ಅರುಣಾಚಲದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ಯತ್ನ: ಪ್ರಬಲ ವಿರೋಧದೊಂದಿಗೆ ರಂಗಕ್ಕಿಳಿದ ಕ್ರಿಶ್ಚಿಯನ್ ಫಾರಂ

ಮತಾಂತರ ನಿಷೇಧ ಕಾಯ್ದೆಯನ್ನು ಜಾರಿ ಮಾಡುವುದಕ್ಕೆ ಅರುಣಾಚಲ ಪ್ರದೇಶದ ಬಿಜೆಪಿ ಸರಕಾರ ಮುಂದಾಗಿರುವಂತೆಯೇ ಅರುಣಾಚಲ ಕ್ರಿಶ್ಚಿಯನ್ ಫಾರಂ ಪ್ರಬಲ ವಿರೋಧದೊಂದಿಗೆ ರಂಗಕ್ಕಿಳಿದಿದೆ. ಅರುಣಾಚಲ ಪ್ರದೇಶವನ್ನು ಕ್ರೈಸ್ತ ರಾಜ್ಯವಾಗಿ ಮಾರ್ಪಡಿಸುವುದಾಗಿ ಅದು ಬೆದರಿಕೆ ಹಾಕಿದೆ.
ಅರುಣಾಚಲ್ ಪ್ರದೇಶವನ್ನು ಕ್ರೈಸ್ತ ರಾಜ್ಯವಾಗಿ ಮಾರ್ಪಡಿಸುತ್ತೇವೆ ಎಂದು ಪ್ರತಿಜ್ಞೆ ಮಾಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅರುಣಾಚಲದಿಂದ ಅಸ್ಸಾಂ ವರೆಗಿನ ಇಡೀ ಪ್ರದೇಶ ನಮ್ಮ ಪೂರ್ವಜರ ಊರಾಗಿದೆ. ತವಾ0ಗ್ ನಿಂದ ಲಾಂಡಿಂಗ್ ವರೆಗೆ ಮತ್ತು ಮೆಸುಕ್ ನಿಂದ ಇಟಾ ನಗರದವರೆಗೆ ನಮ್ಮ ಪೂರ್ವಜರ ಊರಾಗಿದೆ. ಅರುಣಾಚಲ್ ಪ್ರದೇಶವು ಯೇಸುವಿನದ್ದಾಗಿದೆ ಎಂದು ದೇವನಾದ ಯೇಸುವಿನ ಹೆಸರಲ್ಲಿ ನಾವು ಘೋಷಿಸುತ್ತೇವೆ ಎಂದು ಅರುಣಾಚಲ ಪ್ರದೇಶದ ಕ್ರೈಸ್ತ ಸಂಘವು ಪ್ರತಿಜ್ಞೆ ಮಾಡಿದೆ.
ಇದರ ಬೆನ್ನಿಗೆ ಆರ್ ಎಸ್ ಎಸ್ ರಂಗಕ್ಕಿಳಿದೆ.. ಈ ಕುರಿತಂತೆ ಮುಖವಾಣಿ ಪತ್ರಿಕೆ ಆರ್ಗನೈಸರ್ ಆಘಾತ ವ್ಯಕ್ತಪಡಿಸಿದೆ. ಅರುಣಾಚಲ ಪ್ರದೇಶದಲ್ಲಿ ಕ್ರೈಸ್ತರ ಜನಸಂಖ್ಯೆ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ 1971ರಲ್ಲಿ 0.79% ಇದ್ದ ಕ್ರೈಸ್ತರ ಜನಸಂಖ್ಯೆ 40 ವರ್ಷಗಳಲ್ಲಿ 30. 26 ಶೇಕಡಕ್ಕೆ ಕ್ರೈಸ್ತರ ಜನಸಂಖ್ಯೆ ಏರಿದೆ. ಕೊರೋನದ ಕಾರಣದಿಂದ 2021 ರಲ್ಲಿ ಜನಗಣತಿ ನಡೆದಿಲ್ಲ. ಆದರೆ ಈಗ ಕ್ರೈಸ್ತರ ಜನಸಂಖ್ಯೆ 40 ಶೇಕಡಕ್ಕಿಂತಲೂ ಅಧಿಕ ಇದೆ ಎಂದು ಆರ್ಗನೈಸರ್ ಬರೆದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj