ ಪತ್ತೆಯಿಂದ ಕೇಸ್ ಗೆ ಟ್ವಿಸ್ಟ್ ಸಿಕ್ಕಿತ್ತು. ಎರಡೂ ಕಡೆಗಳಲ್ಲ ಮೊಬೈಲ್ ಟವರ್ ಟಂಪ್ ನಡೆದಿತ್ತು. ಎರಡೂ ಕಡೆಯಲ್ಲಿಯೂ ಒಂದೇ ಸಿಮಿಲರ್ ನಂಬರ್ ಆಗಿತ್ತು.
ಎಸಿಪಿ ಶಿವಶಂಕರ್, ಪೊಲೀಸ್ ಇನ್ಸ್ ಪೆಕ್ಟರ್ ಶ್ರೀಕಾಂತ್, ಪೊಲೀಸ್ ಇನ್ಸ್ ಪೆಕ್ಟರ್ ಗಳಾದ ಮಹದೇವಸ್ವಾಮಿ, ಪ್ರಕಾಶ್, ಅಜರುದ್ದೀನ್, ಜಯಪ್ರಕಾಶ್, ಎಎಸ್ ಐಗಳಾದ ಅನಿಲ್, ಅಲೆಕ್ಸ್, ಹೆಡ್ ಕಾನ್ಸ್ ಟೇಬಲ್ ಗಳಾದ ರಮೇಶ್, ಜೀವನ್, ಕಾಂತರಾಜ್, ಭಗತ್, ಶರೀಫ್, ಮಹದೇವ್, ರಾಜು, ಕಾನ್ಸ್ ಟೇಬಲ್ ಗಳಾದ ಗಿರೀಶ್, ಸಾಗರ್, ಮಂಜುನಾಥ್, ಕಿಶೋರ್, ಲತೀಫ್, ಮಂಜು ಮೊದಲಾದವರು ಆರೋಪಿಗಳ ಬಂಧನ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು ಎಂದು ವರದಿಯಾಗಿದೆ.
ಇನ್ನಷ್ಟು ಸುದ್ದಿಗಳು…
ದೇವಸ್ಥಾನದ ಆವರಣದಲ್ಲಿ ಟಿಕ್ ಟಾಕ್ ವಿಡಿಯೋ ಮಾಡಿದಕ್ಕೆ ವಿರೋಧ | ಪೊಲೀಸರಿಗೆ ದೂರು
ದೇಶದಿಂದಲೇ ಬಿಜೆಪಿಯನ್ನು ಕಿತ್ತೊಗೆಯುತ್ತೇವೆ | ತಾಕತ್ ಇದ್ದರೆ ಟಿಎಂಸಿಯನ್ನು ತಡೆಯಿರಿ | ಅಭಿಷೇಕ್ ಬ್ಯಾನರ್ಜಿ ಸವಾಲು
ಪ್ರೇಯಸಿಯ ತಂದೆಯನ್ನೇ ಕೊಂದಿದ್ದವ ಮೈಸೂರು ವಿದ್ಯಾರ್ಥಿನಿಯ ಅತ್ಯಾಚಾರ ಪ್ರಕರಣ ಆರೋಪಿಗಳಲ್ಲಿ ಓರ್ವ!
ಬಿಜೆಪಿಯ ಕೋಟ್ಯಾಧಿಪತಿ ಸ್ನೇಹಿತರ ಲಾಭಕ್ಕಾಗಿ ವಿವಾದಿತ ಕೃಷಿ ಕಾನೂನು ಜಾರಿ: ಪ್ರಿಯಾಂಕಾ ಗಾಂಧಿ ವಾದ್ರಾ ಆರೋಪ
ಕಲಬುರ್ಗಿ ಜಿಲ್ಲೆಯ ಜನರು ಸೋಂಬೇರಿಗಳು ಎಂಬ ತನ್ನ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ ಸಚಿವ ಮುರುಗೇಶ್ ನಿರಾಣಿ
ವಿಮಾನದೊಳಗೆ ಸಿಗರೇಟ್ ಸೇದಿದ ಮಹಿಳೆ: ಸಹ ಪ್ರಯಾಣಿಕರು ವಿರೋಧಿಸಿದರೂ ಕ್ಯಾರೇ ಅನ್ನಲಿಲ್ಲ
ಮೈಸೂರು: ಸಾಮೂಹಿಕ ಅತ್ಯಾಚಾರ ಪ್ರಕರಣ | ಸಂತ್ರಸ್ತೆ, ಪೋಷಕರು ತನಿಖೆಗೆ ಸಹಕಾರ ನೀಡುತ್ತಿಲ್ಲ- ಎಸ್.ಟಿ.ಸೋಮಶೇಖರ್