ಶ್ರೀ ಕ್ಷೇತ್ರ ಧರ್ಮಸ್ಥಳ ಭಕ್ತರ ಶಿವರಾತ್ರಿ ಪಾದಯಾತ್ರೆಗೆ ಆಗಮನ: ಸಕಲ ಸಿದ್ಧತೆ ಕಾರ್ಯನಿರ್ವಾಹಣಾಧಿಕಾರಿ ಎಂ.ದಯಾವತಿ

ಚಿಕ್ಕಮಗಳೂರು: ರಾಜ್ಯದ ನಾನಾ ಮೂಲೆಗಳಿಂದ ಶಿವರಾತ್ರಿಗೆ ಬರುವ ಸಂದರ್ಭ ಪಾದಯಾತ್ರೆ ಮೂಲಕ ಆಗಮಿಸುವ ಭಕ್ತರ ಹಲವು ತಂಡಗಳು ಈಗಾಗಲೇ ತಮ್ಮ ಪಾದಯಾತ್ರೆಯನ್ನು ಆರಂಭಿಸಿವೆ.
ಮೂಡಿಗೆರೆ ತಾಲ್ಲೂಕಿನ ಆರು ಗ್ರಾಮ ಪಂಚಾಯಿತಿ ವತಿಯಿಂದ ಈ ಬಾರಿ ಕಸದ ವಾಹನದ ಜೊತೆ ಸಿಬ್ಬಂದಿಗಳನ್ನಾ ಸಹಾ ನಿಯೋಜಿಸಲಾಗಿದೆ. ಸ್ವಚ್ಛತೆ ಗೆ ಮೊದಲ ಆದ್ಯತೆ, ಸ್ವಚ್ಚ ವಾಹಿನಿ ಮೂರು ನಾಲಕ್ಕೂ ದಿನಾ ಸ್ಥಗಿತ ವಾಗದೇ ಸ್ವಚ್ಛತೆ ವಾಹನ ತಿರುಗಾಡುತ್ತಾ ಓಡಾಡಾಲು ತಿಳಿಸಲಾಗಿದೆ. ಬಣಕಲ್, ಹೆಬ್ಬರಿಗೆ,ಅತ್ತಿಗೆರೆ, ಕೊಟ್ಟಿಗೆಹಾರ, ಚಾರ್ಮಾಡಿ ಘಾಟ್ ನಾ ಅಣ್ಣಪ್ಪ ಸ್ವಾಮಿ ದೇವಸ್ಥಾನ ವರೆಗೂ ಸ್ವಚ್ಛತೆ ಬಗ್ಗೆ ನಿಗಾ ವಹಿಸಲಾಗಿದೆ.
ಯಾವುದೇ ಗಲಭೆ ಘರ್ಷಣೆ ಆಗದಂತೆ ಪೊಲೀಸ್ ಇಲಾಖೆ ನೋಡಿಕೊಳ್ಳಬೇಕು ಎಂದು ಮೂಡಿಗೆರೆ ಕಾರ್ಯನಿರ್ವಾಹಣಾಧಿಕಾರಿ ಎಂ. ದಯಾವತಿ ಹೇಳಿದರು.
ರಾಜ್ಯದ ನಾನಾ ಜಿಲ್ಲೆಗಳಿಂದ ಸಹಸ್ರ ಸಾವಿರಾರು ಭಕ್ತರು ಧರ್ಮಸ್ಥಳಕ್ಕೆ ಕಾಲ್ನಡಿಗೆಯಲ್ಲಿ ಆಗಮಿಸಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ಪುನೀತರಾಗುತ್ತಾರೆ. ಈ ಕಾರಣದಿಂದ ಕನಿಷ್ಠ ಹದಿನೈದು ದಿನಗಳ ಮುಂಚೆಯೇ ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತ ತಯಾರಾಗಿರಬೇಕು. ಇದುವರೆಗೂ ತಯಾರಾಗದೇ ಇರುವುದು ನಿರ್ಲಕ್ಷತನ ಎಂದು ಸಂಜಯ್ ಗೌಡ ಕೊಟ್ಟಿಗೆಹಾರ ಮಾತನಾಡಿದರು.
ಪಾದಯಾತ್ರೆ ಮೂಲಕ ಆಗಮಿಸುವ ಪಾದಯಾತ್ರಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆಮಾಡಬೇಕು. ನಮ್ಮಿಂದ ಸಾಧ್ಯವಾದಷ್ಟು ಮೂಲ ಸೌಕರ್ಯ ಪಾದಯಾತ್ರಿಗಳಿಗೆ ನಾವು ಸಹರಿಸುತ್ತೇವೆ ಎಂದು ವರ್ತಕರ ಸಂಘದ ಕಾರ್ಯದರ್ಶಿ ವೇಣು ಗೋಪಾಲ್ ಹೇಳಿದರು.
ಪಾದಯಾತ್ರಿಗಳು ಸಾಗಿ ಬರುವ ವೇಳೆ ಚಾರ್ಮಾಡಿಯಿಂದ ಧರ್ಮಸ್ಥಳ ತನಕ ಸ್ಥಳೀಯ ಸಂಘ ಸಂಸ್ಥೆಗಳಲ್ಲದೆ, ವೈಯಕ್ತಿಕವಾಗಿ ಹಲವರು ಪಾನೀಯ,ಮಜ್ಜಿಗೆ, ಕಲ್ಲಂಗಡಿ,ಶರಬತ್ತು ಇನ್ನಿತರ ಅನುಕೂಲವನ್ನು ಉಚಿತವಾಗಿ ಕಲ್ಪಿಸುತ್ತಾರೆ. ಸ್ವಚ್ಛತೆ ಗಾಗಿ ಅಷ್ಟೇ ನಿಗಾ ಸಹಾ ಅವರು ವಹಿಸಬೇಕು.
ಪಾದಯಾತ್ರಿಗಳು ಸಂಚರಿಸುವ ರಸ್ತೆಯುದ್ದಕ್ಕೂ ಸ್ವಚ್ಛತೆ ಬಗ್ಗೆ ಹೆಚ್ಚು ಗಮನ ನೀಡಬೇಕು.ಊಟದ ತಟ್ಟೆ, ಪ್ಲಾಸ್ಟಿಕ್ ಇತ್ಯಾದಿಗಳನ್ನು ಅಲ್ಲಲ್ಲಿ ಎಸೆಯಬಾರದು. ಈ ಬಗ್ಗೆ ಶಿವರಾತ್ರಿ ಪಾದಯಾತ್ರೆಯ ಮಂದಿ ಸ್ವಚ್ಛತೆಗಾಗಿ ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ವರ್ತಕರ ಸಂಘದ ಅಧ್ಯಕ್ಷ ಟಿ.ಎಂ.ಗಜೇಂದ್ರ ಗೌಡ ಹೇಳಿದರು.
ಈ ಸಂದರ್ಭದಲ್ಲಿ ತರುವೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸುಶೀಲ, ಉಪಾಧ್ಯಕ್ಷರಾದ ಸ್ವರೂಪ್ ಪ್ರಶಾಂತ್, ತಾಲ್ಲೂಕು ಸಹಾಯಕ ನಿರ್ದೇಶಕರಾದ ಕೆ.ವಿ. ಶಾರದಾ, ಹಳೇ ಮೂಡಿಗೆರೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಶಾಂತ್, ತರುವೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಕೆ ಆರ್, ಬಣಕಲ್ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಕೃಷ್ಣ, ಗ್ರಾಮಸ್ಥರಾದ ಸಂದೀಪ್,ತರುವೆ ಸಾಗರ್, ಸಮಾಜ ಸೇವಕ ಅರೀಫ್,ಪಂಚಾಯಿತಿ ಸಿಬ್ಬಂದಿಗಳಾದ ಪ್ರವೀಣ್, ಮಾದವ, ಸಂದೀಪ್ ಭಿನ್ನಡಿ ಇನ್ನಿತರರು ಇದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: