ಇಡೀ ಕುಟುಂಬವನ್ನೇ ಕಾರಿನೊಳಗೆ ಕೂಡಿ ಹಾಕಿ ಬೆಂಕಿ ಹಚ್ಚಿದ ಉದ್ಯಮಿ!
ಮಹಾರಾಷ್ಟ್ರ: ಇಲ್ಲಿನ ನಾಗ್ಪುರದಲ್ಲಿ ಕುಟುಂಬದ ಜೊತೆಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಉದ್ಯಮಿ ಸಾವನ್ನಪ್ಪಿದ್ದು, ಸುಟ್ಟಗಾಯಗಳೊಂದಿಗೆ ಅವರ ಪತ್ನಿ ಮತ್ತು ಮಗ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಾಗ್ಪುರ ಮೂಲದ ರಾಮರಾಜ್ ಭಟ್ (58) ಮೃತಪಟ್ಟವರು ಎಂದು ಗುರುತಿಸಲಾಗಿದ್ದು, ಅವರ ಪತ್ನಿ ಸಂಗೀತಾ ಭಟ್ (57) ಮತ್ತು ಪುತ್ರ ನಂದನ್ (25) ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳವಾರ ಮಧ್ಯಾಹ್ನ ಈ ಘಟನೆ ನಡೆದಿದೆ.
ಮಧ್ಯಾಹ್ನ ರಾಮರಾಜ್ ತನ್ನ ಹೆಂಡತಿ ಮತ್ತು ಮಗನನ್ನು ಕರೆದುಕೊಂಡು ಹೋಟೆಲ್ ಗೆ ಊಟ ಮಾಡಲು ಹೊರಟನು. ಊಟ ಮುಗಿಸಿ ಬರುತ್ತಿದ್ದಾಗ ರಾಮರಾಜ್ ಏಕಾಏಕಿ ರಸ್ತೆಯಲ್ಲಿ ಕಾರು ನಿಲ್ಲಿಸಿ ಎಲ್ಲರ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಸಂಗೀತಾ ಮತ್ತು ನಂದನ್ ತಕ್ಷಣ ಬಾಗಿಲು ತೆರೆದು ಹೊರಗೆ ಹಾರಿದರಾದರೂ ಇವರಿಗೂ ಗಂಭೀರ ಸುಟ್ಟ ಗಾಯಗಳಾಗಿವೆ.
ರಾಮರಾಜ್ ಚಾಲಕನ ಸೀಟಿನಲ್ಲೇ ಕುಳಿತು ಬೆಂಕಿಯಲ್ಲಿ ಸುಟ್ಟು ಕರಕಳಾಗಿದ್ದಾನೆ. ಆರ್ಥಿಕ ಬಿಗ್ಗಟ್ಟಿನಿಂದ ಆತ್ಮಹತ್ಯೆ ಮಾಡಿಕೊಂಡಿರುವ ರಾಮರಾಜ್ ನ ಸೂಸೈಡ್ ನೋಟ್ ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka