ಸಂಜೆಯ ಸಂದೇಶ ಬರಲಿಲ್ಲ! | ಆಟ ಇನ್ನೂ ಮುಗಿದಿಲ್ಲ, ನಾಳೆಗೆ ಶಿಫ್ಟ್ ಆಗುತ್ತಾ ಸಿಎಂ ಬದಲಾವಣೆ ಹೈಡ್ರಾಮಾ?
ಬೆಂಗಳೂರು: ಸಿಎಂ ಬದಲಾವಣೆ ಆಟ ನಾಳೆಗೆ ಮುಂದುವರಿಯುವ ಸಾಧ್ಯತೆಗಳು ಕಂಡು ಬಂದಿದೆ. ಇಂದು ರಾತ್ರಿ ಅಥವಾ ನಾಳೆ ಬೆಳಗ್ಗಿನೊಳಗೆ ಈ ಬಗ್ಗೆ ಸಿಎಂ ಯಡಿಯೂರಪ್ಪನವರಿಗೆ ಸ್ಪಷ್ಟ ಸಂದೇಶ ಹೈಕಮಾಂಡ್ ನಿಂದ ಲಭಿಸಲಿದೆ.
ಬೆಳಗಾವಿ ಪ್ರವಾಸದಿಂದ ಬೆಂಗಳೂರಿನ ತಮ್ಮ ಕಾವೇರಿ ನಿವಾಸಕ್ಕೆ ಆಗಮಿಸಿದ ಸಿಎಂ ಯಡಿಯೂರಪ್ಪ ಮಾಧ್ಯಮಗಳ ಜೊತೆಗೆ ಮಾತನಾಡುತ್ತಾ, ಇಂದು ರಾತ್ರಿ ಅಥವಾ ನಾಳೆ ಬೆಳಗ್ಗೆ ಹೈಕಮಾಂಡ್ ಸಂದೇಶ ಬರಲಿದೆ ಎಂದು ತಿಳಿಸಿದರು.
ವರಿಷ್ಠರ ಆದೇಶವನ್ನು ಕಾದುನೋಡುವುದಾಗಿ ತಿಳಿಸಿದ ಯಡಿಯೂರಪ್ಪ, ಹೈಕಮಾಂಡ್ ಸಿಎಂ ಆಗಿ ಮುಂದುವರಿಯಲು ಹೇಳಿದರೆ ಮುಂದುವರಿಯುತ್ತೇನೆ. ರಾಜೀನಾಮೆ ನೀಡಲು ಹೇಳಿದರೆ, ರಾಜೀನಾಮೆ ನೀಡುವುದಾಗಿ ಅವರು ಹೇಳಿದರು.
ಇನ್ನೂ ಪಕ್ಷಕ್ಕಾಗಿ 15 ವರ್ಷಗಳ ಕಾಲ ದುಡಿಯುವುದಾಗಿ ಸಿಎಂ ಯಡಿಯೂರಪ್ಪನವರು ಹೇಳಿದ್ದಾರೆ. ಇಂದು ಸಂಜೆ ಹೈಕಮಾಂಡ್ ಸಂದೇಶ ಬರುತ್ತದೆ ಎಂದು ಬಿಜೆಪಿ ನಾಯಕರು ಸೇರಿದಂತೆ ಎಲ್ಲರೂ ನಿರೀಕ್ಷಿಸಿದ್ದರು. ಆದರೆ, ಸದ್ಯದ ಮಾಹಿತಿಯ ಪ್ರಕಾರ ಸಿಎಂ ಯಡಿಯೂರಪ್ಪ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಸಿಎಂ ಯಡಿಯೂರಪ್ಪನವರು ಇನ್ನೆರಡು ದಿನ ಅಥವಾ ಇನ್ನೊಂದು ವಾರ ಮುಂದುವರಿಯುವ ಸಾಧ್ಯತೆಗಳಿದ್ದು, ನಾಲ್ಕು ಬಾರಿ ಸಿಎಂ ಆಗಿ ಕಾರ್ಯನಿರ್ವಸಿದ ಬಿಜೆಪಿಯ ಹಿರಿಯ ನಾಯಕ ಯಡಿಯೂರಪ್ಪನವರನ್ನು ಗೌರವ ಪೂರ್ವಕವಾಗಿ ವಿದಾಯ ಹೇಳಲು ಹೈಕಮಾಂಡ್ ಮುಂದಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.
ಇನ್ನಷ್ಟು ಸುದ್ದಿಗಳು…
ಮಠಾಧಿಪತಿಗಳಿಗೆ ಸಿಎಂ ಆಗುವ ಕನಸು | ಮಠಾಧಿಪತಿಗಳನ್ನು ಕರ್ನಾಟಕದ ಮುಖ್ಯಮಂತ್ರಿ ಮಾಡಿ ಎಂದ ಸ್ವಾಮೀಜಿ
ಪತಿಯ ಜೊತೆಗೆ ಜಗಳವಾಡಿ, ತನ್ನ ನಾಲ್ವರು ಮಕ್ಕಳನ್ನು ಬಾವಿಗೆ ತಳ್ಳಿದ ಪಾಪಿ ತಾಯಿ
ಪ್ರೇಯಸಿಯ ಮನೆಗೆ ಬಂದಿದ್ದ ಯುವಕನನ್ನು ಥಳಿಸಿ, ಮರ್ಮಾಂಗ ಕತ್ತರಿಸಿ ಭೀಕರ ಹತ್ಯೆ!
ಮಹಾನಗರ ಪಾಲಿಕೆ ಆಯುಕ್ತರ ಮನೆಯ ಮುಂದೆ ಟ್ರ್ಯಾಕ್ಟರ್ ನಲ್ಲಿ ಕಸ ತಂದು ಸುರಿದ ಶಾಸಕ!
ಮಾಟಮಂತ್ರ ಮಾಡುತ್ತಿದ್ದಾಳೆಂದು ಆರೋಪಿಸಿ ಬುಡಕಟ್ಟು ಮಹಿಳೆಯ ಶಿರಚ್ಛೇದನ!