ಅಸ್ಪೃಶ್ಯತೆ ಜೀವಂತವಿದೆ ಎನ್ನುವುದನ್ನು ಒಪ್ಪಿಕೊಂಡು ಬದಲಾವಣೆಗೆ ಶ್ರಮಿಸಬೇಕು | ಡಿವೈಎಸ್ ಪಿ ರಮೇಶ್ - Mahanayaka
5:09 AM Wednesday 11 - December 2024

ಅಸ್ಪೃಶ್ಯತೆ ಜೀವಂತವಿದೆ ಎನ್ನುವುದನ್ನು ಒಪ್ಪಿಕೊಂಡು ಬದಲಾವಣೆಗೆ ಶ್ರಮಿಸಬೇಕು | ಡಿವೈಎಸ್ ಪಿ ರಮೇಶ್

dysp ramesh
25/09/2021

ಕುಣಿಗಲ್: ಗ್ರಾಮೀಣ ಪ್ರದೇಶಗಳಲ್ಲಿ ಅಸ್ಪೃಶ್ಯತೆ ಜೀವಂತವಾಗಿದೆ ಎನ್ನುವುದನ್ನು ಒಪ್ಪಿಕೊಂಡು ಬದಲಾವಣೆಗೆ ಶ್ರಮಿಸಬೇಕಿದೆ ಎಂದು ಡಿವೈಎಸ್ ಪಿ ರಮೇಶ್ ಹೇಳಿದ್ದು, ಅಸ್ಪೃಶ್ಯತೆ ಆಚರಣೆಯಿಂದಾಗಿ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಪಟ್ಟಣದಲ್ಲಿ ಶುಕ್ರವಾರ ತಾಲ್ಲೂಕು ಆಡಳಿತ, ಮುಜರಾಯಿ ಇಲಾಖೆ ಮತ್ತು ಪೊಲೀಸ್ ಇಲಾಖೆಯಿಂದ ಎಲ್ಲ ಸಮುದಾಯದವರಿಗೆ ದೇವಾಲಯಗಳಲ್ಲಿ ಮುಕ್ತ ಪ್ರವೇಶ ಕಲ್ಪಿಸುವ ಕುರಿತು ದೇವಾಲಯಗಳ ಆಡಳಿತ ಮಂಡಳಿ ಮತ್ತು ಅರ್ಚಕರಿಗೆ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಅನಿಷ್ಠ ಪದ್ಧತಿ ಬಗ್ಗೆ ಯಾರು ದೂರು ನೀಡುತ್ತಿಲ್ಲ. ಆದರೂ ಸತ್ಯವನ್ನು ಒಪ್ಪಿಕೊಂಡು, ಅಸ್ಪೃಶ್ಯತೆ ನಿರ್ಮೂಲನೆಗೆ ಶ್ರಮಿಸಬೇಕು. ಮುಜರಾಯಿ ಇಲಾಖೆ ಅತ್ಯಂತ ಶ್ರೀಮಂತ ಇಲಾಖೆಯಾಗಿದ್ದು, ಎಲ್ಲ ದೇವಾಲಯಗಳಲ್ಲಿ ಸಿ.ಸಿ. ಟಿವಿ ಕ್ಯಾಮೆರಾ, ಎಚ್ಚರಿಕೆಯ ಫಲಕ ಅಳವಡಿಸಿ, ಜನಜಾಗೃತಿ ಮೂಡಿಸಬೇಕಿದೆ ಎಂದರು.

ತಹಶೀಲ್ದಾರ್ ಮಹಬಲೇಶ್ವರ ಮಾತನಾಡಿ, ಅನಿಷ್ಠ ಪದ್ಧತಿ ಮತ್ತು ಕಂದಾಚಾರ ಪದ್ಧತಿಗಳನ್ನು ತೊಡೆದು, ಸರ್ವರಿಗೂ ದೇವಾಲಯ ಪ್ರವೇಶಕ್ಕೆ ಮತ್ತು ಪೂಜೆಗೆ ಅವಕಾಶ ನೀಡಬೇಕು. ದೇವಸ್ಥಾನದಲ್ಲಿ ಅರ್ಚಕರು ತಾರತಮ್ಯ ಮಾಡುತ್ತಿಲ್ಲ. ಕೆಲ ಗ್ರಾಮಗಳಲ್ಲಿ ಪರಿಶಿಷ್ಟ ವರ್ಗದವರು ದೇವಾಲಯಕ್ಕೆ ಬರುವುದಿಲ್ಲ. ಅವರೇ ಮುಖ್ಯದ್ವಾರದಲ್ಲಿ ನಿಂತು ಕೈಮುಗಿದು ಹೋಗುತ್ತಾರೆ. ಕೆಲ ಗ್ರಾಮದಲ್ಲಿ ಗ್ರಾಮಸ್ಥರ ವಿರೋಧವಿರುವುದರಿಂದ ದೇವಾಲಯಕ್ಕೆ ಪ್ರವೇಶ ಮಾಡುತ್ತಿಲ್ಲ. ಸಂದಿಗ್ಧ ಪರಿಸ್ಥಿತಿಯಲ್ಲಿ ಅರ್ಚಕರು ಮೌನವಹಿಸಬೇಕಾಗುತ್ತದೆ. ಎಲ್ಲ ದೇವಾಲಯಗಳಿಗೂ ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಕೆ ಮತ್ತು ಎಚ್ಚರಿಕೆಯ ಫಲಕಗಳನ್ನು ಮುಜರಾಯಿ ಇಲಾಖೆಯಿಂದ ವ್ಯವಸ್ಥೆ ಮಾಡಬೇಕಿದೆ ಎಂದು ಅವರು ಹೇಳಿದರು.

ದಲಿತ ಜಾಗೃತಿ ಸಮಿತಿಯ ದಲಿತ್ ನಾರಾಯಣ್ ಮಾತನಾಡಿ, ದೇವಾಲಯಗಳು ಸಮಾನತೆ ಸಾರುವ ಕೇಂದ್ರಗಳಾಗುವ ಬದಲು, ಅಸಮಾನತೆ ಸಾರುವ ಕೇಂದ್ರಗಳಾಗುತ್ತಿವೆ. ಈ ರೀತಿಯ ವರ್ತನೆ ಹಿಂದೂ ಧರ್ಮಕ್ಕೆ ಅವಮಾನ. ತಾಲ್ಲೂಕಿನಲ್ಲಿ ಮೊದಲಿಗೆ ದೇವಾಲಯಗಳ ಮುಂದೆ ಮುಕ್ತ ಪ್ರವೇಶಕ್ಕೆ ಅವಕಾಶ ನೀಡಿ ಫಲಕ ಬರೆಸಲಾಗಿತ್ತು. ಸುಣ್ಣ ಬಣ್ಣ ಬಳಿಯುವ ನೆಪದಲ್ಲಿ ಫಲಕಗಳು ಕಾಣೆಯಾಗಿವೆ. ಗ್ರಾಮೀಣ ಪ್ರದೇಶದ ದೇವಾಲಯಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಅರ್ಚಕರು ಮನಸ್ಸು ಮಾಡಿ ಹೊರಗಡೆ ನಿಂತು ಕೈ ಮುಗಿಯುವವರನ್ನು ದೇವಾಲಯಗಳಿಗೆ ಕರೆದು ಪೂಜೆಗೆ ಅವಕಾಶ ನೀಡುವ ಮೂಲಕ ಬದಲಾವಣೆಗೆ ಪ್ರೇರಣಾಕರ್ತರಾಗಬೇಕು ಎಂದರು.

ದಲಿತ ಸಮನ್ವಯ ಸಮಿತಿಯ ರಾಮಚಂದ್ರಯ್ಯ, ದೇವಾಲಯಗಳಿಗೆ ಮುಕ್ತ ಪ್ರವೇಶ ನೀಡುವ ಜತೆಗೆ ಪರಿಶಿಷ್ಟ ವರ್ಗದವರಿಗೆ ತರಬೇತಿ ನೀಡಿ ಅರ್ಚಕ ವೃತ್ತಿಯಲ್ಲಿ ತೊಡಗಲು ಸಹಕರಿಸಬೇಕು ಎಂದು ಮನವಿ ಮಾಡಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/KPRE32QAEFL3ZvRW2wbYvj

ಇನ್ನಷ್ಟು ಸುದ್ದಿಗಳು…

ಪ್ರೀತಿಸಿ ವಿವಾಹವಾದ ಪತ್ನಿಗೆ ಅಕ್ರಮ ಸಂಬಂಧ | ಫೇಸ್ ಬುಕ್ ಲೈವ್ ಗೆ ಬಂದು ಪತ್ನಿ ಆತ್ಮಹತ್ಯೆ

ಎಗ್ ರೈಸ್, ಗೋಬಿ ಮಂಚೂರಿ ಆಸೆ ತೋರಿಸಿ ಬಾಲಕಿಯನ್ನು ಅತ್ಯಾಚಾರ ನಡೆಸಿದ್ದ ಕಾಮುಕ ಅರೆಸ್ಟ್!

ಗೋ ಕಳ್ಳತನಕ್ಕೆ ಜಾತಿ ಇಲ್ಲ, ಧರ್ಮ ಇಲ್ಲ, ಬಿಜೆಪಿಯವರೇ ಬೀಫ್ ಎಕ್ಸ್ ಪೋರ್ಟ್ ಮಾಡ್ತಿದ್ದಾರೆ | ಮಿಥುನ್ ರೈ

ಮೊಬೈಲ್ ಟವರ್ ಗೆ ಹತ್ತಿಕೊಂಡ ಬೆಂಕಿ: ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ

ರಾಜ್ಯದಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ: ತರಕಾರಿ ತರಲು ಹೋದ ಬಾಲಕಿಯ ಮೇಲೆ ಅತ್ಯಾಚಾರ

ರಾಮ, ಕೃಷ್ಣ, ಶಿವ ಭಾರತದ ಮುಸ್ಲಿಮರ ಪೂರ್ವಜರು ಎಂದ ಉತ್ತರ ಪ್ರದೇಶ ಸಚಿವ!

ರಕ್ತದಲ್ಲಿ ಹಿಮೋಗ್ಲೋಬಿನ್ ಕಡಿಮೆಯಾದರೆ ಗಂಭೀರ ಸಮಸ್ಯೆ ಉಂಟಾಗಬಹುದು | ಇದಕ್ಕೆ ಪರಿಹಾರವೇನು?

ಇತ್ತೀಚಿನ ಸುದ್ದಿ