ಅಡುಗೆ ಮನೆಯಲ್ಲಿಯೇ ಡ್ರಗ್ಸ್ ತಯಾರಿಸುತ್ತಿದ್ದವನ ಬಂಧನ - Mahanayaka
1:32 PM Saturday 14 - December 2024

ಅಡುಗೆ ಮನೆಯಲ್ಲಿಯೇ ಡ್ರಗ್ಸ್ ತಯಾರಿಸುತ್ತಿದ್ದವನ ಬಂಧನ

arrest
11/11/2023

ಬೆಂಗಳೂರು:ಬೆಂಗಳೂರು: ಅಡುಗೆ ಮನೆಯನ್ನೇ  ಡ್ರಗ್ಸ್  ತಯಾರಿಸುವ ಕಾರ್ಖಾನೆಯನ್ನಾಗಿ ಮಾಡಿಕೊಂಡಿದ್ದವನನ್ನು ಸಿಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಆರೋಪಿ ನೈಜೀರಿಯಾ  ಪ್ರಜೆಯಾಗಿದ್ದು,ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿಗಳು ಬಂಧಿಸಿದ್ದಾರೆ.

ನೈಜೀರಿಯಾ ಪ್ರಜೆ ಬೆಂಜಮಿನ್ ಅವಲಹಳ್ಳಿಯ ತನ್ನ ಅಡುಗೆಮನೆಯ ಸ್ಟೌ ಮೇಲೆ ಬೆಂಕಿ ಹೊತ್ತಿಸಿ, ದೋಸೆಯ ರೀತಿ ಮಾಡಿಕೊಳ್ತಿದ್ದ. ಆ ಬಳಿಕ ಪ್ರೆಶರ್ ಕುಕ್ಕರ್‌ಗೆ ಪೈಪ್ ಅಳವಡಿಸಿ ಆವಿಯಿಂದ ಕ್ರಿಸ್ಟಲ್ ಬರುವಂತೆ ಮಾಡಿ ಎಂಡಿಎಂಎ ತಯಾರು ಮಾಡುತ್ತಿದ್ದ ಎನ್ನಲಾಗಿದೆ.

ಎಂಡಿಎಂಎ ತಯಾರು ಮಾಡಲು ಬೇಕಾಗಿದ್ದ ಕಚ್ಚಾವಸ್ತುಗಳನ್ನು ಖರೀದಿಸುವ ಆರೋಪಿ ನಂತರ ಹಂತ ಹಂತವಾಗಿ ಎಂಡಿಎ ತಯಾರು ಮಾಡುತ್ತಿದ್ದಾರೆ. ಡ್ರಗ್ಸ್ ಡಿಮಾಂಡ್ ಎಷ್ಟು ಇದೆ, ಅಷ್ಟನ್ನು ತಯಾರು ಮಾಡಿ, ನಂತರ ಅದನ್ನು ನೈಜೀರಿಯಾ ಮತ್ತು ಆಫ್ರಿಕಾ ಮೂಲದವರಿಗೆ ಮಾರಾಟ ಮಾಡುತ್ತಿರುವುದು ತಿಳಿದು ಬಂದಿದೆ. ತಯಾರು ಮಾಡಿಟ್ಟಿದ್ದ ಸುಮಾರು 10 ಕೋಟಿ ರೂ. ಮೌಲ್ಯದ 5 ಕೆಜಿ ಎಂಡಿಎಂಎ ಮತ್ತು ಅದನ್ನು ತಯಾರು ಮಾಡಲು ಬೇಕಾಗಿದ್ದ 5 ಕೆಜಿ ಕಚ್ಚಾ ವಸ್ತುಗಳನ್ನು ಸಂಗ್ರಹಿದ್

ಸಿಸಿಬಿಯ ನಾರ್ಕೊಟಿಕ್ಸ್ ವಿಭಾಗದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ರಾಮಮೂರ್ತಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಆರಂಭದಲ್ಲಿ ಆರೋಪಿ ಬಳಿ 100 ಗ್ರಾಂ ಎಂಡಿಎಂಎ ಇದೆ. ಆರೋಪಿ ಎಲ್ಲಿಂದ ಎಂಡಿಎಂಎ ತರುತ್ತಿದ್ದಾನೆ ಎಂದು ಪರಿಶೀಲನೆ ನಡೆಸಿದ ವೇಳೆ ಬೆಂಜಮಿನ್ ವಾಸವಿದ್ದ ಮನೆಯಲ್ಲೇ ಎಂಡಿಎಂಎ ಕ್ರಿಸ್ಟಲ್ ತಯಾರಿಸಿದ್ದ ವಿಚಾರ ಬೆಳಕಿಗೆ ಬಂದಿದೆ.

ಇತ್ತೀಚಿನ ಸುದ್ದಿ