ಪ್ರತಿ ತಿದ್ದುಪಡಿಯೂ ವಕ್ಫ್ ಮಂಡಳಿಯನ್ನು ನಾಶಪಡಿಸುತ್ತದೆ: ಅಸಾದುದ್ದೀನ್ ಒವೈಸಿ ವಿರೋಧ

ಎಐಎಂಐಎಂ ಮುಖ್ಯಸ್ಥ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಒವೈಸಿ ಪ್ರಸ್ತಾವಿತ ವಕ್ಫ್ ಮಸೂದೆಯನ್ನು ಬಲವಾಗಿ ವಿರೋಧಿಸಿದ್ದಾರೆ. ಸರ್ಕಾರ ಪರಿಚಯಿಸಿದ ಪ್ರತಿಯೊಂದು ತಿದ್ದುಪಡಿಯು ವಕ್ಫ್ ಮಂಡಳಿಯನ್ನು ನಾಶಪಡಿಸುವ ಮತ್ತು ಧಾರ್ಮಿಕ ವ್ಯವಹಾರಗಳ ಮುಸ್ಲಿಂ ನಿರ್ವಹಣೆಯನ್ನು ಕಸಿದುಕೊಳ್ಳುವ ಗುರಿಯನ್ನು ಹೊಂದಿದೆ ಎಂದು ಪ್ರತಿಪಾದಿಸಿದ್ದಾರೆ. ಇಂಡಿಯಾ ಟುಡೇ ಕನ್ಸಲ್ಟಿಂಗ್ ಸಂಪಾದಕ ರಾಜ್ದೀಪ್ ಸರ್ದೇಸಾಯಿ ಅವರೊಂದಿಗಿನ ಸಂದರ್ಶನದಲ್ಲಿ, ಈ ಮಸೂದೆಯು ಸಂವಿಧಾನದ 26 ನೇ ವಿಧಿಯನ್ನು ಉಲ್ಲಂಘಿಸುತ್ತದೆ. ವಕ್ಫ್ ಮಂಡಳಿಯ ಸ್ವಾಯತ್ತತೆಯಲ್ಲಿ ಹಸ್ತಕ್ಷೇಪ ಮಾಡುತ್ತದೆ ಮತ್ತು ಸರ್ಕಾರಿ ಅಧಿಕಾರಿಗಳಿಗೆ ಹೆಚ್ಚಿನ ಅಧಿಕಾರವನ್ನು ನೀಡುತ್ತದೆ ಎಂದು ಒವೈಸಿ ವಾದಿಸಿದ್ದಾರೆ.
ಈ ಸರ್ಕಾರ ತರುತ್ತಿರುವ ಪ್ರತಿಯೊಂದು ತಿದ್ದುಪಡಿಯೂ ವಕ್ಫ್ ಮಂಡಳಿಯನ್ನು ನಾಶಪಡಿಸುತ್ತದೆ. ಮುಸ್ಲಿಂ ಆಡಳಿತವನ್ನು ಕಸಿದುಕೊಳ್ಳುತ್ತದೆ. ಒಬ್ಬನೇ ಒಬ್ಬ ಮುಸ್ಲಿಂ ಸಂಸದ, ಮುಸ್ಲಿಂ ಸಚಿವರಿಲ್ಲದ, ಮುಸ್ಲಿಮರಿಗೆ ಟಿಕೆಟ್ ನೀಡದ ಮತ್ತು ಎಲ್ಲರನ್ನೂ ನಾಶಮಾಡಲು ಬುಲ್ಡೋಜರ್ ಗಳನ್ನು ಬಳಸುವ ಈ ಸರ್ಕಾರವನ್ನು ನಾವು ಹೇಗೆ ನಂಬಲು ಸಾಧ್ಯ” ಎಂದು ಅವರು ಪ್ರಶ್ನಿಸಿದ್ದಾರೆ.
ವಕ್ಫ್ ಮಂಡಳಿಗೆ ಮುಸ್ಲಿಮೇತರರನ್ನು ನೇಮಕ ಮಾಡಲು ಅವಕಾಶ ನೀಡುವ ನಿಬಂಧನೆಯನ್ನು ಒವೈಸಿ ಟೀಕಿಸಿದ್ದಾರೆ.
ಇದು ಅಸಂವಿಧಾನಿಕ ಎಂದು ಹೇಳಿದ್ದಾರೆ. ಬಿಹಾರ, ತೆಲಂಗಾಣ, ತಮಿಳುನಾಡು ಮತ್ತು ಆಂಧ್ರಪ್ರದೇಶದಂತಹ ರಾಜ್ಯಗಳಲ್ಲಿನ ಹಿಂದೂ ಧಾರ್ಮಿಕ ಮಂಡಳಿಗಳು ತಮ್ಮ ಸದಸ್ಯರು ಮತ್ತು ಸಿಬ್ಬಂದಿ ಹಿಂದೂಗಳಾಗಿರಬೇಕೆಂದು ಬಯಸುತ್ತವೆ. ಆದರೆ ಅದೇ ತತ್ವವನ್ನು ವಕ್ಫ್ ಗೆ ಅನ್ವಯಿಸಲಾಗುತ್ತಿಲ್ಲ ಎಂದು ಅವರು ಗಮನಸೆಳೆದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj