ಕಷ್ಟಕರ ಯೋಗದ ಭಂಗಿಗಳೂ ಈ 4ರ ಬಾಲಕಿಗೆ ಅತಿ ಸುಲಭ | ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿದ ಪ್ರಿಯದರ್ಶಿನಿ - Mahanayaka
4:17 PM Wednesday 26 - November 2025

ಕಷ್ಟಕರ ಯೋಗದ ಭಂಗಿಗಳೂ ಈ 4ರ ಬಾಲಕಿಗೆ ಅತಿ ಸುಲಭ | ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿದ ಪ್ರಿಯದರ್ಶಿನಿ

priyadarshini nayak
09/07/2021

ಒಡಿಶಾ: 4 ವರ್ಷ ವಯಸ್ಸಿನ ಬಾಲಕಿ ಕಷ್ಟಕರವಾಗಿರುವ ಯೋಗದ ಭಂಗಿಗಳನ್ನೂ ಅತೀ ಸುಲಭವಾಗಿ ಮಾಡುವ ಮೂಲಕ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಗೆ ಸ್ಥಾನ ಪಡೆದುಕೊಂಡಿದ್ದಾಳೆ.

4 ವರ್ಷ ವಯಸ್ಸಿನ ಪ್ರಿಯದರ್ಶಿನಿ ನಾಯಕ್ ಈ ಸಾಹಸ ಮೆರೆದ ಬಾಲಕಿಯಾಗಿದ್ದು, ಈಕೆಯ ತಂದೆ ಪ್ರಕಾಶ್ ಯೋಗ ತರಗತಿಗಳನ್ನು ಹೇಳಿಕೊಡುತ್ತಿದ್ದರು. ತಂದೆ ತನ್ನ ವಿದ್ಯಾರ್ಥಿಗಳಿಗೆ ಯೋಗ ಹೇಳಿಕೊಡುತ್ತಿದ್ದ ವೇಳೆ ಪುಟ್ಟ ಬಾಲಕಿ ಪ್ರಿಯಾ ಕೂಡ ಭಾಗಿಯಾಗುತ್ತಿದ್ದಳು.

ಮಗಳಿಗೆ ಚಿಕ್ಕ ವಯಸ್ಸಿನಲ್ಲಿಯೇ ಯೋಗಾಭ್ಯಾಸದ ಬಗ್ಗೆ ಇರುವ ಆಸಕ್ತಿ ಕಂಡ ತಂದೆ ಪ್ರಕಾಶ್, ಮಗಳಿಗೆ ತರಬೇತಿ ನೀಡಿದರು. ಇದೀಗ ಎಷ್ಟೇ ಕಷ್ಟದ ಆಸನಗಳಾದರೂ ಪ್ರಿಯಾ ಅತಿ ಸುಲಭವಾಗಿ ಮಾಡುತ್ತಾಳೆ.

ಪ್ರಪಂಚಕ್ಕೆ ಹಲವು ಕೊಡುಗೆಗಳನ್ನು ನೀಡಿದ ಭಾರತದ ಬೌದ್ಧರ ಕಲೆಗಳಲ್ಲಿ ಒಂದಾಗಿರುವ ಯೋಗ ಇದೀಗ ಪ್ರಪಂಚದಲ್ಲೇ ಮನೆ ಮಾತಾಗಿದೆ. ಯೋಗ, ಧ್ಯಾನದಿಂದ ಮನುಷ್ಯ ತನ್ನ ದೈಹಿಕ ಹಾಗೂ ಮಾನಸಿಕ ಸ್ಥಿತಿಯನ್ನು ಸ್ವಸ್ಥವಾಗಿರಿಸಿಕೊಳ್ಳಬಹುದಾಗಿದೆ.

ಇತ್ತೀಚಿನ ಸುದ್ದಿ