ಅಂತರ್ ರಾಜ್ಯ ಖೋಟಾ ನೋಟು ಜಾಲದ ಮೂವರು ಆರೋಪಿಗಳ ಬಂಧನ
ಬೆಂಗಳೂರು: ಬೆಂಗಳೂರು ಪಶ್ಚಿಮ ವಲಯದ ಚಿಕ್ಕಪೇಟೆ ವಿಭಾಗದ ಕಾಟನ್ ಪೇಟೆ ಪೊಲೀಸರು ಅಂತರ್ ರಾಜ್ಯ ಖೋಟಾ ನೋಟು ಜಾಲದ 3 ಆರೋಪಿಗಳ ಬಂಧಿಸಿ, ಅವರಿಂದ ರೂ. 500 ಮುಖ ಬೆಲೆಯ ಒಟ್ಟು 1307 ಖೋಟಾ ನೋಟುಗಳ ವಶಪಡಿಸಿಕೊಂಡಿದ್ದಾರೆ.
ಒಟ್ಟು 6,53,500 ಮೌಲ್ಯದ ಹೊರರಾಜ್ಯದಿಂದ ಖೋಟಾ ನೋಟುಗಳನ್ನು ತಂದು ಕಾಟನ್ ಪೇಟೆ ಪೊಲೀಸ್ ಠಾಣಾ ಸರಹದ್ದಿನಲ್ಲಿ ಚಲಾವಣೆ ಮಾಡುತ್ತಿದ್ದ ಜಾಲದ ಬಗ್ಗೆ ಗುಪ್ತ ಮಾಹಿತಿಯನ್ನು ಸಂಗ್ರಹಿಸಿದ, ಕಾಟನ್ ಪೇಟೆ ಪೊಲೀಸ್ ಠಾಣೆಯ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಅಂತೆಯೇ ದಿನಾಂಕ:-28-06-2023 ರಂದು ಪ್ರಕರಣವನ್ನು ಬೇಧಿಸಿ, ಸಿಟಿ ರೈಲ್ವೇ ನಿಲ್ದಾಣದ ಮುಂಭಾಗದ ವಾಕ್ ಬಳಿ ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಕೇರಳ ರಾಜ್ಯದ ಇಬ್ಬರು ಹಾಗೂ ತಮಿಳುನಾಡಿನ ಒಬ್ಬ ಆರೋಪಿಯನ್ನು ದಸ್ತಗಿರಿ ಪಡಿಸಿ, ಆರೋಪಿಗಳನ್ನು ಬಂಧಿಸಿ, ಇವರಿಂದ 6,53,500/-ರೂ ಮೌಲ್ಯದ, 500 ರೂ ಮುಖ ಬೆಲೆಯ ಒಟ್ಟು 1307 ಖೋಟಾ ನೋಟುಗಳನ್ನು ವಶ ಪಡಿಸಿಕೊಂಡಿದ್ದಾರೆ.
ಆರೋಪಿತರು Fake currency tamilnadu ಹಾಗೂ Motohaker.93 ಎಂಬ ಇನ್ ಸ್ಟಾಗ್ರಾಂ ಅಕೌಂಟ್ ನಿಂದ ಖೋಟಾ ನೋಟು ವ್ಯವಹಾರವನ್ನು ನಡೆಸಿ, ಖೋಟಾ ನೋಟುಗಳನ್ನು ಜನನಿಬಿಡ ಪ್ರದೇಶಗಳಾದ ಬೆಂಗಳೂರಿನ ಮೆಜೆಸ್ಟಿಕ್, ಸಿಟಿ ರೈಲ್ವೇ ನಿಲ್ದಾಣ, ಮಾರ್ಕೆಟ್ ನಲ್ಲಿ ಖೋಟಾ ನೋಟುಗಳನ್ನು ಚಲಾವಣೆ ಮಾಡಿರುತ್ತಾರೆ. ಖೋಟ ನೋಟನ್ನು ತಮಿಳುನಾಡಿನ ಮೂಲದ ಆರೋಪಿಯು ಬಿಹಾರದ ಪಾಟ್ನಾ ಮೂಲದ ವ್ಯಕ್ತಿಯನ್ನು ಸಂಪರ್ಕಿಸಿ, ಬಿಹಾರಕ್ಕೆ ತೆರಳಿ ಅವನ ಕಡೆಯಿಂದ 25 ಸಾವಿರಕ್ಕೆ 1 ಲಕ್ಷ ರೂಪಾಯಿ (1:4 ಅನುಪಾತದಲ್ಲಿ ಖೋಟಾ ನೋಟನ್ನು ಪಡೆದುಕೊಂಡು ಬರುತ್ತಿದ್ದನು.
ಇದುವರೆಗೂ ಸುಮಾರು 10 ಲಕ್ಷದವರೆಗೂ ಖೋಟಾನೋಟನ್ನು ಅವರ ಕಡೆಯಿಂದ ಪಡೆದುಕೊಂಡಿರುತ್ತಾನೆ. ಕೇರಳ, ಕರ್ನಾಟಕ ಹಾಗೂ ಆಂಧ್ರಪ್ರದೇಶದ ಇತರರಿಗೆ ಈ ಮುಂಚೆ 3–4 ಲಕ್ಷ ರೂಪಾಯಿಯಷ್ಟು ಖೋಟ ನೋಟನ್ನು ಚಲಾವಣೆ ಮಾಡಿರುತ್ತಾನೆ. ಬಿಹಾರದ ಪಾಟ್ನಾ ಮೂಲದ ಖೋಟ ನೋಟು ನೀಡುವ ವ್ಯಕ್ತಿಯನ್ನು ಪತ್ತೆ ಮಾಡಲು ತನಿಖೆ ಮುಂದುವರೆದಿದೆ.
ಈ ಕಾರ್ಯಾಚರಣೆಯನ್ನು ಬೆಂಗಳೂರು ನಗರದ ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತ ಲಕ್ಷ್ಮಣ ಬಿ ನಿಂಬರಗಿ ರವರ ನೇತೃತ್ವದಲ್ಲಿ, ಗಿರಿ ಕೆ.ಸಿ, ಸಹಾಯಕ ಪೊಲೀಸ್ ಆಯುಕ್ತರು ಚಿಕ್ಕಪೇಟೆ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ, ಬಾಲರಾಜ್ ಪೊಲೀಸ್ ಇನ್ಸಪೆಕ್ಟರ್ ಹಾಗೂ ಸಿಬ್ಬಂದಿಯವರನ್ನೊಳಗೊಂಡ ತಂಡವು ಸದರಿ ಪ್ರಕರಣವನ್ನು ಬೇಧಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/D73015iu7jn2glm2MECosd
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw