ಆಸ್ತಿಗಾಗಿ ಮದುವೆಯಾದ ನೀಚ ಕ್ರಿಸ್ ಮಸ್ ದಿನದಂದೇ ಪತ್ನಿಯನ್ನು ಕೊಂದ | 51 ವರ್ಷದ ಮಹಿಳೆಯ ಅಂತರಾಳದ ಪ್ರೀತಿಗೆ ಕೊಳ್ಳಿ ಇಟ್ಟ 28ರ ಪತಿ
ತಿರುವನಂತಪುರಂ: ಕ್ರಿಸ್ ಮಸ್ ದಿನದಂದು ಅಲಂಕಾರ ಮಾಡುತ್ತಿರುವ ಸಂದರ್ಭದಲ್ಲಿ ತನ್ನ ಪತ್ನಿ ಸಾವಿಗೀಡಾಗಿದ್ದಾಳೆ ಎಂದು ಆಸ್ಪತ್ರೆಗೆ ಮೃತದೇಹವನ್ನು ತಂದ ವ್ಯಕ್ತಿಯ ಅಸಲಿಯತ್ತು ಇದೀಗ ಬಯಲಾಗಿದೆ. ಆಕೆ ತನ್ನ 51ರ ವಯಸ್ಸಿನಲ್ಲಿಯೂ ಇಂತಹ ನೀಚನೊಬ್ಬನನ್ನು ನಂಬಿ ವಿವಾಹವಾಗಿದ್ದಳು. ಆದರೆ ಈತನ ಕಣ್ಣ ಇದ್ದದ್ದು ಆಕೆಯ ಆಸ್ತಿಯ ಮೇಲೆ ಅಷ್ಟೆ.
ಕ್ರಿಸ್ ಮಸ್ ನಂದು ವಿದ್ಯುತ್ ಅಲಂಕಾರ ಮಾಡುತ್ತಿದ್ದಾಗ ತನ್ನ ಪತ್ನಿಗೆ ಶಾಕ್ ಹೊಡೆದಿದೆ ಎಂದು ಮಹಿಳೆಯೊಬ್ಬರನ್ನು ಅರುಣ್ ಎಂಬಾತ ಆಸ್ಪತ್ರೆಗೆ ದಾಖಲಿಸಿದ್ದ. ಆದರೆ, ವೈದ್ಯರು ಆಕೆಯ ದೇಹವನ್ನು ಗಮನಿಸುತ್ತಿದ್ದಂತೆಯೇ ಅನುಮಾನಗೊಂಡಿದ್ದು, ತಕ್ಷಣವೇ ಪೊಲೀಸರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದರು. ತಕ್ಷಣವೇ ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು ಪತಿ ಅರುಣ್ ನನ್ನು ಬಂಧಿಸಿದ್ದರು. ನಿನ್ನೆ ಈ ಘಟನೆ ಕೇರಳಾದ್ಯಂತ ಭಾರೀ ಸಂಚಲನ ಮೂಡಿಸಿತ್ತು. ಆದರೆ ಇಂದು ಮಹಿಳೆಯ ಸಾವಿನ ರಹಸ್ಯ ಬಯಲಾಗಿದೆ.
ಕರಕೋಣಂ ನಿವಾಸಿ 51 ವರ್ಷದ ಶಕಕುಮಾರಿ ಅವರನ್ನು ಅವರ 28 ವರ್ಷದ ಪತಿ ಅರುಣ್ ಉಸಿರುಕಟ್ಟಿಸಿ ಸಾಯಿಸಿದ್ದಾನೆ. ಶಕ ಕುಮಾರಿ ಅವರ ಆಸ್ತಿಯನ್ನು ದೋಚುವ ಉದ್ದೇಶದಿಂದ ಕಳೆದ 2 ತಿಂಗಳ ಹಿಂದೆಯಷ್ಟೇ ಶಕ ಅವರನ್ನು ಅರುಣ್ ವಿವಾಹವಾಗಿದ್ದ. ಈ ವಿವಾಹ ತನ್ನ ಮನೆಯವರಿಗೆ ಅರುಣ್ ತಿಳಿಸಿರಲಿಲ್ಲ. ಮದುವೆಯ ಬಳಿಕ ಇವರಿಬ್ಬರ ಫೋಟೋ ಲೀಕ್ ಆಗಿದ್ದು, ಇದರಿಂದಾಗಿ ಅರುಣ್ ಕೋಪಗೊಂಡಿದ್ದ.
ಫೋಟೋ ಲೀಕ್ ಆದ ಬಳಿಕ ನಿನಗಿಂತಲೂ ಹೆಚ್ಚು ವಯಸ್ಸಿನ ಮಹಿಳೆನ್ನು ಮದುವೆಯಾಗಿದ್ದಿ ಎಂದು ಸ್ನೇಹಿತರು ಕೂಡ ಹೀಯಾಳಿಸಿದಾಗ ಅರುಣ್ ಸಂಪೂರ್ಣವಾಗಿ ಬದಲಾಗಿ ಬಿಟ್ಟಿದ್ದ, ಇದರಿಂದಾಗಿ ಚೆನ್ನಾಗಿದ್ದ ಇವರ ಸಂಸಾರದಲ್ಲಿ ಬಿರುಗಾಳಿಯೇ ಎದ್ದಿದೆ. 51ವರ್ಷದ ಶಕ ಕುಮಾರಿ ಪತಿಯನ್ನು ಬಹಳ ಪ್ರೀತಿಸುತ್ತಿದ್ದರು. ಪತಿ ಸರಿ ಹೋಗಬೇಕು ಎಂದು ಅವರು ವೃತವನ್ನು ಮಾಡಲು ಆರಂಭಿಸಿದ್ದರು. ಆದರೆ ಕಂಡಕಂಡವರ ಮಾತಿನಿಂದ ಪ್ರಭಾವಿತನಾದ ಪಾಪಿ ಪತಿ ಅರುಣ್, ಶಕ ಅವರ ಕಥೆ ಮುಗಿಸಿಯೇ ಬಿಟ್ಟಿದ್ದಾನೆ.
ಪತ್ನಿಯನ್ನು ಉಸಿರುಕಟ್ಟಿಸಿ ಹತ್ಯೆ ಮಾಡಿದ್ದ ಅರುಣ್, ಬಳಿಕ ಹೈವೋಲ್ಟೇಜ್ ವಿದ್ಯುತ್ ನ್ನು ಆಕೆಯ ದೇಹಕ್ಕೆ ಪ್ರವಹಿಸಿದ್ದಾನೆ. ವಿಧಿ ವಿಜ್ಞಾನ ಪರೀಕ್ಷೆಯಲ್ಲಿ, ಮಹಿಳೆಯು ಮಲಗುವ ಕೋಣೆಯಲ್ಲಿ ರಕ್ತದ ಕಲೆ ಪತ್ತೆಯಾಗಿದೆ ಎನ್ನುವುದು ತಿಳಿದು ಬಂದಿದೆ. ಶಕ ಹತ್ಯೆಗೆ ಸಂಬಂಧಿಸಿದಂತೆ ಇನ್ನಷ್ಟು ಮಾಹಿತಿಗಳಿಗಾಗಿ ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಕಾಯುತ್ತಿದ್ದಾರೆ. ಆ ಬಳಿಕ ಮುಂದಿನ ಕ್ರಮ ಜರಗಿಸಲಿದ್ದಾರೆ. ಅರುಣ್ ಕೃತ್ಯಕ್ಕೆ ಜನ ಹಿಡಿ ಶಾಪ ಹಾಕುತ್ತಿದ್ದಾರೆ.