ಅಶ್ಲೀಲ ವಿಡಿಯೋ ವೆಬ್ ಸೈಟ್ ವಿರುದ್ಧ 3 ಡಜನ್ ಗೂ ಅಧಿಕ ಮಹಿಳೆಯರಿಂದ ದೂರು! - Mahanayaka
1:07 AM Wednesday 11 - December 2024

ಅಶ್ಲೀಲ ವಿಡಿಯೋ ವೆಬ್ ಸೈಟ್ ವಿರುದ್ಧ 3 ಡಜನ್ ಗೂ ಅಧಿಕ ಮಹಿಳೆಯರಿಂದ ದೂರು!

website
20/06/2021

ಕ್ಯಾಲಿಫೋರ್ನಿಯಾ: ಅಶ್ಲೀಲ ವಿಡಿಯೋ ಸೈಟ್ ಪೋ** ಹಬ್ ವಿರುದ್ಧ  ಮೂರು ಡಜನ್ ಗೂ ಅಧಿಕ ಮಹಿಳೆಯರು ದೂರು ನೀಡಿದ್ದು, ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯಗಳ ಕಿರುಕುಳ ವಿಡಿಯೋಗಳಿಂದ ಈ ವೆಬ್ ಸೈಟ್ ಹಣಗಳಿಸುತ್ತಿದೆ ಎಂದು ಆರೋಪಿಸಿದ್ದಾರೆ.

ವಯಸ್ಕರ ಅಶ್ಲೀಲ ವೆಬ್ ಸೈಟ್ ಗಳಲ್ಲಿ ಒಂದಾದ ಈ ವೆಬ್ ಸೈಟ್, ಅಶ್ಲೀಲ ವಿಡಿಯೋಗಳಿಂದ ಮಾರುಕಟ್ಟೆ ಮಾಡುತ್ತಿದೆ.  ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವ ಲೈಂಗಿಕ ವಿಡಿಯೋಗಳನ್ನು ಶೇರ್ ಮಾಡುತ್ತಾ, ಸಮಾಜಕ್ಕೆ ಹಾನಿ ಉಂಟು ಮಾಡುತ್ತಿದೆ. ಹಾಗಾಗಿ ಈ ಹಾನಿಯನ್ನು ಕಂಪೆನಿಯೇ ಭರಿಸಬೇಕು ಎಂದು ದೂರುದಾರರ ಪರ ವಕೀಲರು ವಾದಿಸಿದ್ದಾರೆ.

ಕ್ಯಾಲಿಫೋರ್ನಿಯಾ ಯುಎಸ್​ ಡಿಸ್ಟ್ರಿಕ್ಟ್​ ಕೋರ್ಟ್​ ಸೆಂಟರ್ಲ್​ ಡಿಸ್ಟ್ರಿಕ್ಟ್ ವಿವಾದಿತ ವೆಬ್ ಸೈಟ್ ವಿರುದ್ಧ ಗುರುವಾರ ದೂರು ದಾಖಲಿಸಲಾಗಿದೆ. ದೂರುದಾರರಿಗೆ ಉಂಟಾದ ಹಾನಿಗೆ ಗ್ರೀಕ್ ಕಂಪೆನಿಯೇ ಹೊಣೆಯಾಗಿದ್ದು, ಮೈಂಡ್​ ಗೀಕ್​ ಕಂಪನಿಯು ನಷ್ಟದ ರೂಪವಾಗಿ ಮಹಿಳೆಯರಿಗೆ ನೂರಾರು ಮಿಲಿಯನ್​ ಪಾವತಿ ಮಾಡಲು ಕೋರ್ಟ್ ಆದೇಶ ನೀಡಬೇಕು ಎಂದು ಅವರು ಕೋರ್ಟ್ ಗೆ ಮನವಿ ಮಾಡಿದ್ದಾರೆ.

ಸೆರೆನಾ ಪ್ಲಾಯಿಟಿಸ್ ಎಂಬವರು ನೀಡಿದ ದೂರಿನಲ್ಲಿ 2014ರಲ್ಲಿ ತನ್ನ ಅನುಮತಿ ಇಲ್ಲದೇ, ತನ್ನ ಗೆಳೆಯನ ಜೊತೆಗಿನ ನಗ್ನ ವಿಡಿಯೋವನ್ನು ಸೈಟ್ ನಲ್ಲಿ ಹರಿಯಬಿಡಲಾಗಿತ್ತು ಎಂದು ಆರೋಪಿಸಿದ್ದಾರೆ. ಈ ಸಂದರ್ಭದಲ್ಲಿ ನನಗೆ 13 ವರ್ಷ ವಯಸ್ಸಾಗಿತ್ತು. ತಾನು ಆರೋಪ ಮಾಡಿದ ಬಳಿಕ ಹಲವು ವಾರಗಳ ನಂತರ ವೆಬ್ ಸೈಟ್ ಈ ವಿಡಿಯೋವನ್ನು ಡಿಲೀಟ್ ಮಾಡಿತ್ತು ಎಂದು ಅವರು ದೂರಿದ್ದಾರೆ.

ಇನ್ನೊಬ್ಬರು ಮಹಿಳೆ ಮಾಡಿರುವ ಆರೋಪ ಏನೆಂದರೆ, ಮಕ್ಕಳ ಅಶ್ಲೀಲ ವಿಡಿಯೋ ಪೋಸ್ಟ್​ ಮಾಡೋದು ಹಾಗೂ ಅನುಮತಿಯನ್ನ ಪಡೆಯದೇ ವ್ಯಕ್ತಿಗಳ ಖಾಸಗಿ ಕ್ಷಣಗಳ ವಿಡಿಯೋವನ್ನ ಶೇರ್​ ಮಾಡುತ್ತಿದೆ ಎಂದು ಹೇಳಿದ್ದಾರೆ. ವೈಯಕ್ತಿಕ ಮನರಂಜನೆಯ ಹೆಸರಿನಲ್ಲಿ ಈ ವೆಬ್ ಸೈಟ್ ಅಪರಾಧ ಕೃತ್ಯ ಎಸಗುತ್ತಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಇತ್ತೀಚಿನ ಸುದ್ದಿ