ಎಎಸ್ ಐ ಶಾಂತಯ್ಯರನ್ನು ಬಲಿ ಪಡೆದ ಕೊರೊನಾ ವೈರಸ್
18/05/2021
ರಾಮನಗರ: ಕಳೆದ ಒಂದು ವಾರಗಳಿಂದ ಕೊವಿಡ್ 19ನಿಂದ ಬಳಲುತ್ತಿದ್ದ ಚನ್ನಪಟ್ಟಣ ತಾಲೂಕಿನ ಪೂರ್ವ ಪೊಲೀಸ್ ಠಾಣೆಯ ಎಎಸ್ ಐ ಶಾಂತಯ್ಯ ಅವರು ಕೊರೊನಾಕ್ಕೆ ಬಲಿಯಾಗಿದ್ದಾರೆ.
ರಾಜ್ಯಾದ್ಯಂತ ಕೊವಿಡ್ 19 ಪೊಲೀಸ್ ಅಧಿಕಾರಿಗಳು ಸೇರಿದಂತೆ ಕೊರೊನಾ ವಾರಿಯರ್ಸ್ ನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಲಿ ಪಡೆಯುತ್ತಿದೆ. ಇನ್ನೊಂದೆಡೆ ರಾಮನಗರ ಜಿಲ್ಲೆಯಲ್ಲಿ ಕೂಡ ಕೊರೊನಾ ಪಾಸಿಟಿವ್ ಪ್ರಕರಣಗಳಲ್ಲಿ ಏರಿಕೆ ಕಂಡು ಬಂದಿದೆ. ಸೋಂಕಿತರು ಸಾವನ್ನಪ್ಪುತ್ತಿದ್ದಾರೆ.
ಕೊವಿಡ್ ವಾರಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದ ಎಎಸ್ ಐ ಶಾಂತಯ್ಯ ಅವರು ಇದೀಗ ಕೊರೊನಾಕ್ಕೆ ಬಲಿಯಾಗಿದ್ದಾರೆ. ಕಳೆದ ವಾರ ಕುಂಬಳಗೋಡು ಪೊಲೀಸ್ ಠಾಣೆ ಪಿಎಸ್ ಐ ಕೊರೊನಾಕ್ಕೆ ಬಲಿಯಾಗಿದ್ದರು.