ಡಿ.ಕೆ.ಬ್ರದರ್ಸ್ ಕೊಲೆ ಮಾಡಿ ಎಂದಿದ್ದವನ ಬಂಧನ - Mahanayaka

ಡಿ.ಕೆ.ಬ್ರದರ್ಸ್ ಕೊಲೆ ಮಾಡಿ ಎಂದಿದ್ದವನ ಬಂಧನ

ranjith m r
15/11/2023

ಬೆಂಗಳೂರು:  ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ಅವರ ಕೊಲೆಗೆ ಕರೆ ನೀಡಿದ್ದ ಆರೋಪಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ರಂಜಿತ್ ಎಂ.ಆರ್ ಬಂಧಿತ ಆರೋಪಿಯಾಗಿದ್ದು,  ಅ. 4ರಂದು ರಂಜಿತ್ ತನ್ನ ಫೇಸ್ ಬುಕ್ ಖಾತೆಯಲ್ಲಿ ಡಿ.ಕೆ.‌ಸೋದರರ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿ, ಇಬರನ್ನೂಕೊಲೆ ಮಾಡುವಂತೆ ಕರೆ ನೀಡಿದ್ದ.

ಈತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಕಾಂಗ್ರೆಸ್ ಮುಖಂಡ ಶರತ್ ಈ ಕುರಿತು ದೂರು ದಾಖಲಿಸಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸೈಬರ್ ಪೊಲೀಸರು ತಂಡ ರಂಜಿತ್ ನನ್ನು ಬಂಧಿಸಿದ್ದಾರೆ.

ಇತ್ತೀಚಿನ ಸುದ್ದಿ