ಯುವತಿಯೊಂದಿಗೆ ಜ್ಯೂಸ್ ಕುಡಿದಿದ್ದಕ್ಕೆ ಹಲ್ಲೆ ಪ್ರಕರಣ: ಒಟ್ಟು ನಾಲ್ವರು ಆರೋಪಿಗಳ ಬಂಧನ - Mahanayaka
9:25 PM Wednesday 5 - February 2025

ಯುವತಿಯೊಂದಿಗೆ ಜ್ಯೂಸ್ ಕುಡಿದಿದ್ದಕ್ಕೆ ಹಲ್ಲೆ ಪ್ರಕರಣ: ಒಟ್ಟು ನಾಲ್ವರು ಆರೋಪಿಗಳ ಬಂಧನ

arrest
04/05/2023

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ ಮಹಮ್ಮದ್ ಫಾರಿಶ್ ಸಹ ವಿದ್ಯಾರ್ಥಿನಿ ಜೊತೆಗಿದ್ದಾನೆ ಎಂದು ಆರೋಪಿಸಿ ಗುಂಪೊಂದು ಮಂಗಳವಾರ ಹಲ್ಲೆ ನಡೆಸಿತ್ತು. ಯುವಕನ ಮೈಮೇಲೆ ಬಾಸುಂಡೆಗಳು ಎದ್ದಿದ್ದವು.

ಯುವಕ ಮತ್ತು ಆತನ ಜೊತೆಗಿದ್ದ ಯುವತಿ ಇಬ್ಬರೂ ಕಬಕ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳು. ಇಬ್ಬರೂ ಜ್ಯೂಸ್ ಕುಡಿಯಲು ಬಸ್‌ ನಿಲ್ದಾಣದ ಬಳಿಯ ಅಂಗಡಿಗೆ ಒಟ್ಟಿಗೆ ಹೋಗಿದ್ದಾಗ ಯುವಕನ ಮೇಲೆ ಹಲ್ಲೆ ನಡೆದಿತ್ತು. ಗಾಯಾಳು ಚಿಕಿತ್ಸೆಗಾಗಿ ಯುವಕ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು.

ಈ ಕೃತ್ಯಕ್ಕೆ ಸಂಬಂಧಿಸಿದಂತೆ ಪ್ರದೀಪ್‌ ಎಸ್‌ (19) ಎಂಬಾತನ್ನು ಪೊಲೀಸರು ಬಂಧಿಸಿದ್ದರು. ಇನ್ನು ಈ ಪ್ರಕರಣದ ಇತರ ಆರೋಪಿಗಳಾದ  ದಿನೇಶ್‌ ಗೌಡ (25), ನಿಶಾಂತ್ ಕುಮಾರ್‌ ಜಿ. (19)  ಪ್ರಜ್ವಲ್‌ (23) ಎಂಬಾತನನ್ನು ನಂತರ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ