ಆಸ್ಪತ್ರೆಯಲ್ಲಿ ಬೆಡ್ ಇಲ್ಲ: ಫುಟ್ಪಾತ್ ನಲ್ಲಿಯೇ ರೋಗಿಗಳಿಗೆ ಚಿಕಿತ್ಸೆ ನೀಡಿದ ಆಸ್ಪತ್ರೆ!
ಫಿರೋಜಾಬಾದ್: ಉತ್ತರ ಪ್ರದೇಶ ಮತ್ತೊಮ್ಮೆ ವೈದ್ಯಕೀಯ ಅವ್ಯವಸ್ಥೆಗೆ ಸಂಬಂಧಿಸಿದಂತೆ ಸುದ್ದಿಯಲ್ಲಿದ್ದು, ರಾಜ್ಯದಲ್ಲಿ ಡೆಂಗ್ಯೂ ರೋಗ ಭಾರೀ ಪ್ರಮಾಣದಲ್ಲಿ ಏರಿಕೆಯಾದ ಪರಿಣಾಮ ಇಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ 30ಕ್ಕೂ ಅಧಿಕ ರೋಗಿಗಳಿಗೆ ಡ್ರಿಪ್ಸ್ ಹಾಕಿ ಫುಟ್ಪಾತ್ ನಲ್ಲಿಯೇ ಚಿಕಿತ್ಸೆ ನೀಡಲಾಗಿದೆ.
ಬೆಡ್ ಇಲ್ಲವಾದರೂ, ರೋಗಿಗಳ ಮೇಲೆ ಆಸ್ಪತ್ರೆಯು ಕರುಣೆ ತೋರಿ, ಫುಟ್ಪಾತ್ ನಲ್ಲಿಯೇ ಚಿಕಿತ್ಸೆ ನೀಡಿದೆ ಆದರೆ, ಯೋಗಿ ಸರ್ಕಾರವು ಆಸ್ಪತ್ರೆಯ ವಿರುದ್ಧವೇ ಕ್ರಮಕೈಗೊಂಡಿದ್ದು, ಆಸ್ಪತ್ರೆಯ ಲೈಸೆನ್ಸ್ ರದ್ದುಗೊಳಿಸಿ, ಆಸ್ಪತ್ರೆಯನ್ನು ಸೀಲ್ ಮಾಡಲು ಅಧಿಕಾರಿಗಳು ಆಗಮಿಸಿದ ವೇಳೆ ರೋಗಿಗಳ ಸಂಬಂಧಿಕರು ಅಧಿಕಾರಿಗಳಿಗೆ ಹಿಡಿಶಾಪ ಹಾಕಿ ತಮ್ಮ ಅಸಹಾಯಕತೆಯನ್ನು ತೋರಿಸಿದ್ದಾರೆ.
ಆಗಸ್ಟ್ ಬಳಿಕ ಡೆಂಗ್ಯೂ ಪ್ರಕರಣಗಳು 4,800 ಗಡಿ ದಾಟಿರುವ ಕಾರಣ ಆಸ್ಪತ್ರೆಗಳಲ್ಲಿ ಹಾಸಿಗೆಗಳಿಲ್ಲದ ಕಾರಣ ರೋಗಿಗಳ ಸಂಬಂಧಿಕರು ಪರದಾಡುತ್ತಿದ್ದಾರೆ. ಇದೀಗ ಆಸ್ಪತ್ರೆಗಳಲ್ಲಿಯೂ ಬೆಡ್ ಸಿಗದೇ ಜನರು ಪರದಾಡುತ್ತಿದ್ದಾರೆ.
ಆಸ್ಪತ್ರೆಯಲ್ಲಿ ಬೆಡ್ ಇಲ್ಲದಿದ್ದರೂ, ರಾಷ್ಟ್ರೀಯ ಹೆದ್ದಾರಿ 2ರ ಫುಟ್ಪಾತ್ ಮೇಲೆಯೇ ಹಾಸಿಗೆ ವ್ಯವಸ್ಥೆ ಮಾಡಿದ ಆಸ್ಪತ್ರೆಯು ರೋಗಿಗಳು ಚಿಕಿತ್ಸೆ ಸಿಗದೇ ಸಾಯುವುದನ್ನು ತಪ್ಪಿಸಲು ಮುಂದಾಗಿತ್ತು ಎನ್ನಲಾಗಿದೆ. ಆದರೆ, ಇಲ್ಲಿರುವ ರೋಗಿಗಳಿಗೆ ಪರ್ಯಾಯ ವ್ಯವಸ್ಥೆಗಳನ್ನು ಮಾಡದೇ ಇದೀಗ ಆಸ್ಪತ್ರೆಯನ್ನೇ ಬಂದ್ ಮಾಡಿಸುವ ಮೂಲಕ ಉತ್ತರ ಪ್ರದೇಶ ಸರ್ಕಾರ ಮತ್ತೊಮ್ಮೆ ಜನ ವಿರೋಧಿ ನೀತಿಯನ್ನು ಪ್ರದರ್ಶಿಸಿದೆ ಎನ್ನುವ ಆಕ್ರೋಶಗಳು ಕೇಳಿ ಬಂದಿವೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GprkhpfFmuL8YDKlAEmru9
ಇನ್ನಷ್ಟು ಸುದ್ದಿಗಳು…
ಆಸ್ಪತ್ರೆ ಸ್ಟಾಫ್ ನರ್ಸ್ ಆತ್ಮಹತ್ಯೆಗೆ ಹೊಸ ತಿರುವು: ಮೊಬೈಲ್ ನಲ್ಲಿ ಪತ್ತೆಯಾದ ಫೋಟೋಗಳಿಂದ ರಹಸ್ಯ ಬಯಲು
ಅರ್ಜಿ ನೀಡಲು ಬಂದ ಮಹಿಳೆಗೆ ಕಿರುಕುಳ: ಗ್ರಾ.ಪಂ. ಸದಸ್ಯನ ವಿರುದ್ಧ ದೂರು
ಮನೆ ಕುಸಿದು 7 ಮಂದಿ ಸಾವು ಪ್ರಕರಣ: ಮೃತರ ಕುಟುಂಬಸ್ಥರಿಗೆ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ
2,700 ವರ್ಷದ ಹಳೆಯ ಪುರಾತನ ಐಶಾರಾಮಿ ಶೌಚಾಲಯ ಪತ್ತೆ!
ಅಣಬೆ ಸೇವಿಸಿ ಒಂದೇ ಕುಟುಂಬದ 10 ಮಂದಿ ಅಸ್ವಸ್ಥ | ಮಹಿಳೆಯ ಸ್ಥಿತಿ ಗಂಭೀರ
ದೂರವಾಗಿದ್ದ ಪತ್ನಿಯ ಬಳಿಗೆ ಬಂದು ಅಪ್ಪಿಕೊಂಡ ಪತಿ | ಕ್ಷಣ ಮಾತ್ರದಲ್ಲಿ ಇಬ್ಬರ ದೇಹವೂ ಛಿದ್ರಛಿದ್ರ!
ತಂದೆಯಿಂದಲೇ ಮಗನ ಮೇಲೆ ಗುಂಡೇಟು: ಬಾಲಕನ ಮೆದುಳು ನಿಷ್ಕ್ರಿಯ | ಅಂಗಾಂಗ ದಾನಕ್ಕೆ ಸಿದ್ಧತೆ