ಅಸಹಾಯಕ ಸ್ಥಿತಿಯಲ್ಲಿದ್ದ ವೃದ್ದರ ರಕ್ಷಣೆ: ಹೊಸಬೆಳಕು ಆಶ್ರಮದಲ್ಲಿ ಆರೈಕೆ
05/08/2022
ಪರ್ಕಳ: ಅಸಹಾಯಕ ಸ್ಥಿತಿಯಲ್ಲಿ ಇದ್ದ ವೃದ್ಧರೊಬ್ಬರನ್ನು ಮಣಿಪಾಲ ಪೊಲೀಸರ ಸಹಾಯದೊಂದಿಗೆ ರಕ್ಷಿಸಲಾಗಿದ್ದು, ಇದೀಗ ಅವರಿಗೆ ಹೊಸ ಬೆಳಕು ಆಶ್ರಮದಲ್ಲಿ ಆರೈಕೆ ಮಾಡಲಾಗುತ್ತಿದೆ.
ಉಡುಪಿ ಜಿಲ್ಲೆಯ ಹೆರ್ಗದಲ್ಲಿ ಬೂದ ಎಂಬ ಹೆಸರಿನ ವ್ಯಕ್ತಿಯೊಬ್ಬರು ಪತ್ತೆಯಾಗಿದ್ದು, ಇವರ ಊರು ಯಾವುದು ಎಂದು ಕೇಳಿದರೆ, ಸರಿಯಾದ ಮಾಹಿತಿ ನೀಡುತ್ತಿಲ್ಲ. ಮಂಚಿ, ಅಲೆವೂರು, ಕಾಪು ಎಂದು ಅವರು ಊರಿನ ಹೆಸರು ಹೇಳುತ್ತಿದ್ದಾರೆ.
ಇವರ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದರೆ ಮಣಿಪಾಲದ ಹೊಸಬೆಳಕು ಆಶ್ರಮದ ಸಂಪರ್ಕ ಸಂಖ್ಯೆ 9620417570ಯನ್ನು ಸಂಪರ್ಕಿಸುವಂತೆ ಮನವಿ ಮಾಡಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka