ಮಂದಿರ, ಮಸೀದಿಗೆ ಹೊಡೆದಾಡುವ ಬದಲು ಆಸ್ಪತ್ರೆಗೆ ಹೊಡೆದಾಡಿದ್ದರೆ ದೇಶಕ್ಕೆ ಈ ಸ್ಥಿತಿ ಬರುತ್ತಿತ್ತೇ? | ಓದುಗರ ಲೇಖನ - Mahanayaka

ಮಂದಿರ, ಮಸೀದಿಗೆ ಹೊಡೆದಾಡುವ ಬದಲು ಆಸ್ಪತ್ರೆಗೆ ಹೊಡೆದಾಡಿದ್ದರೆ ದೇಶಕ್ಕೆ ಈ ಸ್ಥಿತಿ ಬರುತ್ತಿತ್ತೇ? | ಓದುಗರ ಲೇಖನ

india corona
16/04/2021

ಮಂದಿರ-ಮಸೀದಿಗಾಗಿ ಮಾಡುವ ಹೋರಾಟವನ್ನು ಆಸ್ಪತ್ರೆ ನಿರ್ಮಾಣಕ್ಕಾಗಿ ಭಾರತ ಮಾಡಿದ್ದರೆ ಇಂದು ಭಾರತದಲ್ಲಿ ಒಂದು ಬೆಡ್ ನಲ್ಲಿ ಇಬ್ಬರು ಮಲಗುವಂತಹ ಸನ್ನಿವೇಶ ಸೃಷ್ಟಿಯಾಗುತ್ತಿರಲಿಲ್ಲ. ರೋಗ ಬಂದಾಗ ಆಸ್ಪತ್ರೆಯೇ ಬೇಕೇ ಹೊರತು ದೇವಸ್ಥಾನವಲ್ಲ.

ಕೊರೊನಾ ಇಡೀ ವಿಶ್ವವನ್ನೇ ನುಂಗಿ ಹಾಕುತ್ತಿದೆ. ಭಾರತದಲ್ಲಿ ಕೊರೊನಾ ಎರಡನೇ ಬೇಟೆ ಆರಂಭಿಸಿದೆ. ಇದೇ ಸಂದರ್ಭದಲ್ಲಿ ಆಸ್ಪತ್ರೆಗಳಲ್ಲಿ ಬೆಡ್ ಇಲ್ಲ. ಒಂದೊಂದು ಬೆಡ್ ಗಳಲ್ಲಿ ಇಬ್ಬರು ರೋಗಿಗಳು ಮಲಗುವಂತಹ ಸ್ಥಿತಿಯ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇವೆಲ್ಲವೂ ಬುದ್ಧನ ನಾಡಿನಲ್ಲಿ ಕೆಲವು ಮೂರ್ಖರು ಸೃಷ್ಟಿಸಿದ ಮೌಢ್ಯತೆ, ದ್ವೇಷ, ಅಸೂಯೆಗಳ ಫಲ.

ಭಾರತೀಯರು ತಮಗೆ ಯಾವುದು ಅವಶ್ಯಕತೆ ಎನ್ನುವುದನ್ನು ಅರಿತು ಬದುಕಬೇಕಾದ ಸಂದರ್ಭ ಇದು. ಗೋಮೂತ್ರದಿಂದ ಕೊರೊನಾ ನಿಯಂತ್ರಣವಾಗುತ್ತದೆ ಎಂದು ಹೇಳಿಕೆ ಕೊಡುವ ಮೂರ್ಖರು ತಮಗೆ ಕೊರೊನಾ ಬಂದಾಗ ದೊಡ್ಡ ದೊಡ್ಡ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂತ್ರದಿಂದ, ಹೋಮದಿಂದ ಕೊರೊನಾ ಓಡಿಸುತ್ತೇನೆ ಎನ್ನುವ ಮೂರ್ಖರು ತಮಗೆ ಕೊರೊನಾ ಬಂದಾಗ ಆಸ್ಪತ್ರೆಗೆ ದಾಖಲಾಗುತ್ತಾರೆ ಇದಲ್ಲವೇ ಯಶಸ್ವಿ ನಯವಂಚಕರ ಅಸಲಿ ಮುಖ.


Provided by

ಮಂದಿರ-ಮಸೀದಿಗಳ ನಿರ್ಮಾಣದ ಹೋರಾಟದಲ್ಲಿ ಬಿದ್ದ ಹೆಣಗಳೆಷ್ಟು ಎನ್ನುವುದನ್ನು ಲೆಕ್ಕ ಹಾಕಲು ಕೂಡ ಕಷ್ಟ. ಆದರೆ ಮಂದಿರ, ಮಸೀದಿಯ ನಿರ್ಮಾಣದ ಅದೇ ಹಣದಲ್ಲಿ ದೊಡ್ಡದಾದ ಆಸ್ಪತ್ರೆಗಳನ್ನು ಪ್ರತಿ ಜಿಲ್ಲೆಗಳಲ್ಲಿಯೂ ನಿರ್ಮಿಸಿದ್ದರೆ. ಇಂದು ಒಂದು ಬೆಡ್ ನಲ್ಲಿ ಇಬ್ಬರು ಮಲಗುವಂತಹ ಸ್ಥಿತಿ ದೇಶದಲ್ಲಿ ನಿರ್ಮಾಣವಾಗುತ್ತಿರಲಿಲ್ಲ.

ಕೊರೊನಾದ ತೀವ್ರತೆ ಮತ್ತೆ ಕಡಿಮೆಯಾದಾಗ ಜನರ ಗಮನ ಮತ್ತೆ ಮಂದಿರ, ಮಸೀದಿಗಳ ಬಳಿಗೆ ಹೋಗುತ್ತದೆ. ಮತ್ತೆ ಜನರು ಮೂಲಭೂತ ಅವಶ್ಯಕತೆಗಳನ್ನು ಮರೆತು ಬಿಡುತ್ತಾರೆ. ತಮ್ಮ ಭಾವನಾತ್ಮಕ ವಿಚಾರಗಳೇ ಮುಖ್ಯವಾಗಿ, ಆವಶ್ಯಕತೆಗಳನ್ನು ಮರೆತು ಬಿಡುತ್ತಾರೆ.

  • ಮಹದೇವ್, ಪಿರಿಯಪಟ್ಟಣ

ಇತ್ತೀಚಿನ ಸುದ್ದಿ