ಮದ್ವೆ ಮುಗಿಸಿ ಬರುವಾಗ ದುರಂತ: ದೋಣಿ ಮುಳುಗಿ 103 ಮಂದಿ ಸಾವು
ವಿವಾಹ ಕಾರ್ಯಕ್ರಮ ಮುಗಿಸಿ ಮರಳಿ ಬರುವಾಗ ದೋಣಿಯೊಂದು ನೀರಲ್ಲಿ ಮಗುಚಿ ಬಿದ್ದು ಮಕ್ಕಳೂ ಸೇರಿದಂತೆ ಕನಿಷ್ಠ 103 ಮಂದಿ ಮೃತಪಟ್ಟಿದ್ದಾರೆ.
ಕ್ವಾರಾ ರಾಜ್ಯ ರಾಜಧಾನಿ ಇಲೋರಿನ್‌ನಿಂದ 160 ಕಿ.ಮೀ. ದೂರ ಇರುವ ಕ್ವಾರಾ ರಾಜ್ಯದ ಪಟೇಗಿ ಜಿಲ್ಲೆಯ ನೈಗರ್ ನದಿಯಲ್ಲಿ ಜನರಿಂದ ತುಂಬಿದ್ದ ದೋಣಿಯು ಮಗುಚಿ ಬಿದ್ದು ನದಿಯಲ್ಲಿ ಕಾಣೆಯಾಗಿತ್ತು. ಸುಮಾರು 300 ಮಂದಿಯಿಂದ ಕಿಕ್ಕಿರಿದು ತುಂಬಿದ್ದ ದೋಣಿಯಲ್ಲಿ ತೆರಳುವಾಗ ನದಿಯಲ್ಲಿ ದೋಣಿಗೆ ದೊಡ್ಡ ದಿಮ್ಮಿಯೊಂದು ಬಡಿದು ಅದು ಇಬ್ಭಾಗವಾಗಿದೆ.
ನೈಗರ್ ರಾಜ್ಯದ ನೆರೆ ಗ್ರಾಮವಾದ ಎಗ್ಬೋಟಿಯಲ್ಲಿ ವಿವಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ನದಿಯಲ್ಲಿ ಮುಳುಗಿರುವ ಬಹುತೇಕರು ವಿವಿಧ ಗ್ರಾಮಗಳಲ್ಲಿನ ಸಂಬಂಧಿಕರಾಗಿದ್ದಾರೆ. ಇವರೆಲ್ಲರೂ ಒಟ್ಟಾಗಿ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇವರೆಲ್ಲ ಮೋಟರ್ ಬೈಕ್‌ನಲ್ಲಿ ವಿವಾಹ ಕಾರ್ಯಕ್ರಮಕ್ಕೆ ಆಗಮಿಸಿದ್ದರಾರಾದರೂ, ಭಾರಿ ಮಳೆ ಸುರಿದು ರಸ್ತೆಯಲ್ಲಿ ಮಳೆ ನೀರು ಪ್ರವಾಹ ಸ್ವರೂಪ ಪಡೆದಿದ್ದರಿಂದ ಅವರೆಲ್ಲ ಸ್ಥಳೀಯವಾಗಿ ನಿರ್ಮಾಣಗೊಂಡಿದ್ದ ದೋಣಿಯಲ್ಲಿ ತೆರಳಿದ್ದರು.
ಗ್ರಾಮಸ್ಥರು ಮೊದಲಿಗೆ 50 ಮಂದಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾದರು. ಆ ಆರಂಭದಲ್ಲಿನ ಪ್ರಯತ್ನವು ನಿಧಾನ ಹಾಗೂ ತೀರಾ ಕ್ಲಿಷ್ಟಕರವಾಗಿತ್ತು ಎಂದು ಲುಕ್ಪಾಡಾ ಹೇಳಿದ್ದಾರೆ.
ಈ ಅಪಘಾತವು ನೈಜೀರಿಯಾ ಇತಿಹಾಸದಲ್ಲೇ ದೊಡ್ಡ ದೋಣಿ ದುರಂತವಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw