ಅರುಣ್ ಸಿಂಗ್ ಮುಂದೆ ತನ್ನ ಬಯಕೆ ಹೇಳಿಕೊಂಡ ರೇಣುಕಾಚಾರ್ಯ
ಬೆಂಗಳೂರು: ಜನವರಿ 15ರ ಬಳಿಕ ರಾಜ್ಯ ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ ಸಾಧ್ಯತೆಯಿದ್ದು, ಈ ಹಿನ್ನೆಲೆಯಲ್ಲಿ ಸಚಿವಾಕಾಂಕ್ಷಿಗಳು ಸರ್ಕಸ್ ಆರಂಭಿಸಿದ್ದು, ಈ ಪೈಕಿ ಶಾಸಕ ರೇಣುಕಾಚಾರ್ಯ ಪ್ರಬಲ ಸಚಿವ ಆಕಾಂಕ್ಷಿಯಾಗಿದ್ದಾರೆ.
ಈ ಬಾರಿ ತನಗೆ ಸಚಿವ ಸ್ಥಾನ ನೀಡಲೇ ಬೇಕು ಎಂದು ರೇಣುಕಾಚಾರ್ಯ ಹಠ ಹಿಡಿದಿದ್ದು, ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರ ಮುಂದೆ ತಮ್ಮ ಬಯಕೆ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.
ನಾನು ರಾಜಕೀಯ ಸನ್ಯಾಸಿ ಅಲ್ಲ. ಸಚಿವ ಸ್ಥಾನ ಕೊಡ್ತಾರೆ ಅಂತಾನೂ ಕಾದು ಕುಳಿತುಕೊಳ್ಳಲ್ಲ. ಎಲ್ಲರಂತೆ ನಾನೂ ಕೂಡ ಪಕ್ಷಕ್ಕಾಗಿ ಸಾಕಷ್ಟು ದುಡಿದ್ದೇನೆ. ಹಿರಿಯರನ್ನು ಪಕ್ಷ ಸಂಘಟನೆಗೆ ಬಳಸಿಕೊಂಡು ಹೊಸ ಮುಖಕ್ಕೆ ಅವಕಾಶ ಸಿಗಬೇಕು. ಎಂದು ಅವರು ತಮ್ಮ ಮನದಾಸೆಯನ್ನು ವ್ಯಕ್ತಪಡಿಸಿದ್ದಾರೆ.
ಇನ್ನೂ ರೇಣುಕಾಚಾರ್ಯಗೆ ಸಚಿವ ಸ್ಥಾನಾಕಾಂಕ್ಷಿಗಳು ಬೆಂಬಲ ನೀಡಿದ್ದು, ಹೊಸ ಮುಖಗಳಿಗೆ ಸಚಿವ ಸ್ಥಾನ ನೀಡಬೇಕು ಎನ್ನುವ ಬಲವಾದ ಒತ್ತಾಯಗಳು ಕೇಳಿ ಬಂದಿವೆ. ಸದ್ಯ ಸಚಿವ ಸ್ಥಾನಕ್ಕಾಗಿ ಬೊಮ್ಮಾಯಿ ಅವರ ಹಿಂದೆ ಶಾಸಕರು ಬಿದ್ದಿದ್ದಾರೆ ಎನ್ನಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DbJM9kayC1K4utc3ntXPdh
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಅಂಬೇಡ್ಕರ್, ಕುವೆಂಪು ವೃತ್ತ ವಿವಾದ: ಮೈಸೂರಿನ ಮಾತೃ ಮಂಡಳಿ ವೃತ್ತ ನೆಲಸಮ
ಅಪ್ಪೆ ಸಾಲೊದ ಪನ್ನಿ/ ಬಂಗಾಡಿಗೆ ಪ್ರಯಾಣ | ತುಳುನಾಡಿನ ಅವಳಿ ವೀರರು ಕಾನದ-ಕಟದರು | ಸಂಚಿಕೆ: 12
“ರಾಜ್ಯದಲ್ಲಿ ಕಾಂಗ್ರೆಸ್ ಪರ ಗಾಳಿ ಬೀಸುತ್ತಿದೆ”
ಕಾಂಗ್ರೆಸ್ ಗೆ ಮದುವೆಯಾಗಿ 25 ವರ್ಷದ ಬಳಿಕ ಗಂಡು ಮಗು ಹುಟ್ಟಿದ ಸಂಭ್ರಮ | ಈಶ್ವರಪ್ಪ
ಕಾಂಗ್ರೆಸ್ ಗೆ ಬಹುಮತ: ಸಚಿವ ಶ್ರೀರಾಮುಲುಗೆ ಮುಖ ಭಂಗ