ರಾಜ್ಯ ಕೆ.ಇ.ಎ. ಸಹಾಯಕ ಪ್ರಾಧ್ಯಾಪಕ ಹುದ್ದೆ: ರಾಜ್ಯಕ್ಕೆ 8ನೇ ರ‍್ಯಾಂಕ್ ಪಡೆದ ಬಾಳೂರು ಹೊರಟ್ಟಿ ಗ್ರಾಮದ ಲಿತಿನ್
13/12/2024
ಕೊಟ್ಟಿಗೆಹಾರ:ಮೂಡಿಗೆರೆ ತಾಲ್ಲೂಕು ಬಾಳೂರು ಹೊರಟ್ಟಿಯ ಅಡಿಗೆ ಮಲ್ಲೇಶ್ ಅವರ ಹಿರಿಯ ಪುತ್ರ ಲಿತಿನ್ ಬಿ.ಎಮ್. ಸರ್ಕಾರಿ ಹುದ್ದೆಗೆ ಆಯ್ಕೆ ಆಗಿರುತ್ತಾರೆ.
ಲಿತಿನ್ ಬಿ ಎಮ್ ಇವರು ರಾಜ್ಯ ಕೆಇಎ ನಡೆಸಿದ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ರಾಜ್ಯದಲ್ಲಿ 8ನೇ ರಾಂಕ್ ಪಡೆದು ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಆಯ್ಕೆಯಾಗಿರುತ್ತಾರೆ.
ಇವರು ಪ್ರಸ್ತುತ ಕಾರ್ಕಳದ ಹಿಡಿಯಡ್ಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಹಾಗೆಯೇ ಇವರು ತಮ್ಮ ಪಿ ಎಚ್.ಡಿ ಪದವಿಯನ್ನು ಮಣಿಪಾಲ್ ನಲ್ಲಿ ಮುಗಿಸಿರುತ್ತಾರೆ. ಹಾಗೆಯೇ ಇವರು ಎನ್ ಇಟಿ ಮತ್ತು ಜೆ ರ್ ಎಫ್ ಅನ್ನು ಪೂರ್ಣಗೊಳಿಸಿರುತ್ತಾರೆ. ಇವರ ಸಾಧನೆಗೆ ಪೋಷಕರು ಹಾಗೂ ಬಾಳೂರು ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: