ಆ್ಯಸಿಡ್ ದಾಳಿಗೊಳಗಾದ ಸಂತ್ರಸ್ತರು ನೋವು ಹೇಗೆ ಸಹಿಸುತ್ತಾರೆ?: ಭಾವುಕ ನುಡಿಗಳನ್ನಾಡಿದ ಸಿಎಂ ಬೊಮ್ಮಾಯಿ - Mahanayaka
3:29 PM Wednesday 5 - February 2025

ಆ್ಯಸಿಡ್ ದಾಳಿಗೊಳಗಾದ ಸಂತ್ರಸ್ತರು ನೋವು ಹೇಗೆ ಸಹಿಸುತ್ತಾರೆ?: ಭಾವುಕ ನುಡಿಗಳನ್ನಾಡಿದ ಸಿಎಂ ಬೊಮ್ಮಾಯಿ

acid
13/05/2022

ಬೆಂಗಳೂರು: ಆ್ಯಸಿಡ್ ದಾಳಿಗೆ ಒಳಗಾದಂತ ಅನೇಕ ಹೆಣ್ಣುಮಕ್ಕಳಿಗೆ  ನೆರವಾಗುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಾಸಾಶನವನ್ನು 3 ಸಾವಿರದಿಂದ 10 ಸಾವಿರಕ್ಕೆ ಹೆಚ್ಚಿಸಲು ನಿರ್ಧರಿಸಿದ್ದು, ಇದರ ಜೊತೆಗೆ  ನಿವೇಶನ ಇಲ್ಲದವರಿಗೆ ನಿವೇಶನ ಕೊಟ್ಟು ಮನೆ ನಿರ್ಮಿಸಿಕೊಡಲಾಗುತ್ತದೆ. ಸ್ವ ಉದ್ಯೋಗ ಕೈಗೊಳ್ಳೋ ನಿಟ್ಟಿನಲ್ಲಿ 5 ಲಕ್ಷ ಸಹಾಯ ಧನ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.

ಹಲೋ ಸಚಿವರೇ ಸಹಾಯವಾಣಿಗೆ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು,  ಆ್ಯಸಿಡ್ ದಾಳಿಗೆ ಒಳಗಾದಂತ ನಮ್ಮ ಅಕ್ಕ-ತಂಗಿಯರ ಬದುಕು ಬಹಳಾ ಕಷ್ಟ. ಅವರು ಮಾನಸಿಕವಾಗಿ ಹೇಗೆ ತಡೆದುಕೊಳ್ಳುತ್ತಾರೋ ಅನ್ನುವಂತದ್ದು ನನಗೆ ಬರೀ ಯೋಚನೆ ಮಾಡಿದರೆ ದುಃಖವಾಗುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಆ್ಯಸಿಡ್ ದಾಳಿಗೊಳಗಾದ ಅನೇಕರು ತಮ್ಮ ಕಣ್ಣುಗಳನ್ನು ಕಳೆದುಕೊಂಡಿದ್ದಾರೆ. ಕೆಲವರಿಗೆ ಆಹಾರ ಸೇವಿಸಲು ಕೂಡ ಸಾಧ್ಯವಾಗುವುದಿಲ್ಲ.  ಉಸಿರಾಟದ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳಿಗೊಳಗಾತ್ತಿದ್ದಾರೆ. ನಾನು ಆ್ಯಸಿಡ್ ದಾಳಿಗೊಳಗಾದವರನ್ನು ಭೇಟಿ ಮಾಡಿದ್ದೇನೆ.  ಆ್ಯಸಿಡ್ ದಾಳಿಗೆ ಒಳಗಾಗಿದ್ದರೂ ಧೈರ್ಯದಿಂದ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಬದುಕಿನ ಬಗ್ಗೆ ಎಷ್ಟು ಆತ್ಮಸ್ಥೈರ್ಯ ಇರಬೇಕು ಎಂದರು.

ಆ್ಯಸಿಡ್ ದಾಳಿಗೆ ಒಳಗಾದವರಿಗೆ ಪಿಂಚಣಿಯನ್ನು 3 ಸಾವಿರ ನೀಡಲಾಗುತ್ತಿತ್ತು. ಈ ಹಣವನ್ನು 10 ಸಾವಿರಕ್ಕೆ ಏರಿಕೆ ಮಾಡಲಾಗಿದೆ. ಈ ಮುಂಚೆಯೇ ಮಾಡಬೇಕಿತ್ತು. ಇದೇನ್ ದೊಡ್ಡ ಕೆಲಸವಲ್ಲ. ಮಾನವೀಯತೆಯಿಂದ, ಹೃದಯದಿಂದ ಮಾಡೋ ಕೆಲಸವಾಗಿದೆ. ಅವರಿಗೆ ನಿವೇಶನ, ಮನೆ ಇಲ್ಲ ಎಂಬುದಾಗಿ ಅವರು ಹೇಳಿದ್ದಾರೆ. ಈಗಾಗಲೇ ಅಧಿಕಾರಿಗೆ ಸೂಚಿಸಿದ್ದೇನೆ. ನಿವೇಶನ ಕೊಟ್ಟು, ಮನೆ ಕಟ್ಟಿಸಿಕೊಡುವಂತ ಕೆಲಸ ಮಾಡಲಾಗುತ್ತದೆ ಎಂದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ನಿಂಬೆ ಹಣ್ಣಿಗೆ ಕೆ.ಜಿಗೆ 300: ಕೇಂದ್ರ ಸರ್ಕಾರವನ್ನು ತರಾಟೆಗೆತ್ತಿಕೊಂಡ ಸಚಿನ್ ಪೈಲಟ್

ಬೆಂಗಳೂರು ಡೇಸ್  ಖ್ಯಾತಿಯ ನತಾಶಾ ನಾಯಿಮರಿ ಇನ್ನು ಕೇವಲ ನೆನಪು ಮಾತ್ರ

ರಾಜ್ಯದ ಎಲ್ಲ ನಗರಗಳಲ್ಲಿ “ನಮ್ಮ ಕ್ಲಿನಿಕ್ “ಸ್ಥಾಪನೆ ಸಿಎಂ ಬೊಮ್ಮಾಯಿ

ನಟಿ ಮತ್ತು ರೂಪದರ್ಶಿ ನಿಗೂಢ ಸ್ಥಿತಿಯಲ್ಲಿ ಸಾವು;  ಪತಿ ಬಂಧನ

ಉತ್ತರ ಪ್ರದೇಶದ ಮದ್ರಸಾಗಳಲ್ಲಿ ರಾಷ್ಟ್ರಗೀತೆ ಕಡ್ಡಾಯ!

 

ಇತ್ತೀಚಿನ ಸುದ್ದಿ