ಆರೋಪಿಯನ್ನು ಬಂಧಿಸಲು ತೆರಳಿದ್ದ ಎಸ್‍ಐಗೆ ಚೂರಿ ಇರಿತ
ಉಳ್ಳಾಲ: ಉಳ್ಳಾಲದ ಕೋಣಾಜೆ ವ್ಯಾಪ್ತಿಯಲ್ಲಿ ಕಳವು ಪ್ರಕರಣದ ಸಂಬಂಧ ಆರೋಪಿಯನ್ಬು ಬಂಧಿಸಲು ತೆರಳಿದ್ದ ವೇಳೆ ಆರೋಪಿಯು ಎಸ್‍ಐಗೆ ಚೂರಿ ಇರಿದು ಪರಾರಿಯಾದ ಘಟನೆ ನಡೆದಿದೆ.
ಸಾದಿಕ್ ಚೂರಿ ಇರಿದು ಪರಾರಿಯಾಗಿರುವ ಆರೋಪಿಯಾಗಿದ್ದಾನೆ. ಕೊಣಾಜೆ ಠಾಣಾ ಎಸ್.ಐ ಶರಣಪ್ಪ ಅವರು ಚೂರಿ ಇರಿತಕ್ಕೊಳಗಾದವರಾಗಿದ್ದರೆ. ಪೊಲೀಸರು ಆರೋಪಿಯ ಸಹೋದರನನ್ನು ವಶಕ್ಕೆ ಪಡೆದಿದ್ದು, ಆರೋಪಿ ಈ ಹಿಂದೆ ಬಂದರು ಠಾಣಾ ಪೊಲೀಸರಿಗೂ ಇದೇ ರೀತಿ ಚೂರಿಯಿಂದ ಇರಿದು ಪರಾರಿಯಾಗಿದ್ದ ಎನ್ನಲಾಗಿದೆ.
ಕಳವು ಆರೋಪಿ ಸಾದಿಕ್ ಪಜೀರು ಪ್ರದೇಶಲ್ಲಿದ್ದಾನೆ ಎನ್ನುವ ಖಚಿತ ಮಾಹಿತಿ ಮೇರೆಗೆ ಕೊಣಾಜೆ ಠಾಣಾ ಪೊಲೀಸ್ ಸಬ್ ಇನ್ಸ್‌ಸ್ಪೆಕ್ಟರ್ ಶರಣಪ್ಪ ಭಂಡಾರಿ ದಾಳಿ ನಡೆಸಿದಾಗ ಆರೋಪಿ ಸಾದಿಕ್, ಶರಣಪ್ಪ ಅವರ ಕೈಗೆ ಚೂರಿ ಇರಿದು ಪರಾರಿಯಾಗಿದ್ದಾನೆ.
ಆತನೊಂದಿಗಿದ್ದ ಸಹೋದರ ಆರೋಪಿ ನಾಸಿರ್‌ನನ್ನು ಪೊಲೀಸರು ವಶಕ್ಜೆ ಪಡೆದಿದ್ದಾರೆ. ಆರೋಪಿಯು ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ. ಕೊಣಾಜೆ ಠಾಣಾ ಪೊಲೀಸರು ಆರೋಪಿಗೆ ಶೋಧ ಕಾರ್ಯ ಮುಂದುವರಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಕೊಲ್ಲೂರು ದೇವಸ್ಥಾನದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ ಹೇರುವಂತೆ ಹಿಂದೂ ಸಂಘಟನೆಗಳಿಂದ ಮನವಿ
ಕೊಂಡ ಹಾಯುವಾಗ ಕೆಂಡಕ್ಕೆ ಜಾರಿ ಬಿದ್ದು ಪೂಜಾರಿ ಗಂಭೀರ
ಸಿಡಿದ ರಸ್ತೆ ಬದಿಯ ವಿದ್ಯುತ್ ಟ್ರಾನ್ಸ್ ಫಾರ್ಮರ್: ತಂದೆ ಸಾವು, ಮಗಳ ಸ್ಥಿತಿ ಚಿಂತಾಜನಕ
ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆ ಪುನಾರಂಭಿಸಿ: ಕೇಂದ್ರಕ್ಕೆ ಸೋನಿಯಾ ಗಾಂಧಿ ಒತ್ತಾಯ