ಆಸ್ಪತ್ರೆಯಲ್ಲಿಯೇ ಮದುವೆಯಾದ ಜೋಡಿ | ಏನಿದು ಘಟನೆ?
09/02/2021
ತಿರುವನಂತಪುರಂ: ಮದುವೆ ಎಂದರೆ, ಮಂಟಪದಲ್ಲಿಯೋ , ಮನೆಯಲ್ಲಿಯೋ ಅಥವಾ ರಿಜಿಸ್ಟರ್ ಆಫೀಸ್ ನಲ್ಲಿಯೋ ಸಾಮಾನ್ಯವಾಗಿ ನಡೆಯುತ್ತದೆ. ಆದರೆ ಇಲ್ಲೊಂದು ಮದುವೆ ಆಸ್ಪತ್ರೆಯಲ್ಲಿ ನಡೆದಿದೆ.
ತಿರುವನಂತಪುರಂ ನಿವಾಸಿ ಮನೋಜ್ ಮತ್ತು ರೇವತಿ ಎಂಬ ಜೋಡಿಗೆ ಆಸ್ಪತ್ರೆಯೊಂದರಲ್ಲಿ ವಿವಾಹವಾಗಿದೆ. ಫೆ.4ರಂದು ಇವರ ಮದುವೆ ನಡೆಯಬೇಕಿತ್ತು. ಆದರೆ ಮನೋಜ್ ತುರ್ತು ಚಿಕಿತ್ಸೆಗೆ ಒಳಗಾಗಬೇಕಿತ್ತು. ಹೀಗಾಗಿ ಅದ್ದೂರಿಯಾಗಿ ಆಯೋಜಿಸಿದ್ದ ಮದುವೆ ನಡೆಯಲಿಲ್ಲ.
ಮದುವೆ ಇನ್ನಷ್ಟು ದಿನ ಮುಂದೆ ಹೋಗಬಾರದು ಎಂಬ ಕಾರಣಕ್ಕೆ ಫೆ.6ರಂದು ಕುಟುಂಬ ಹಾಗೂ ಆಸ್ಪತ್ರೆ ಸಿಬ್ಬಂದಿ ಸಮ್ಮುಖದಲ್ಲಿ ಮನೋಜ್ ಬೆಡ್ ಮೇಲೆ ಮಲಗಿಕೊಂಡೇ ವಧು ರೇವತಿಗೆ ತಾಳಿ ಕಟ್ಟಿದ್ದಾರೆ.
ಎಸ್ ಪಿ ಫೋರ್ಟ್ ಆಸ್ಪತ್ರೆಯ ಕೋಣೆಯನ್ನು ಮದುವೆ ಮಂಟಪವಾಗಿ ಬದಲಾಯಿಸಿ ಮದುವೆ ನೆರವೇರಿಸಲಾಗಿದೆ. ಸಿನಿಮೀಯ ಶೈಲಿಯಲ್ಲಿ ಈ ವಿವಾಹವನ್ನು ನಡೆಸುವ ಮೂಲಕ ಸುದ್ದಿಯಾಗಿದ್ದಾರೆ. ಮದುವೆಯಲ್ಲಿ ಆಸ್ಪತ್ರೆಯ ಸಿಇಒ ಡಾ.ಪಿ.ಅಶೋಕನ್, ಡಾ.ಲೈಜಾ ಮತ್ತು ಇತರೆ ಸಿಬ್ಬಂದಿ ಮದುವೆಯಲ್ಲಿ ಪಾಲ್ಗೊಂಡರು.