ಪದೇ ಪದೇ ನೆಟ್ಟಿಗೆ ತೆಗೆಯುವ ಅಭ್ಯಾಸ ಹೊಂದಿದ್ದೀರಾ?: ಇದು ಎಷ್ಟು ಅಪಾಯಕಾರಿ?
ಬೆರಳಿನ ನೆಟ್ಟಿಗೆ ತೆಗೆಯುವುದೆಂದರೆ ಕೆಲವರಿಗೆ ಇನ್ನಿಲ್ಲದ ಖುಷಿ. ಕೆಲವರು ಆಗಾಗ ಬೆರಳುಗಳನ್ನು ಮಡಚಿ ನೆಟ್ಟಿಗೆ ತೆಗೆಯುವ ಅಭ್ಯಾಸವನ್ನು ಹೊಂದಿರುತ್ತಾರೆ. ಕೆಲವರಂತೂ ಆಗಾಗ ನೆಟ್ಟಿಗೆ ತೆಗೆಯುತ್ತಲೇ ಇರುತ್ತಾರೆ. ಈ ರೀತಿಯಾಗಿ ನೆಟ್ಟಿಗೆ ತೆಗೆಯುವುದು ಅನಾರೋಗ್ಯಕ್ಕೆ ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಾರೆ.
ಪದೇ ಪದೇ ನೆಟ್ಟಿಗೆ ತೆಗೆಯುವುದರಿಂದ ಮೂಳೆಗೆ ಸಂಬಂಧಿಸಿದ ಅನಾರೋಗ್ಯ ಉಂಟಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ನೆಟ್ಟಿಗೆ ತೆಗೆಯುವುದು ಅಭ್ಯಾಸವಾಗಿಬಿಟ್ಟರೆ, ಪದೇ ಪದೇ ನೆಟ್ಟಿಗೆ ತೆಗೆಯುತ್ತಲೇ ಇರುತ್ತೇವೆ. ಹೀಗೆ ಮಾಡುವುದು ಅಪಾಯಕಾರಿಯಾಗಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ತಜ್ಞರು ಹೇಳುವಂತೆ, ಪದೇ ಪದೇ ನೆಟ್ಟಿಗೆ ತೆಗೆಯುವುದರಿಂದ ಆರ್ಥರೈಟಿಸ್ ಸಮಸ್ಯೆಗಳು ಹೆಚ್ಚಾಗುತ್ತಂತೆ. ದೇಹದ ಕೀಲುಗಳಲ್ಲಿ ಒಂದು ದ್ರವವಿರುತ್ತದೆ. ನಾವು ಬೆರಳುಗಳನ್ನು ಮಡಚಿ ನೆಟ್ಟಿಗೆ ತೆಗೆಯುವಾಗ ಈ ದ್ರವವು ಅನಿಲವು ಬಿಡುಗಡೆಯಾಗುತ್ತದೆ. ಇದರಿಂದಾಗಿ ಅದರೊಳಗೆ ರೂಪುಗೊಂಡ ಗುಳ್ಳೆಗಳು ಸಹ ಸಿಡಿಯುತ್ತದೆ. ಈ ಗುಳ್ಳೆಗಳು ಸಿಡಿದಾಗ ನಮಗೆ ಶಬ್ಧ ಕೇಳಿಸುತ್ತದೆ ಎನ್ನುತ್ತಾರೆ.
ನಮ್ಮ ಸಂಧಿಗಳು ಅನೇಕ ಬಾರಿ ಶಬ್ಧ ಮಾಡುತ್ತಿರುತ್ತದೆ. ಕೆಲವೊಮ್ಮೆ ನಾವು ವೇಗವಾಗಿ ನಡೆಯುವಾಗ, ಓಡುವಾಗ, ಆಟವಾಡುವಾಗಲೂ ಈ ರೀತಿಯ ಶಬ್ದಗಳು ಬರಬಹುದು.
ದೀರ್ಘ ಕಾಲದ ವರೆಗೆ ಈ ರೀತಿಯಾಗಿ ನೆಟ್ಟಿಗೆ ತೆಗೆಯುವ ಅಭ್ಯಾಸ ಇದ್ದರೆ, ನಮ್ಮ ಕೈಗಳ ಬಲದ ಮೇಲೆ ಪರಿಣಾಮ ಬೀರುತ್ತದೆ. ಕೈಯಲ್ಲಿ ಊತ ಉಂಟಾಗುವುದು ಮತ್ತು ಬೆರಳುಗಳು ಸೆಟೆದುಕೊಳ್ಳಬಹುದು ಎಂದು ತಜ್ಞರು ಹೇಳುತ್ತಾರೆ.
ಬೆರಳುಗಳ ನೆಟ್ಟಿಗೆ ತೆಗೆಯುವಾಗ ಹೆಚ್ಚು ನೋವು ಕಾಣಿಸಿಕೊಳ್ಳದಿದ್ದರೆ, ಹೆಚ್ಚು ಸಮಸ್ಯೆಗಳೇನು ಇಲ್ಲ. ಆದರೆ, ಬೆರಳಲ್ಲಿ ನೋವು ಕಾಣಿಸಿಕೊಂಡರೆ, ತಕ್ಷಣವೇ ಈ ನೆಟ್ಟಿಗೆ ತೆಗೆಯುವ ಅಭ್ಯಾಸವನ್ನು ಬಿಟ್ಟು ಬಿಡುವುದು ಉತ್ತಮ ಎಂದು ತಜ್ಞರು ಹೇಳುತ್ತಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಮಗಳ ಬೆನ್ನಲ್ಲಿ ಅಡ್ರೆಸ್ ಬರೆದ ಮಹಿಳೆ: ಉಕ್ರೇನ್ ನಲ್ಲೊಂದು ಮನಕಲಕುವ ಘಟನೆ
ಪುಟ್ಟ ತಂಗಿಯನ್ನು ಮಡಿಲಲ್ಲಿಟ್ಟುಕೊಂಡು ಶಾಲೆಗೆ ಹಾಜರಾಗುತ್ತಿರುವ ಅಕ್ಕ!
ಏಕಲವ್ಯ, ಜೀವಮಾನ ಸಾಧನೆ, ಕ್ರೀಡಾರತ್ನ, ಕ್ರೀಡಾ ಪೋಷಕ ಪ್ರಶಸ್ತಿ ಪುರಸ್ಕೃತರ ಹೆಸರು ಘೋಷಣೆ
ರಾಜ್ಯದಲ್ಲಿ ಬಜರಂಗದಳದವರು ಸಿಎಂ ಆಗಿದ್ದಾರೆ ಅಂತ ಅನ್ನಿಸ್ತಿದೆ: ಪ್ರಿಯಾಂಕ್ ಖರ್ಗೆ ಕಿಡಿ ನುಡಿ
ರಾಹುಲ್ ಗಾಂಧಿ ಹೆಸರಿಗೆ ತನ್ನೆಲ್ಲಾ ಆಸ್ತಿ ಬರೆದುಕೊಟ್ಟ 78ರ ವೃದ್ಧೆ!