ವೆಬ್ ಸೀರಿಸ್ ಹೆಸರಿನಲ್ಲಿ ಅಶ್ಲೀಲ ಚಿತ್ರ ಚಿತ್ರೀಕರಣ | ಕ್ರೈಂ ಬ್ರಾಂಚ್ ದಾಳಿ - Mahanayaka
1:22 AM Wednesday 11 - December 2024

ವೆಬ್ ಸೀರಿಸ್ ಹೆಸರಿನಲ್ಲಿ ಅಶ್ಲೀಲ ಚಿತ್ರ ಚಿತ್ರೀಕರಣ | ಕ್ರೈಂ ಬ್ರಾಂಚ್ ದಾಳಿ

13/02/2021

ಮುಂಬೈ: ಬಂಗಲೆಗಳು ಹಾಗೂ ಫಾರ್ಮ್ ಹೌಸ್ ಗಳನ್ನು ಬಾಡಿಗೆ ನೀಡಿ ಅಶ್ಲೀಲ ಚಿತ್ರಗಳನ್ನು ಚಿತ್ರೀಕರಣ ಮಾಡುವ ಜಾಲವೊಂದನ್ನು ಮುಂಬೈ ಅಪರಾಧ ಶಾಖೆ ಪೊಲೀಸರು ಬಹಿರಂಗಗೊಳಿಸಿದ್ದಾರೆ.

ಈ ಸಂಬಂಧ 9 ಮಂದಿ ವಿರುದ್ಧ ಅಪರಾಧ ಪ್ರಕರಣ ದಾಖಲಿಸಲಾಗಿದ್ದು, 40 ವರ್ಷದ ತನ್ವೀರ್ ಅಕಿಲ್ ಹಶ್ಮಿ ಎಂಬಾತನನ್ನು ಕ್ರೈಂ ಬ್ರಾಂಚ್  ಪೊಲೀಸರು ಬಂಧಿಸಿದ್ದಾರೆ. ಫಾರ್ಮ್ ಹೌಸ್ ಗಳನ್ನು ಬಾಡಿಗೆಗೆ ನೀಡಿ ಅಲ್ಲಿ ಅಶ್ಲೀಲ ಚಿತ್ರಗಳನ್ನು ಚಿತ್ರೀಕರಣ ಮಾಡಲಾಗುತ್ತಿತ್ತು. ಈ ಬಗ್ಗೆ ಮಾಹಿತಿ ಪಡೆದ ಕ್ರೈಂ ಬ್ರಾಂಚ್ ದಾಳಿ ನಡೆಸಿದ್ದು, ಹಲವರನ್ನು ಬಂಧಿಸಿದೆ ಎಂದು ಹೇಳಲಾಗಿದೆ.

ಬಂಧಿತರ ಪೈಕಿ ತನ್ವೀರ್ ಎಂಬಾತನಿಂದ ಪೊಲೀಸರು ವಶಪಡಿಸಕೊಂಡಿರುವ ಪೆನ್ ಡ್ರೈವ್ ಮತ್ತು ಲಾಪ್ ಟಾಪ್ ಗಳಲ್ಲಿ ಅನೇಕ ಅಶ್ಲೀಲ ಚಿತ್ರಗಳಿವೆ ಎಂದು ಶಂಕೆ ವ್ಯಕ್ತವಾಗಿದೆ. ತನ್ವೀರ್ ಹಶ್ಮಿ ಮುಂಬೈನಲ್ಲಿ ಬಂಗಲೆಯೊಂದನ್ನು ಬಾಡಿಗೆಗೆ ಕೊಟ್ಟು ಅಶ್ಲೀಲ ಚಿತ್ರ ಚಿತ್ರೀಕರಣ ಮಾಡುತ್ತಿದ್ದ. ಆದರೆ ಬಂಗಲೆಗೆ ಬಾಡಿಗೆ ಹೆಚ್ಚಾದ ಕಾರಣ, ಸೂರತ್ ಮತ್ತು ಅದರ ಪಕ್ಕದ ಜಿಲ್ಲೆಗಳಲ್ಲಿ ವೆಬ್ ಸರಣಿಯನ್ನು ರಚಿಸುವ ಹೆಸರಿನಲ್ಲಿ ಬಂಗಲೆ ಬಾಡಿಗೆಗೆ ನೀಡಿ ಅಶ್ಲೀಲ ಚಿತ್ರಗಳನ್ನು ಚಿತ್ರೀಕರಿಸುತ್ತಿದ್ದ ಎಂದು ಹೇಳಲಾಗಿದೆ.

ಇತ್ತೀಚಿನ ಸುದ್ದಿ