ಸುದ್ದಿ ನಿರೂಪಕ ಅರುಣ್ ಬಡಿಗೇರ ತಾಯಿ ಕೊರೊನಾಕ್ಕೆ ಬಲಿಯಾದ ಬೆನ್ನಲ್ಲೇ ತಂದೆಯೂ ಬಲಿ
30/04/2021
ಹುಬ್ಬಳ್ಳಿ: ಖಾಸಗಿ ಸುದ್ದಿವಾಹಿನಿಯ ನಿರೂಪಕ ಅರುಣ್ ಬಡಿಗೇರ ಅವರು ಮೂರು ದಿನಗಳ ಹಿಂದೆಯಷ್ಟೇ ತಾಯಿಯನ್ನು ಕಳೆದುಕೊಂಡಿದ್ದರು ಇದೀಗ ಅವರ ತಂದೆ ಕೂಡ ಕೊರೊನಾಕ್ಕೆ ಬಲಿಯಾಗಿದ್ದಾರೆ.
ಮೂರು ದಿನಗಳ ಹಿಂದೆಯಷ್ಟೇ ಅರುಣ್ ಬಡಿಗೇರ ಅವರ ತಾಯಿ ಕೊರೊನಾಕ್ಕೆ ಬಲಿಯಾಗಿದ್ದರು. ಇದರ ಬೆನ್ನಲ್ಲೇ ಅವರ ತಂದೆ ಚಂದ್ರಶೇಖರ ಬಡಿಗೇರ ಕೂಡ ಬಲಿಯಾಗಿದ್ದಾರೆ.
ಕೊರೊನಾ ಪಾಸಿಟಿವ್ ಹಿನ್ನೆಲೆಯಲ್ಲಿ ಚಂದ್ರಶೇಖರ ಬಡಿಗೇರ ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ. ಅರುಣ್ ಬಡಿಗೇರ ಕುಟುಂಬದ ಬಹುತೇಕರಿಗೆ ಕೊರೊನಾ ಸೋಂಕು ತಗಲಿದ್ದು, ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.