ಆಸ್ತಿಗಾಗಿ ತಂದೆಯನ್ನು ಭೀಕರವಾಗಿ ಹತ್ಯೆಗೈದ ಪುತ್ರ: ಬೆಚ್ಚಿ ಬಿದ್ದ ಗ್ರಾಮಸ್ಥರು
ಲಕ್ನೋ: ಉತ್ತರ ಪ್ರದೇಶದ ಮಥುರಾದ ನರ್ಹೌಲಿಯಲ್ಲಿ ಆಸ್ತಿ ವಿಚಾರದ ಸಂಬಂಧ ವೃದ್ಧ ತಂದೆಯ ಕತ್ತು ಹಿಸುಕಿ ಪುತ್ರನೇ ಹತ್ಯೆಗೈದು, ಶವವನ್ನು ಕಂಬಳಿಯಲ್ಲಿ ಸುತ್ತಿ ನಂತರ ಬೆಂಕಿ ಹಚ್ಚಿರುವ ಘಟನೆ ನಡೆದಿದೆ.
ಅಮೃತ್ ಲಾಲ್ (55) ಮಾಸ್ಟರ್ ಮೇಸ್ತ್ರಿ ಮೃತ ದುರ್ದೈವಿ. ಸುಮಾರು 10-12 ದಿನಗಳ ಹಿಂದೆ ಅಮೃತ್ ಲಾಲ್ ಅವರ ಪತ್ನಿ ಆಶಾದೇವಿ ಅವರು ತಂದೆ-ಮಗ ಇಬ್ಬರನ್ನು ಮನೆಯಲ್ಲಿ ಬಿಟ್ಟು ತಂದೆಯ ಮನೆಗೆ ತೆರಳಿದ್ದರು. ತಂದೆಯೊಂದಿಗೆ ಏಕಾಂಗಿಯಾಗಿದ್ದ ವಿನೀತ್ ಅಮೃತ್ ಲಾಲ್ ಗೆ ಮನೆ ಮಾರಾಟ ಮಾಡುವಂತೆ ಒತ್ತಡ ಹೇರಲು ಆರಂಭಿಸಿದ್ದಾರೆ. ಇದಕ್ಕೆ ಅಮೃತ್ ಲಾಲ್ ಅವರು ನಿರಾಕರಿಸಿ ವಿನೀತ್ ಗೆ ನಿಂದಿಸಿದ್ದಾರೆ.
ಇದರಿಂದ ಕೋಪಗೊಂಡ ವಿನೀತ್ ತಂದೆಯ ಕತ್ತನ್ನು ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ಶವವನ್ನು ಕಂಬಳಿಯಲ್ಲಿ ಸುತ್ತಿ ಸುಟ್ಟು ಹಾಕಿದ್ದಾನೆ ಎನ್ನಲಾಗಿದೆ. ಈ ಘಟನೆ ಕುರಿತಂತೆ ತನಿಖೆ ವೇಳೆ ಅಮೃತ್ ಲಾಲ್ ಅವರ ಪತ್ನಿ ಆಶಾದೇವಿ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಪ್ರಿಯಕರನ ಜೊತೆ ಕರ್ನಾಟಕಕ್ಕೆ ಬಂದು ಮದುವೆಯಾದ ತಮಿಳುನಾಡು ಸಚಿವರ ಪುತ್ರಿ
ನಮ್ಮ ರಾಜ್ಯ ವಿದೇಶಿಗರ ಪಾಲಿಗೆ ಧರ್ಮಛತ್ರ ಆಗಬಾರದು: ಗೃಹ ಸಚಿವ ಆರಗ ಜ್ಞಾನೇಂದ್ರ
ಪ್ರೀತಿಸಿ ಮದುವೆಯಾದ ಯುವತಿಯನ್ನು ಎಳೆದೊಯ್ದ ಪೊಲೀಸರು
ಯುದ್ಧ ಪೀಡಿತ ಉಕ್ರೇನ್ ನಿಂದ 1,000ಕಿ.ಮೀ. ದೂರ ಒಬ್ಬನೇ ಪ್ರಯಾಣಿಸಿದ ಬಾಲಕ
ಅತ್ಯಾಚಾರ ಆರೋಪ: ಕೇರಳದ ಸಿನಿಮಾ ನಿರ್ದೇಶಕ ಲಿಜು ಕೃಷ್ಣ ಬಂಧನ