ಅಶ್ಲೀಲ ಚಿತ್ರಗಳನ್ನು ವೀಕ್ಷಿಸುತ್ತಿರುವವರಿಗೆ ಬಿಗ್ ಶಾಕ್ ನೀಡಿದ ಪೊಲೀಸರು!
ಕಾರವಾರ: ಅಶ್ಲೀಲ ಚಿತ್ರಗಳನ್ನು ವೀಕ್ಷಿಸುತ್ತಿರುವವರಿಗೆ ಪೊಲೀಸರು ಬಿಗ್ ಶಾಕ್ ನೀಡಿದ್ದು, ಒಂದೊಂದೇ ಪ್ರಕರಣಗಳನ್ನು ಗುರುತಿಸಿ ಆರೋಪಿಗಳ ವಿರುದ್ಧ ದೂರು ದಾಖಲಿಸಲಾಗುತ್ತಿದ್ದು, ಮಕ್ಕಳ ಅಶ್ಲೀಲ ವಿಡಿಯೋಗಳನ್ನು ಫೇಸ್ ಬುಕ್ ನಲ್ಲಿ ಅಪ್ ಲೋಡ್ ಮಾಡಿದವರಿಗೆ ಹಾಗೂ ತಮ್ಮದೇ ಖಾತೆಯಲ್ಲಿ ಹಂಚಿಕೊಂಡವರಿಗೆ ಪೊಲೀಸರು ಇದೀಗ ಬಿಗ್ ಶಾಕ್ ನೀಡಿದ್ದಾರೆ.
ಮಕ್ಕಳಿಗೆ ಸಂಬಂಧಿಸಿದಂತೆ ಲೈಂಗಿಕ ದೌರ್ಜನ್ಯದ ಅಶ್ಲೀಲ ವಿಡಿಯೋಗಳನ್ನು ನೋಡುವುದು ಭಾರತೀಯ ದಂಡ ಸಂಹಿತೆಯ ಪ್ರಕಾರ ಅಪರಾಧವಾಗಿದ್ದು, ಅದರಲ್ಲೂ ಫೇಸ್ ಬುಕ್ ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡುವುದು ಡೌನ್ ಲೋಡ್ ಮಾಡುವುದು ಕೂಡ ಶಿಕ್ಷಾರ್ಹ ಅಪರಾಧವಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ 1 ವರ್ಷದ ಅವಧಿಯಲ್ಲಿ 6 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಈಗಾಗಲೇ ಮೂವರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ. ಇನ್ನೂ ಪ್ರಕರಣ ದಾಖಲಾದವರ ಪೈಕಿ ಕಾರವಾರ ತಾಲೂಕಿನ ಮಾಜಾಳಿ, ಶಿರಸಿ, ಜೊಯಿಡಾದವರು ಕೂಡ ಸೇರಿದ್ದಾರೆ ಎಂದು ಹೇಳಲಾಗಿದ್ದು, ಬಂಧಿತರಲ್ಲಿ ಬಹುತೇಕರು ಮಧ್ಯ ವಯಸ್ಕರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಎರಡು, ಮೂರು ವರ್ಷಗಳ ಹಿಂದೆ ಫೇಸ್ ಬುಕ್ ಗೆ ಮಕ್ಕಳ ಅಶ್ಲೀಲ ವಿಡಿಯೋ ಹಾಕಿದ್ದರೂ ಅಂತಹ ಪ್ರಕರಗಳನ್ನು ಪೊಲೀಸರು ಪತ್ತೆ ಹಚ್ಚಿ ಪ್ರಕರಣ ದಾಖಲಿಸಿದ ಉದಾಹರಣೆ ಇದೆ. ಸುಪ್ರೀಂ ಕೋರ್ಟ್ ನ ಆದೇಶದ ಮೇರೆಗೆ ಕೇಂದ್ರ ಸರ್ಕಾರವು ಮಕ್ಕಳ ಮೇಲಿನ ದೌರ್ಜನ್ಯ ತಡೆಯಲೆಂದು ರಾಷ್ಟ್ರೀಯ ಅಪರಾಧ ದಾಖಲೆ ಘಟಕದ ಅಡಿಯಲ್ಲಿ ಪ್ರತ್ಯೇಕ ತಂಡ ರಚಿಸಿದ್ದು, ದೆಹಲಿಯಲ್ಲಿರುವ ಈ ತಂಡ ದೇಶದಲ್ಲಿಯೇ ಇಂತಹ ಪ್ರಕರಣಗಳನ್ನು ಪತ್ತೆ ಮಾಡುವ ಕೆಲಸ ಮಾಡುತ್ತಿದೆ.
ಇನ್ನಷ್ಟು ಸುದ್ದಿಗಳು:
ಅಶ್ಲೀಲ ವಿಡಿಯೋ ವೆಬ್ ಸೈಟ್ ವಿರುದ್ಧ 3 ಡಜನ್ ಗೂ ಅಧಿಕ ಮಹಿಳೆಯರಿಂದ ದೂರು!
ಆನ್ ಲೈನ್ ಶಿಕ್ಷಣದ ನಡುವೆ ಅಶ್ಲೀಲ ವಿಡಿಯೋ ವೀಕ್ಷಣೆ ಹೆಚ್ಚಳ: ಸೈಬರ್ ಅಪರಾಧ ವಿಭಾಗದಿಂದ ಹದ್ದಿನ ಕಣ್ಣು
ನಟಿಯ ಮುಖವನ್ನು ಎಡಿಟ್ ಮಾಡಿ ಅಶ್ಲೀಲ ವಿಡಿಯೋ ಹರಿಯಬಿಟ್ಟ ಪಾಪಿಗಳು
ನನ್ನ ಅಶ್ಲೀಲ ವಿಡಿಯೋ ಮುಂದಿಟ್ಟುಕೊಂಡು ಮಾಜಿ ಸಚಿವ ಬೆದರಿಕೆ ಹಾಕುತ್ತಿದ್ದಾರೆ | ಖ್ಯಾತ ಚಿತ್ರ ನಟಿ ಆರೋಪ
ಹೆಣ್ಣು ಮಕ್ಕಳನ್ನು ಹಿಂದಿನಿಂದ ಎತ್ತಿಕೊಂಡು ಪ್ರಶಾಂತ್ ಸಂಬರ್ಗಿ ಅಶ್ಲೀಲ ವರ್ತನೆ | ಫೋಟೋ ಲೀಕ್
ಟಿಕ್ ಟಾಕ್ ನಲ್ಲಿ ಅಶ್ಲೀಲ ವಿಡಿಯೋ ಬಿಟ್ಟ ಹೆಂಡತಿಗೆ ನಾಲ್ಕೇಟು ಕೊಟ್ಟ | ಆ ಮೇಲೆ ನಡೆದ್ದದ್ದೇನು ಗೊತ್ತಾ?