ಅಸ್ಸಾಂ ಕಂಪಲ್ಸರಿ ರಿಜಿಸ್ಟ್ರೇಷನ್ ಆಫ್ ಮುಸ್ಲಿಂ ಮ್ಯಾರೇಜ್ ಅಂಡ್ ಡೈವೋರ್ಸ್ ಆಕ್ಟ್: ಉತ್ತರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

2024 ಫೆಬ್ರವರಿ 15ರಂದು ಅಸ್ಸಾಂ ಸರಕಾರವು ಜಾರಿಗೆ ತಂದಿರುವ ಅಸ್ಸಾಂ ಕಂಪಲ್ಸರಿ ರಿಜಿಸ್ಟ್ರೇಷನ್ ಆಫ್ ಮುಸ್ಲಿಂ ಮ್ಯಾರೇಜ್ ಅಂಡ್ ಡೈವೋರ್ಸ್ ಆಕ್ಟ್ ಅನ್ನು ಅಸ್ಸಾಂನ ವಿದ್ಯಾರ್ಥಿ ಗುಂಪು ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದು ಇದೀಗ ಉತ್ತರ ನೀಡುವಂತೆ ಹೈಕೋರ್ಟ್ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದೆ. ಹೈ ಕೋರ್ಟ್ ನ ಮುಖ್ಯ ನ್ಯಾಯಾಧೀಶ ವಿಜಯ್ ಬಿಷ್ನೋಯ್ ಮತ್ತು ನ್ಯಾಯಾಧೀಶರಾದ ಕೌಶಿಕ್ ಗೋಸ್ವಾಮಿ ಅವರಿದ್ದ ಪೀಠ ಈ ನಿರ್ದೇಶನ ನೀಡಿದೆ.
ಮುಸ್ಲಿಂ ಸ್ಟೂಡೆಂಟ್ಸ್ ಆಫ್ ಅಸ್ಸಾಂ ಸೆಂಟ್ರಲ್ ಕಮಿಟಿ ಯು ಈ ಅರ್ಜಿಯನ್ನು ಸಲ್ಲಿಸಿದ್ದು ಅಸ್ಸಾಂ ಸರಕಾರ ಜಾರಿಗೆ ತಂದಿರುವ ಅಸ್ಸಾಂ ಕಂಪಲ್ಸರಿ ರಿಜಿಸ್ಟ್ರೇಷನ್ ಆಫ್ ಮುಸ್ಲಿಂ ಮ್ಯಾರೇಜ್ ಅಂಡ್ ಡೈವೋರ್ಸ್ ಆಕ್ಟ್ ಮತ್ತು ಅಸ್ಸಾಂ ರಿಅಪೀಲಿಂಗ್ ಆಕ್ಟ್ ಅನ್ನು ರದ್ದುಗೊಳಿಸಬೇಕು ಎಂದು ತನ್ನ ಅರ್ಜಿಯಲ್ಲಿ ಕೋರಿದೆ.
ಸಮುದಾಯಗಳ ಮೂಲಭೂತ ಹಕ್ಕನ್ನು ರಕ್ಷಿಸುವ ಉದ್ದೇಶದಿಂದ ಹೈಕೋರ್ಟ್ ಈ ಆಕ್ಟ್ ಗಳನ್ನು ರದ್ದುಪಡಿಸಬೇಕು ಎಂದು ಅದು ಕೋರಿದೆ.
ಅಸ್ಸಾಂನಲ್ಲಿ ಈವರೆಗೆ 1935 ರ ಮುಸ್ಲಿಂ ಮ್ಯಾರೇಜ್ ಅಂಡ್ ಡೈವೋರ್ಸ್ ರಿಜಿಸ್ಟ್ರೇಷನ್ ಆಕ್ಟ್ ಚಾಲ್ತಿಯಲ್ಲಿತ್ತು. ಕಳೆದ ವರ್ಷ ಅಸ್ಸಾಂ ಸರಕಾರ ಯಾವುದೇ ಚರ್ಚೆಯನ್ನು ನಡೆಸದೆ ದಿಡೀರಾಗಿ ಹೊಸ ಕಾಯ್ದೆಯನ್ನು ಜಾರಿಗೆ ತಂದಿದೆ ಎಂದು ಸ್ಟೂಡೆಂಟ್ ಯೂನಿಯನ್ ನ ಅಧ್ಯಕ್ಷ ಆಶಿಕ್ ರಬ್ಬಾನಿ ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj