ಆಸ್ಪತ್ರೆಯಲ್ಲೂ ಬಿಡಲಿಲ್ಲ ಕಾಮುಕ ಬುದ್ಧಿ | ಮಹಿಳೆ ಸ್ನಾನಕ್ಕೆ ತೆರಳಿದಾಗ ನಡೆಸಿದ ನೀಚ ಕೃತ್ಯ - Mahanayaka
2:16 AM Wednesday 5 - February 2025

ಆಸ್ಪತ್ರೆಯಲ್ಲೂ ಬಿಡಲಿಲ್ಲ ಕಾಮುಕ ಬುದ್ಧಿ | ಮಹಿಳೆ ಸ್ನಾನಕ್ಕೆ ತೆರಳಿದಾಗ ನಡೆಸಿದ ನೀಚ ಕೃತ್ಯ

13/02/2021

ಉಳ್ಳಾಲ: ಈತ ಆಸ್ಪತ್ರೆಯಲ್ಲಿ ಕೂಡ ತನ್ನ ಕಾಮುಕ ಬುದ್ಧಿಯನ್ನು ಬಿಡಲಿಲ್ಲ. ಖಾಸಗಿ ಆಸ್ಪತ್ರೆಯ ಕೊಠಡಿಯಲ್ಲಿ ಮಹಿಳೆ ಸ್ನಾನ ಮಾಡುತ್ತಿದ್ದ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆ ಹಿಡಿದು ಅಲ್ಲಿಂದ ಪರಾರಿಯಾಗಿದ್ದ ಕಾಮುಕನನ್ನು ಉಳ್ಳಾಲ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಮದನಿನಗರ ನಿವಾಸಿ ಅಬ್ದುಲ್ ಮುನೀರ್(40) ಬಂಧಿತ ಆರೋಪಿಯಾಗಿದ್ದಾನೆ.  ಅನಾರೋಗ್ಯ ಪೀಡಿತ ಮಹಿಳೆಯ ಜೊತೆಗೆ ಆಸ್ಪತ್ರೆಯಲ್ಲಿ ನಿಂತಿದ್ದ ಮಹಿಳೆಯನ್ನು ಟಾರ್ಗೆಟ್ ಮಾಡಿದ್ದ ಈತ, ಆಕೆ ಸ್ನಾನಕ್ಕೆ ತೆರಳಿದ ಸಂದರ್ಭದಲ್ಲಿ  ಮೊಬೈಲ್ ಮೂಲಕ ದೃಶ್ಯ ಸೆರೆ ಹಿಡಿದಿದ್ದಾನೆ ಅದೃಷ್ಟವಶಾತ್ ಮಹಿಳೆ ಈತನ ಕೃತ್ಯವನ್ನು ಗಮನಿಸಿದ್ದು, ತಕ್ಷಣವೇ ಆಕೆ ಹೊರ ಬಂದಾಗ ಸ್ಥಳದಿಂದ ಪರಾರಿಯಾಗಿದ್ದ.

ಘಟನೆ ಸಂಬಂಧ ಮಹಿಳೆ ಜ.20ರಂದು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಆಸ್ಪತ್ರೆಯ ಸಿಸಿ ಕ್ಯಾಮರ ದೃಶ್ಯಗಳನ್ನು ಪರಿಶೀಲಿಸಿದ್ದು, ಈ ವೇಳೆ ಕಾಮುಕ ಮುನೀರ್ ನ ಕೃತ್ಯ ಬಯಲಾಗಿದೆ.

ಶುಕ್ರವಾರ ಈ ಕಾಮುಕನನ್ನು ಪೊಲೀಸರು ಆತನ ಮನೆಯ ಸಮೀಪದಲ್ಲಿಯೇ ಬಂಧಿಸಿದ್ದಾರೆ. ಉಳ್ಳಾಲ ಠಾಣಾಧಿಕಾರಿ ಸಂದೀಪ್ ಜಿ.ಎಸ್. ಹಾಗೂ ಪಿಎಸ್ ಐ ಶಿವಕುಮಾರ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಯಿತು. ಎಎಸ್ ಐ ರೇವಣ್ಣ ಸಿದ್ದಯ್ಯ ಹಾಗೂ ಸಿಬ್ಬಂದಿ ಪ್ರಶಾಂತ್ ಮತ್ತು ಅಕ್ಬರ್ ಕೂಡ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

ಇತ್ತೀಚಿನ ಸುದ್ದಿ