ಅತ್ಯಾಚಾರ ಪ್ರಕರಣ: ಜಾಮೀನು ಪಡೆದ ನಂತರ ಆಶ್ರಮದಲ್ಲಿ ಅಸಾರಾಮ್ ಗೆ ಭವ್ಯ ಸ್ವಾಗತ - Mahanayaka

ಅತ್ಯಾಚಾರ ಪ್ರಕರಣ: ಜಾಮೀನು ಪಡೆದ ನಂತರ ಆಶ್ರಮದಲ್ಲಿ ಅಸಾರಾಮ್ ಗೆ ಭವ್ಯ ಸ್ವಾಗತ

15/01/2025

ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿ ಜಾಮೀನಿನ ಮೇಲೆ ಹೊರಗೆ ಬಂದಿರುವ ದೇವಮಾನವ ಅಸಾರಾಮ್ ಬಾಪು ಮಂಗಳವಾರ ಸಂಜೆ ಜೋಧಪುರದ ಪಾಲ್ ಗ್ರಾಮದಲ್ಲಿರುವ ತಮ್ಮ ಆಶ್ರಮಕ್ಕೆ ಮರಳಿದ್ದಾರೆ.

2013 ರಲ್ಲಿ ತನ್ನ ಆಶ್ರಮದಲ್ಲಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ 86 ವರ್ಷದ ದೇವಮಾನವನಿಗೆ ರಾಜಸ್ಥಾನ ಹೈಕೋರ್ಟ್ ಮಂಗಳವಾರ ಮಾರ್ಚ್ 31 ರವರೆಗೆ ಮಧ್ಯಂತರ ಜಾಮೀನು ನೀಡಿದೆ.

ಆಶ್ರಮಕ್ಕೆ ಆಗಮಿಸಿದ ಅಸಾರಾಮ್ ಅವರಿಗೆ ಅವರ ಬೆಂಬಲಿಗರಿಂದ ಭವ್ಯ ಸ್ವಾಗತ ದೊರೆಯಿತು. ಅವರ ಕಾರಿನ ಮೇಲೆ ಹೂವುಗಳನ್ನು ಸುರಿಯಲಾಯಿತು ಮತ್ತು ಅವರು ಪ್ರವೇಶಿಸುತ್ತಿದ್ದಂತೆ ಆರತಿ ನಡೆಸಲಾಯಿತು. ಆಶ್ರಮದ ಒಳಗೆ ಹೋಗುವ ಮೊದಲು ಅವರು ತಮ್ಮ ಬೆಂಬಲಿಗರತ್ತ ಕೈ ಬೀಸಿದರು.


Provided by

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ