ಬಿಜೆಪಿ ಮುಖಂಡನ ಜತೆಗಿನ ಅನೈತಿಕ ಸಂಬಂಧದ ಫೋಟೋ ವೈರಲ್: ಬಿಜೆಪಿ ಮಹಿಳಾ ಮುಖಂಡೆ ಆತ್ಮಹತ್ಯೆ - Mahanayaka
4:03 PM Thursday 12 - December 2024

ಬಿಜೆಪಿ ಮುಖಂಡನ ಜತೆಗಿನ ಅನೈತಿಕ ಸಂಬಂಧದ ಫೋಟೋ ವೈರಲ್: ಬಿಜೆಪಿ ಮಹಿಳಾ ಮುಖಂಡೆ ಆತ್ಮಹತ್ಯೆ

12/08/2023

ಬಿಜೆಪಿ ಪಕ್ಷದ ನಾಯಕನೊಂದಿಗೆ ಖಾಸಗಿ ಕ್ಷಣಗಳನ್ನು ಕಳೆದ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆದ ಬಳಿಕ ಅಸ್ಸಾಂನ ಬಿಜೆಪಿ ಮಹಿಳಾ ಮುಖಂಡೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅಸ್ಸಾಂನ ಗುವಾಹಟಿಯ ಬಾಮುನಿಮೈದಂ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಚೇಂಬರ್ ಆಫ್ ಕಾಮರ್ಸ್‌ನ ಉಪಾಧ್ಯಕ್ಷೆ ಹಾಗೂ ಕಿಸಾನ್‌ ಮೋರ್ಚಾದ ಖಜಾಂಚಿ ಆಗಿದ್ದ ಇಂದ್ರಾಣಿ ತಹಬಿಲ್ದಾರ್ ಮೃತಪಟ್ಟವರು.

ಇಂದ್ರಾಣಿ ಅವರು ತನ್ನ ಮನೆಯಲ್ಲಿ ಬಾಡಿಗೆದಾರನಾಗಿದ್ದ ಬಿಜೆಪಿ ನಾಯಕನೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಇವರಿಬ್ಬರ ಅಶ್ಲೀಲ ಫೋಟೋಗಳು ವೈರಲ್‌ ಆದ ಬಳಿಕ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ.

‘ಪೊಲೀಸರು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಇದನ್ನು ಅಸಹಜ ಸಾವು ಎಂದು ಪರಿಗಣಿಸಲಾಗಿದ್ದು, ತನಿಖೆ ಆರಂಭಿಸಲಾಗಿದೆ. ಆದರೆ ಇಲ್ಲಿಯವರೆಗೆ, ಅಶ್ಲೀಲ ಚಿತ್ರಗಳು ಸೋರಿಕೆಯಾದ ಬಗ್ಗೆ ನಮಗೆ ಯಾವುದೇ ದೂರುಗಳು ಬಂದಿಲ್ಲ. ಆದರೆ ನಾವು ಎಲ್ಲವನ್ನೂ ಪರಿಶೀಲಿಸುತ್ತಿದ್ದೇವೆ’ ಎಂದು ಕೇಂದ್ರ ಗುವಾಹಟಿಯ ಡಿಸಿಪಿ ದೀಪಕ್ ಚೌಧರಿ ತಿಳಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BnbLYSQaXK1Hate4P0Bt3B

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ