ಸಹೋದರಿಯ ಮೊಬೈಲ್ ನಲ್ಲಿ ಮಕ್ಕಳ ಅಶ್ಲೀಲ ಚಿತ್ರ ವೀಕ್ಷಿಸುತ್ತಿದ್ದ ಯುವಕ ಎಂತಹ ಕೆಲಸ ಮಾಡಿದ್ದಾನೆ ನೋಡಿ - Mahanayaka
6:04 PM Wednesday 30 - October 2024

ಸಹೋದರಿಯ ಮೊಬೈಲ್ ನಲ್ಲಿ ಮಕ್ಕಳ ಅಶ್ಲೀಲ ಚಿತ್ರ ವೀಕ್ಷಿಸುತ್ತಿದ್ದ ಯುವಕ ಎಂತಹ ಕೆಲಸ ಮಾಡಿದ್ದಾನೆ ನೋಡಿ

23/12/2020

ಭುವನೇಶ್ವರ: ಒಡಿಶಾದ 5 ವರ್ಷದ ಬಾಲಕಿಯ ಮೃತದೇಹ ಗೋಣಿ ಚೀಲವೊಂದರಲ್ಲಿ ತುಂಬಿಸಿ, ಬಾವಿಯೊಂದಕ್ಕೆ ಎಸೆಯಲಾಗಿತ್ತು. ಇದೀಗ ಬಾಲಕಿಯ  ಸಾವಿಗೆ ಕಾರಣ ಏನೆಂದು ಬಯಲಾಗಿದ್ದು,  ಅಶ್ಲೀಲ ಚಿತ್ರಗಳಿಂದ ಪ್ರೇರಿತವಾಗಿ ಮಗುವನ್ನು ಅತ್ಯಾಚಾರಕ್ಕೆ ಯತ್ನಿಸಿ ಹತ್ಯೆ ಮಾಡಲಾಗಿದೆ ಎನ್ನುವ ಆಘಾತಕಾರಿ  ಅಂಶ ಬಯಲಾಗಿದೆ.

ಕಳೆದ ವರ್ಷ ಜುಲೈ 14ರಂದು ಐದು ವರ್ಷದ ಬಾಲಕಿಯ ಮೃತ ದೇಹ ಬಾವಿಯಲ್ಲಿ ಪತ್ತೆಯಾಗಿತ್ತು.  ಈ ಸಂಬಂಧ ಅನುಮಾನದ ಹಿನ್ನೆಲೆಯಲ್ಲಿ ನೆರೆಯ ಯುವಕನೋರ್ವನನ್ನು ಬಂಧಿಸಲಾಗಿತ್ತು. ಯುವಕನು ತನ್ನ ಮನೆಯ ಸಮೀಪದಲ್ಲಿರುವ ಮರದಿಂದ ಹಣ್ಣನ್ನು ತಿನ್ನಲು ಬಂದಿದ್ದ ಬಾಲಕಿಯನ್ನು ತನ್ನ ಮನೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಪ್ರಯತ್ನಿಸಿದ್ದಾನೆ. ಈ ವೇಳೆ ಬಾಲಕಿಯು ತೀವ್ರವಾಗಿ ಕಿರುಚಿದ್ದು, ಈತ ತಕ್ಷಣವೇ ಆಕೆಯ ಕತ್ತು ಹಿಸುಕಿ ಹತ್ಯೆ ಮಾಡಿದ್ದಾನೆ. ಬಳಿಕ ಬಾಲಕಿಯ ಮೃತ ದೇಹವನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಯತ್ನಿಸಿದ್ದಾನೆ ಎಂದು ತನಿಖಾಧಿಕಾರಿ ತಂಡದ ಮುಖ್ಯಸ್ಥ ಅರುಣ್ ಬೋತ್ರಾ ತಿಳಿಸಿದ್ದಾರೆ.

ಸರೋಜ್ ಸೇಥಿ ಈ ಪ್ರಕರಣದ ಆರೋಪಿಯಾಗಿದ್ದು, ಈತ ತನ್ನ ಸಹೋದರಿಯ ಮೊಬೈಲ್ ನಲ್ಲಿ ಮಕ್ಕಳ ಅಶ್ಲೀಲ ಚಿತ್ರಗಳನ್ನು ಅನಿಯಮಿತವಾಗಿ ವೀಕ್ಷಿಸುತ್ತಿದ್ದ. ಕೃತ್ಯ ನಡೆದ ಹಿಂದಿನ ದಿನವೂ ಈತ ವಿಡಿಯೋ ವೀಕ್ಷಿಸಿದ್ದ. ಚಿತ್ರಗಳನ್ನು ವೀಕ್ಷಿಸಿದ ಬಳಿಕ ಗೂಗಲ್ ಹಿಸ್ಟರಿಯನ್ನು ಅಳಿಸಿ ಹಾಕುತ್ತಿದ್ದ ಎಂದು ತನಿಖಾ ಅಧಿಕಾರಿಗಳು ತಿಳಿಸಿದ್ದಾರೆ.

ಬಾಲಕಿಯನ್ನು ಹತ್ಯೆ ಮಾಡಿ, ಗೋಣಿ ಚೀಲದಲ್ಲಿ ತುಂಬಿಸಿ ಆರೋಪಿಯು ಮನೆಯ ಹಿಂದಿನ ಕೊಳಕ್ಕೆ ಎಸೆದಿದ್ದ. ಕಳೆದ ವರ್ಷ ಜುಲೈ 14ರಂದು ಬಾಲಕಿ ಮೃತದೇಹವನ್ನು ಪತ್ತೆ ಹಚ್ಚಲಾಗಿತ್ತು. ಬಾಲಕಿಯ ಬಟ್ಟೆಯಲ್ಲಿ ಯುವಕನ ವೀರ್ಯ ಪತ್ತೆಯಾಗಿತ್ತು.

ಇತ್ತೀಚಿನ ಸುದ್ದಿ