ಕದ್ರಿ ದೇವಾಲಯದ ಆವರಣದ ಕಡೆಗೆ ಬಂದಿದ್ದ ಅನ್ಯಕೋಮಿನ ಯುವಕರ ಬಂಧನ - Mahanayaka

ಕದ್ರಿ ದೇವಾಲಯದ ಆವರಣದ ಕಡೆಗೆ ಬಂದಿದ್ದ ಅನ್ಯಕೋಮಿನ ಯುವಕರ ಬಂಧನ

kaddri
12/05/2023

ಮಂಗಳೂರಿನ‌ ಪುರಾಣ ಪ್ರಸಿದ್ದ, ಐತಿಹಾಸಿಕ ಕದ್ರಿ ದೇಗುಲದ ಆವರಣದ ಕಡೆ ಬಂದ ಮೂವರು ಅಪರಿಚಿತ ಯುವಕರನ್ನು ಪೊಲೀಸರು ವಶಪಡಿಸಿಕೊಂಡ ಘಟನೆ ​ನಡೆದಿದೆ.

ವಶಕ್ಕೊಳಗಾದ ಯುವಕರು ಮಂಗಳೂರಿನವರೇ ಆಗಿದ್ದಾರೆ. ಮೂವರು ಅನ್ಯಕೋಮಿನ ಯುವಕರು ರಾತ್ರಿ ಬೈಕ್ ನೊಂದಿಗೆ ಕದ್ರಿ ದೇವಾಲಯದ ಆವರಣದ ಕಡೆ ಬಂದಿದ್ದಾರೆ. ಇವರನ್ನು ಕಂಡು ಸ್ಥಳದಲ್ಲಿ ಜನ ಜಮಾಯಿಸಿದ್ದಾರೆ. ಬಳಿಕ ಅವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ ಕದ್ರಿ‌ ಠಾಣಾ ಪೊಲೀಸ್ ಅಧಿಕಾರಿಗಳು ಮೂವರನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಇದೇ ವೇಳೆ ಯುವಕರು ನಾವು ಕಾಟಿಪಳ್ಳಕ್ಕೆ ಹೋಗ್ತಿದ್ವಿ. ಗೂಗಲ್ ಮ್ಯಾಪ್ ಹಾಕಿ ದಾರಿ ತಪ್ಪಿ ಬಂದಿರುವುದಾಗಿ ಯುವಕರು ವಿಚಾರಣೆ ವೇಳೆ ತಿಳಿಸಿದ್ದಾರೆ. ತನಿಖೆ ನಡೆಯುತ್ತಿದೆ.


Provided by

bike

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ