ಕೊಳ್ಳೇಗಾಲದಲ್ಲಿ ತಿಮಿಂಗಲ ವಾಂತಿ ಸಾಗಾಟ ಮಾಡುತ್ತಿದ್ದವರ ಬಂಧನ - Mahanayaka

ಕೊಳ್ಳೇಗಾಲದಲ್ಲಿ ತಿಮಿಂಗಲ ವಾಂತಿ ಸಾಗಾಟ ಮಾಡುತ್ತಿದ್ದವರ ಬಂಧನ

amber greece
12/08/2023

ಚಾಮರಾಜನಗರ: ತಿಮಿಂಗಲ ವಾಂತಿ(ಆಂಬರ್ ಗ್ರೀಸ್) ಸಾಗಾಟ ಮಾಡುತ್ತಿದ್ದವರನ್ನು ಬಂಧಿಸಿದ ಘಟನೆ ಕೊಳ್ಳೇಗಾಲದ ಮೈಸೂರು ರಸ್ತೆಯಲ್ಲಿ ನಡೆದಿದೆ.


Provided by

ಭಟ್ಕಳ ಮೂಲದ ಆನಂದ್ ದೇವಾಡಿಗ, ಬಾಬು ಅಣ್ಣಪ್ಪನಾಯ್ಕ ಬಂಧಿತ ಆರೋಪಿಗಳು.‌‌ ಕೊಳ್ಳೇಗಾಲ ಮಾರ್ಗದಿಂದ ಕೊಯಮತ್ತೂರಿಗೆ ತಿಮಿಂಗಿಲ ವಾಂತಿ ಸಾಗಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಅರಣ್ಯ ಸಂಚಾರಿ ದಳದ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ.

ಬಂಧಿತರಿಂದ 3 ಕೆಜಿ ಅಂಬರ್ ಗ್ರೀಸ್, ಎರಡು ಮೊಬೈಲ್, ಕಾರು ವಶಕ್ಕೆ ಪಡೆದಿದ್ದು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.


Provided by

ಇತ್ತೀಚಿನ ಸುದ್ದಿ