ರಕ್ತ ಚಂದನ ಸಾಗಾಣಿಕೆ ಮಾಡುತ್ತಿದ್ದ ಮೂವರು ಆರೋಪಿಗಳ ಬಂಧನ
ಕೊಳ್ಳೇಗಾಲ: ಅಕ್ರಮವಾಗಿ ರಕ್ತ ಚಂದನ ಸಾಗಾಣಿಕೆ ಮಾಡುತ್ತಿದ್ದ ಮೂವರನ್ನು ಅರಣ್ಯ ಸಂಚಾರಿ ದಳದ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಬೆಂಗಳೂರು ವಿಜಯನಗರ ಬಡಾವಣೆಯ ಅರುಣ್ ಕುಮಾರ್(26), ನಾಯಂಡಳ್ಳಿಯ ಆನಂದ(46) ಹಾಗೂ ತುಮಕೂರು ಜಿಲ್ಲೆಯ ಸೋಮೇಶ್ವರಪುರಂನ ತ್ರಬುದುಲ್ ಮುನಾಫ್(52) ಬಂಧಿತ ಆರೋಪಿಗಳು. ಇವರಿಂದ ಸುಮಾರು 284 ಕೆಜಿ 14 ತುಂಡು ರಕ್ತ ಚಂದನ, ಸ್ಯಾಂಟ್ರೋ ಕಾರು ಹಾಗೂ ಮೂರು ಮೊಬೈಲ್, 1,320ರೂ.ನಗದನ್ನು ವಶಪಡಿಸಿಕೊಂಡರು.
ಇವರುಗಳು ರಕ್ತಚಂದನ ಮರದ ತುಂಡುಗಳನ್ನು ಸಾಗಾಣಿಕೆ ಮಾಡುತ್ತಿರುವುದರ ಖಚಿತ ಮಾಹಿತಿ ಮೇರೆಗೆ ಇಲ್ಲಿನ ಅರಣ್ಯ ಸಂಚಾರಿ ದಳದ ಪೊಲೀಸರು ಸತ್ತೇಗಾಲ ಹ್ಯಾಂಡ್ ಪೋಸ್ಟ್ ಬಳಿ ದಾಳಿ ನಡೆಸಿ ಆರೋಪಗಳನ್ನು ಬಂಧಿಸಿ, ಆರ್.ಎಫ್.ಒ ರವರ ವಶಕ್ಕೆ ಒಪ್ಪಿಸಿದ್ದಾರೆ.
ದಾಳಿಯಲ್ಲಿ ಪೊಲೀಸ್ ಅರಣ್ಯ ಸಂಚಾರಿ ದಳದ ( ಸಿ.ಐ.ಡಿ) ಸಬ್ ಇನ್ಸ್‌ಪೆಕ್ಟರ್ ವಿಜಯರಾಜ್, ಮುಖ್ಯ ಪೇದೆಗಳಾದ ತಖೀಉಲ್ಲಾ, ರಾಮಚಂದ್ರ, ಶಂಕರ್, ಸ್ವಾಮಿ, ಬಸವರಾಜು, ಚಾಲಕ ಪ್ರಭಾಕರ್, ಪೇದೆ ಬಸವರಾಜು ಇದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw