ಹಜ್ ಯಾತ್ರಿಕರ ಸೇವೆ ಸಲ್ಲಿಸಿದ ಮಹಿಳಾ ಸ್ವಯಂ ಸೇವಕರಿಗೆ ಉಮ್ರಾ ಯಾತ್ರೆಗೆ ವ್ಯವಸ್ಥೆ: ಜಮೀರ್ ಅಹಮದ್ ಖಾನ್ - Mahanayaka

ಹಜ್ ಯಾತ್ರಿಕರ ಸೇವೆ ಸಲ್ಲಿಸಿದ ಮಹಿಳಾ ಸ್ವಯಂ ಸೇವಕರಿಗೆ ಉಮ್ರಾ ಯಾತ್ರೆಗೆ ವ್ಯವಸ್ಥೆ: ಜಮೀರ್ ಅಹಮದ್ ಖಾನ್

b z zameer ahmed khan
22/08/2023

ಬೆಂಗಳೂರು : ಹಜ್ ಯಾತ್ರೆ ಸಂದರ್ಭದಲ್ಲಿ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಿದ 50 ಮಹಿಳೆಯರು ಹಾಗೂ ಅವರ ಅವಲಂಬಿತರು ಸೇರಿ 100 ಮಂದಿಗೆ ವೈಯಕ್ತಿಕ ವೆಚ್ಚದಲ್ಲಿ ಉಮ್ರಾ ಯಾತ್ರೆ ವ್ಯವಸ್ಥೆ ಮಾಡುವುದಾಗಿ ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ಹೇಳಿದ್ದಾರೆ.

ಬೆಂಗಳೂರಿನ ಹಜ್ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಜ್ ಯಾತ್ರೆ ಸಂದರ್ಭದಲ್ಲಿ  ಕಾರ್ಯನಿರ್ವಹಣೆ ಮಾಡಿದ ವಿವಿಧ ಸಮಿತಿ ಹಾಗೂ ತಂಡಗಳ 750 ಸ್ವಯಂ ಸೇವಕರು ಹಾಗೂ ಅಧಿಕಾರಿಗನ್ನು

ನೆನಪಿನ ಕಾಣಿಕೆ ಕೊಟ್ಟು ಸನ್ಮಾನ ಮಾಡಿ ಗೌರವಿಸಿ ಅವರು, ನಿಮ್ಮ ಸೇವೆಗೆ ಬೆಲೆ ಕಟ್ಟಲಾಗದು ಎಂದು ಶ್ಲಾಘನೆ ಮಾಡಿದರು.


Provided by

2018 ರಲ್ಲಿ 1200 ಸ್ವಯಂ ಸೇವಕರನ್ನು ಉಮ್ರಾ ಯಾತ್ರೆ ಗೆ ಕಳುಹಿಸುವುದಾಗಿ ಭರವಸೆ ನೀಡಿದ್ದೆ ಅದರಂತೆ 900 ಮಂದಿ ಈಗಾಗಲೇ ಉಮ್ರಾಗೆ ಹೋಗಿ ಬಂದಿದ್ದಾರೆ. ಉಳಿದವರನ್ನು e ವರ್ಷ ಕಳುಹಿಸಲಾಗುವುದು. ಅದರಲ್ಲಿ 50 ಮಹಿಳೆಯರು ಹಾಗೂ ಅವರ ಅವಲಂಭಿತರಿಗೆ ಅವಕಾಶ ಕಲ್ಪಿಸಲಾಗಗುವುದು ಎಂದು ತಿಳಿಸಿದರು.

ಹಜ್ ಹಾಗೂ ಉಮ್ರಾ ಯಾತ್ರೆ ಪವಿತ್ರ ವಾದುದು. ಎಲ್ಲರಿಗೂ ಸಾಧ್ಯವಾಗದು. ದೇವರ ಇಚ್ಛೆ ಇರಬೇಕು. ನೀವೆಲ್ಲ ಹಜ್ ಯಾತ್ರಿಕರ ಸೇವೆ ಸಲ್ಲಿಸಿ ದೇವರ ಪ್ರೀತಿಗೆ ಪಾತ್ರರಾಗಿದ್ದೀರಿ. ನನ್ನ ಶಕ್ತಿ ಇರುವವರೆಗೆ ಈ ಸೇವೆ ನಾನು ಮಾಡುತ್ತೇನೆ ಎಂದು ಹೇಳಿದರು.

ಪೌರಾಡಳಿತ ಹಾಗೂ ಹಜ್ ಖಾತೆ ಸಚಿವ ರಹೀಮ್ ಖಾನ್ ಮಾತನಾಡಿ, ಜಮೀರ್ ಅಹಮದ್ ಅವರು ಸ್ವಯಂ ಸೇವಕರನ್ನು ಗೌರವಿಸುತ್ತಿರುವುದು ಉತ್ತಮ ಕೆಲಸ. ಬಡ ಸಮುದಾಯದ ಪರ ಸದಾ ನಿಲ್ಲುವ ನಾಯಕ ಅವರು. ಅವರಿಗೆ ದೇವರು ಮತ್ತಷ್ಟು ಸೇವೆ ಸಲ್ಲಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದರು.

ಮೌಲಾನ ಮಕ್ಸೂದ್ ಇಮ್ರಾನ್ ರಶಾದಿ, ಮೌಲಾನ ಝೈನುಲ್ ಆಬಿದೀನ್, ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಮೌಲಾನ ಎನ್.ಕೆ.ಮುಹಮ್ಮದ್ ಶಾಫಿ ಸ ಅದಿ, ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಖಾನ್ ಫರ್ವೇಜ್ ,ರಾಜ್ಯ ಹಜ್ ಸಮಿತಿಯ ಮಾಜಿ ಅಧ್ಯಕ್ಷ ರೌಫುದ್ದೀನ್ ಕಚೇರಿವಾಲ, ಕಾರ್ಯನಿರ್ವಾಹಕ ಅಧಿಕಾರಿ ಸರ್ಫರಾಝ್ ಖಾನ್ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ