66ನೇ ವಯಸ್ಸಿನಲ್ಲಿ ಎರಡನೇ ವಿವಾಹಕ್ಕೆ ಸಿದ್ಧವಾದ ಮಾಜಿ ಕ್ರಿಕೆಟಿಗ! - Mahanayaka
7:34 PM Wednesday 5 - February 2025

66ನೇ ವಯಸ್ಸಿನಲ್ಲಿ ಎರಡನೇ ವಿವಾಹಕ್ಕೆ ಸಿದ್ಧವಾದ ಮಾಜಿ ಕ್ರಿಕೆಟಿಗ!

Arun Lal
26/04/2022

ಭಾರತದ ಮಾಜಿ ಕ್ರಿಕೆಟಿಗ ಅರುಣ್ ಲಾಲ್(Arun Lal)  ತಮ್ಮ 66ನೇ ವಯಸ್ಸಿನಲ್ಲಿ ಎರಡನೇ ಮದುವೆವಾಗಲು ಸಿದ್ಧತೆ ನಡೆಸಿದ್ದು, ತಮಗಿಂತ 28 ವರ್ಷ ಕಿರಿಯಳಾಗಿರುವ ವಧುವನ್ನು  ವರಿಸಲಿದ್ದಾರೆ.

ಒಂದು ತಿಂಗಳ ಹಿಂದೆ ಅರುಣ್ ಲಾಲ್ ಅವರು 38  ವರ್ಷ ವಯಸ್ಸಿನ ಬುಲ್ ಬುಲ್ ಸಾಹಾ(Bul Bul Saha) ಎಂಬವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದುರು.  ಮೇ 2ರಂದು ಇವರಿಬ್ಬರ ವಿವಾಹ ಕೋಲ್ಕತ್ತಾದ ಹೊಟೇಲ್ ನಲ್ಲಿ ನಡೆಯಲಿದೆ.

ಅರುಣ್ ಲಾಲ್ ಅವರ ಮೊದಲ ವಿವಾಹ ರೀನಾ ಎಂಬವರ ಜೊತೆಗೆ ನಡೆದಿತ್ತು. ಆದರೆ ಇವರಿಬ್ಬರ ವಿಚ್ಛೇದನವಾದ ನಂತರ ಇದೀಗ ತಮ್ಮ 66ನೇ ವಯಸ್ಸಿನಲ್ಲಿ ಅರುಣ್ ಲಾಲ್ ಎರಡನೇ ಮದುವೆಗೆ ಸಿದ್ಧತೆ ನಡೆಸಿದ್ದಾರೆ.

ಅರುಣ್ ಲಾಲ್ ವಿವಾಹದಲ್ಲಿ  ಬೆಂಗಾಲ್ ಕ್ರಿಕೆಟ್ ಮಂಡಳಿಯ ಸದಸ್ಯರು ಮತ್ತು ಬೆಂಗಾಲ್ ತಂಡದ ಮಾಜಿ ಕ್ರಿಕೆಟಿಗರು ಕೂಡ ಭಾಗವಹಿಸಲಿದ್ದಾರೆ.

ಅರುಣ್​ ಲಾಲ್ ಅವರು  ಭಾರತ ತಂಡದ ಪರ 16 ಟೆಸ್ಟ್ ಮತ್ತು 13 ODI ಪಂದ್ಯಗಳನ್ನಾಡಿದ್ದು, ಕ್ರಮವಾಗಿ 729 ಮತ್ತು 122 ರನ್ ಗಳಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1duNIQRfXnJcfQKWPzNqD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಹಿಮದಲ್ಲಿ ಸಿಲುಕಿದ ಯುವತಿ: ಆರು ದಿನ ಮೊಸರು ಮತ್ತು ಐಸ್ ತಿಂದು ಬದುಕಿದಳು!

ಒಟಿಟಿ ಗೆ ‘ದಿ ಕಾಶ್ಮೀರ್ ಫೈಲ್ಸ್’:  ZEE 5 ಮೂಲಕ ಬಿಡುಗಡೆ

ಸ್ವಲ್ಪದರಲ್ಲೇ ಬಚಾವ್ ಆದ ಸಿಎಂ ಬೊಮ್ಮಾಯಿ: ಗೋಪೂಜೆ ವೇಳೆ ಮುನ್ನುಗ್ಗಿದ ಎತ್ತು!

ದಿವ್ಯಾ ಹಾಗರಗಿ ಜೊತೆ ಡಿಕೆಶಿ ಇರುವ ಫೋಟೋ ಟ್ವೀಟ್ ಮಾಡಿದ ಬಿಜೆಪಿ

ಇತ್ತೀಚಿನ ಸುದ್ದಿ