ಪ್ರಿಯಾಂಕ್ ಖರ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಲು ಪರದಾಡಿದ ಅಶ್ವತ್ಥ್ ನಾರಾಯಣ್!
SCP—TSP ಕುರಿತು ಶಾಸಕ ಪ್ರಿಯಾಂಕ್ ಖರ್ಗೆ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಲು ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ್ ಪರದಾಡಿದ ಘಟನೆ ನಡೆದಿದೆ.
ಸಚಿವರ ನಡೆಯನ್ನು ಖಂಡಿಸಿರುವ ಪ್ರಿಯಾಂಕ್ ಖರ್ಗೆ, ಉನ್ನತ ಶಿಕ್ಷಣ ಸಚಿವರಿಗೆ SCP-TSP ಯ ಅನುದಾನವನ್ನು ಯಾವುದಕ್ಕೆ ಬಳಸಬೇಕು ಎಂಬ ಸಣ್ಣ ಮಾಹಿತಿಯೂ ಇಲ್ಲದೆ ಇರುವುದು ನಾಚಿಕೆಗೇಡು ಎಂದು ಅಭಿಪ್ರಾಯಪಟ್ಟಿದ್ದಾರೆ.
SCP-TSP ಯೋಜನೆ ಕರ್ನಾಟಕ ಅನುಸೂಚಿತ ಜಾತಿಗಳ ಉಪ ಹಂಚಿಕೆ ಮತ್ತು ಬುಡಕಟ್ಟು ಉಪ ಹಂಚಿಕೆ ಅಧಿನಿಯಮ, 2013 ಮತ್ತು ನಿಯಮಗಳು 2017ರ ಅನ್ವಯ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಸಮಗ್ರ ಅಭಿವೃದ್ಧಿಗಾಗಿ ಜನಸಂಖ್ಯೆ ಆಧಾರದಲ್ಲಿ ಆಯವ್ಯಯ ಹಂಚಿಕೆ ಮಾಡಿ ವಿವಿಧ ಇಲಾಖೆಗಳ ಮೂಲಕ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲಾಗಿರುವ ಯೋಜನೆಯಾಗಿದೆ. ಪ್ರತಿ ಇಲಾಖೆ ತನ್ನ ಒಟ್ಟು ಆಯವ್ಯಯದಲ್ಲಿ 24% ಹಣವನ್ನು ಶೋಷಿತ ಸಮುದಾಯಗಳ ಅಭಿವೃದ್ಧಿಗೆ ಮೀಸಲಿಡುವ ಕ್ರಾಂತಿಕಾರಿ ಹೆಜ್ಜೆ.
ತಮ್ಮ ಇಲಾಖೆಯ SCP-TSP ಅನುದಾನವನ್ನು ಬಿಟ್ಟು ಕೇವಲ ಸಮಾಜ ಕಲ್ಯಾಣ ಇಲಾಖೆಯಿಂದ ಅನುದಾನವನ್ನು ಬಳಸಿಕೊಳ್ಳುವ ಯೋಜನೆಯಲ್ಲ, ಉನ್ನತ ಶಿಕ್ಷಣ ಸಚಿವರು ಸರಿಯಾದ ಮಾಹಿತಿಯನ್ನೇ ನೀಡದೇ ವಿಷಯವನ್ನು ದಾರಿ ತಪ್ಪಿಸಿ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಅಭಿಪ್ರಾಯಪಟ್ಟಿದ್ದಾರೆ.
ಶಿಕ್ಷಣ ಸಚಿವರು 7 ವಿಶ್ವವಿದ್ಯಾಲಯಕ್ಕೆ ನೀಡಿರುವ ಅನುದಾನ ಕೇವಲ 1.45 ಕೋಟಿ ನೀಡಿದ್ದೇವೆ ಎಂದು ಹೇಳುತ್ತಾರೆ! ಇದರಲ್ಲಿ ಎಷ್ಟು ಲ್ಯಾಪ್ ಟ್ಯಾಪ್ ಬರುತ್ತದೆ, ಅಥವಾ ಇದರಲ್ಲಿಯೂ ಕಮಿಷನ್ ಪಡೆದು ಬಡ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುವ ತಂತ್ರದಂತಿದೆ ಎಂದು ಅವರು ಶಂಕೆ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಈ ಸರ್ಕಾರಕ್ಕೆ ಆಡಳಿತದ ಕುರಿತು ಪರಿಜ್ಞಾನ, ಜನಪರ ಕೆಲಸದ ಬಗ್ಗೆ ಮಾಹಿತಿಯೇ ಇಲ್ಲಾ ಎಂಬುದು ಇಂದು ಮತ್ತೊಮ್ಮೆ ಸಾಬೀತಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
LIVE