ಅಸಹಾಯಕ ಸ್ಥಿತಿಯಲ್ಲಿದ್ದ ವೃದ್ಧರ ರಕ್ಷಣೆ
11/10/2022
ಉಡುಪಿ: ನಗರದಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ ಅಪರಿಚಿತ ವೃದ್ಧರನ್ನು ರಕ್ಷಿಸಲಾಗಿದ್ದು, ಇವರಿಗೆ ಉದ್ಯಾವರದ ಹಿರಿಯ ನಾಗರಿಕರ ಕನಸಿನ ಮನೆ ವೃದ್ಧರಿಗೆ ಆಶ್ರಯ ನೀಡಲಾಗಿದೆ.
ವೃದ್ಧರು ಕೋಟ ನಿವಾಸಿ ಬಾಬುರಾಯ ಪ್ರಭು (77) ಎಂದು ತಿಳಿದುಬಂದಿದೆ. ವೃದ್ಧರ ಸಂಬಂಧಿಕರು ಯಾರದರೂ ಇದ್ದಲ್ಲಿ ಕನಸಿನ ಮನೆಯನ್ನು ಸಂಪರ್ಕಿಸಲು ಸೂಚಿಸಲಾಗಿದೆ.
ನೆಲೆ ಇಲ್ಲದೆ ಅಸಹಾಯಕ ಸ್ಥಿತಿಯಲ್ಲಿದ್ದ ವೃದ್ಧರು, ನಾಗರಿಕ ಸಮಿತಿಯ ಕಛೇರಿಗೆ ಬಂದು, ಸಂಚಾಲಕ ನಿತ್ಯಾನಂದ ಒಳಕಾಡು ಅವರಲ್ಲಿ ಆಶ್ರಯ ಒದಗಿಸಬೇಕೆಂದು ಅಂಗಲಾಚಿಕೊಂಡಿದ್ದರು. ತಕ್ಷಣ ಒಳಕಾಡು ಅವರು ಅಳಲಿಗೆ ಸ್ಪಂದಿಸಿದರು. ಕನಸಿನ ಮನೆಯ ಸೀಮಾ ದೇವಾಡಿಗ, ಕವಿತಾ ನೆರವಾದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka